ಬೆಂಗಳೂರು: ಸಾರಿಗೆ ನೌಕರರಿಗೆ (Transport Employees) ರಾಜ್ಯ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. 170 ಕೋಟಿ ವೇತನ ಹಿಂಬಾಕಿಯನ್ನು ಸರ್ಕಾರ ಬಿಡುಗಡೆ ಮಾಡಿದೆ.
26 ತಿಂಗಳ ವೇತನ ಹಿಂಬಾಕಿಯ 1271 ಕೋಟಿ ರೂಪಾಯಿ ಕೊಡಬೇಕಿತ್ತು. ಈ ಹಿಂದೆ ಸರ್ಕಾರ 450 ಕೋಟಿ ಬಿಡುಗಡೆ ಮಾಡಿತ್ತು. 821 ಕೋಟಿ ಹಿಂಬಾಕಿಯಲ್ಲಿ ಇಂದು ಮತ್ತೆ 170 ಕೋಟಿ ಬಿಡುಗಡೆ ಮಾಡಿದೆ. ಇದನ್ನೂ ಓದಿ: ರಾಜ್ಯದ ರೇಷನ್ ಕಾರ್ಡ್‌ದಾರರಿಗೆ ಶಾಕಿಂಗ್ ಸುದ್ದಿ; ಇ-ಕೆವೈಸಿ ಮಾಡದಿದ್ರೆ ಕಾರ್ಡ್‌ನಿಂದ ಹೆಸರು ಡಿಲೀಟ್ ಫಿಕ್ಸ್
ಉಳಿದ 651 ಕೋಟಿಯನ್ನು ಹಂತ ಹಂತವಾಗಿ ಬಿಡುಗಡೆ ಮಾಡುವ ಭರವಸೆಯನ್ನು ಸಾರಿಗೆ ಸಚಿವರು ನೀಡಿದ್ದಾರೆ. ಸಾರಿಗೆ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕಲ್ಪಿಸಲಾಗುವುದು. ನಾಲ್ಕು ನಿಗಮಗಳಿಗೆ ಯೋಜನೆ ವಿಸ್ತರಣೆ ಆಗಲಿದೆ ಎಂದು ಉಚಿತ ವೈದ್ಯಕೀಯ ಸೇವೆ ನೀಡುವ ಭರವಸೆಯನ್ನು ಸಾರಿಗೆ ಸಚಿವರು ನೀಡಿದ್ದಾರೆ.

