ಲಕ್ನೋ: 100 ವರ್ಷದ ಅಜ್ಜಿಯ ಮೇಲೆ ಯುವಕನೊಬ್ಬ ಅತ್ಯಾಚಾರಗೈದಿರುವ ಘಟನೆ ಉತ್ತರ ಪ್ರದೇಶ ರಾಜ್ಯದ ಮೀರತ್ ಜಿಲ್ಲೆಯ ಜಾನಿ ಗ್ರಾಮದಲ್ಲಿ ಇಂದು ನಡೆದಿದೆ.
23 ವರ್ಷದ ಅಂಕಿತ್ ಪುನಿಯಾ ಎಂಬಾತನೇ ಕಾಮುಕ ಯುವಕ. ಅಜ್ಜಿ ಮನೆಯಲ್ಲಿದ್ದಾಗ ಕುಡಿದ ಮತ್ತಿನಲ್ಲಿ ಬಂದ ಅಂಕಿತ್ ಅತ್ಯಾಚಾರಗೈದಿದ್ದಾನೆ. ಈ ವೇಳೆ ಅಜ್ಜಿಯ ಕಿರುಚಾಟ ಮತ್ತು ಅಳುತ್ತಿರುವುದನ್ನು ಕೇಳಿದ ಸ್ಥಳೀಯರು ಪರಾರಿಯಾಗುತ್ತಿದ್ದ ಯುವಕನನ್ನು ಹಿಡಿದಿದ್ದಾರೆ.
ಅಜ್ಜಿ ಜಾನಿ ಗ್ರಾಮದಲ್ಲಿ ತಮ್ಮ ಸೋದರನೊಂದಿಗೆ ವಾಸವಾಗಿದ್ದರು. ಸ್ಥಳೀಯರು ಆರೋಪಿ ಅಂಕಿತ್ ನನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ. ಆದರೆ ಆರೋಪಿ ಅಂಕಿತ್ ತಾನು ಮುಗ್ಧ ಯಾವುದೇ ಅಪರಾಧ ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂದು ಹೇಳಿಕೊಳ್ಳುತ್ತಿದ್ದಾನೆ.
ಘಟನೆ ಬಳಿಕ ಅಜ್ಜಿ ಆಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
9ರ ಬಾಲಕನ ಮೇಲೆ 16ರ ಬಾಲಕನಿಂದ ಲೈಂಗಿಕ ದೌರ್ಜನ್ಯ! https://t.co/hO6qpgwZy0#Bengaluru #Crime #KannadaNews #Police pic.twitter.com/5PfqletTt0
— PublicTV (@publictvnews) October 30, 2017
ಸೆಕ್ಸ್ ವಿಡಿಯೋ ತೋರಿಸಿ ಅತ್ಯಾಚಾರಗೈದು, ಕ್ಯಾಂಡಲ್ ನಿಂದ ಸುಟ್ಟ ಕ್ರೂರಿ ಚಿಕ್ಕಪ್ಪ https://t.co/QiZCpYk56W#Rape #Uncle #sexualharassment pic.twitter.com/nD3IV1dbuU
— PublicTV (@publictvnews) October 30, 2017
100-year-old woman raped in an Uttar Pradesh village, dies https://t.co/AGV46LKfV5 pic.twitter.com/cS7cp7hVbB
— NDTV (@ndtv) October 30, 2017