ಬೆಂಗಳೂರು: ರಾಜ್ಯದ ಪಡಿತರ ಚೀಟಿದಾರರಿಗೆ ಶಾಕಿಂಗ್ ಸುದ್ದಿ ಸಿಕ್ಕಿದೆ. ಸರ್ಕಾರದ ಆದೇಶ ಪಾಲಿಸದಿದ್ದರೆ ರೇಷನ್ ಕಾರ್ಡ್‌ನಲ್ಲಿ (Ration Card) ಹೆಸರು ಡಿಲೀಟ್ ಆಗಲಿದೆ.
ರೇಷನ್ ಕಾರ್ಡ್‌ದಾರರು ಇ-ಕೆವೈಸಿ (e-KYC) ಮಾಡಿಸಬೇಕು ಎಂದು ಆರೋಗ್ಯ ಇಲಾಖೆ ಕಳೆದ ತಿಂಗಳು ಆದೇಶ ಮಾಡಿತ್ತು. ಆದರೆ, ಒಂದೂವರೆ ತಿಂಗಳಾದ್ರು 10% ಜನ ಕೂಡ ಆದೇಶ ಪಾಲನೆ ಮಾಡಿಲ್ಲ. ರೇಷನ್ ಕಾರ್ಡ್‌ನಲ್ಲಿ ಹೆಸರು ಡಿಲೀಟ್ ಆದರೆ ಗ್ಯಾರಂಟಿ ಯೋಜನೆ ಸೌಲಭ್ಯ ಕೂಡ ಸಿಗಲ್ಲ. ಇದನ್ನೂ ಓದಿ: ವಿಧಾನ ಪರಿಷತ್ ಸಭಾಪತಿಯಾಗಿ ಸಲೀಂ ಅಹಮದ್ ಆಯ್ಕೆ
2.67 ಕೋಟಿ ರೇಷನ್ ಕಾರ್ಡ್ ಪೈಕಿ ಇ-ಕೆವೈಸಿ ಆಗಿರೋದು ಬರೀ 26.03 ಲಕ್ಷ ಮಾತ್ರ. ಬರೀ 9.73% ಅಷ್ಟೇ ಆಗಿದೆ. ರೇಷನ್ ಕಾರ್ಡ್‌ನಲ್ಲಿ ಇರುವ ಕುಟುಂಬದ ಸದಸ್ಯರು ಎಲ್ಲರೂ ನ್ಯಾಯಬೆಲೆ ಅಂಗಡಿಗೆ ತೆರಳಿ ಬಯೋಮೆಟ್ರಿಕ್ ನೀಡಿ ಇ-ಕೆವೈಸಿ ಮಾಡಿಸಲೇಬೇಕು. ಆದರೆ, ಜನರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.
ಇ-ಕೆವೈಸಿ ಮಾಡಿಸುವುದಕ್ಕೆ ಸೆಪ್ಟೆಂಬರ್ ವರೆಗೂ ಅವಕಾಶ ಇದೆ. ಒಂದು ವೇಳೆ ಮಾಡದಿದ್ದರೆ ಹೆಸರು ಡಿಲೀಟ್ ಆಗಲಿದೆ. ಇ-ಕೆವೈಸಿ ಆಗದಿದ್ದರೆ, ಗ್ಯಾರಂಟಿ ಯೋಜನೆಗಳಿಂದ ವಂಚಿತರಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ವರದಕ್ಷಿಣೆಗೆ ಬೆಳಗಾವಿ ಬಂಜಾರ ಸಮಾಜ ಬ್ರೇಕ್: ನಿಯಮ ಮೀರಿದರೆ 11 ಲಕ್ಷ ದಂಡ
ಗೃಹಲಕ್ಷ್ಮಿ ಪರಿಷ್ಕರಣೆಗೆ ಆಹಾರ ಇಲಾಖೆಯಿಂದ ಫಲಾನುಭವಿಗಳ ಮಾಹಿತಿ ಪಡೆಯೋದಕ್ಕೆ ಸಿಎಂ ಸೂಚನೆ ಕೊಟ್ಟಿದ್ದಾರೆ. ಆಹಾರ ಇಲಾಖೆಯಡಿ ಬಯೋಮೆಟ್ರಿಕ್, ಇ-ಕೆವೈಸಿ ಆಗದಿದ್ದರೆ ಗೃಹಲಕ್ಷ್ಮಿ ಫಲಾನುಭವಿ ಆಗೋದು ಅನುಮಾನ. ಗ್ಯಾರಂಟಿ ಯೋಜನೆಯಿಂದ ವಂಚಿತರಾಗಬೇಕಾಗುತ್ತದೆ.
