– ಕ್ಯೂಬಾ ಕ್ರಾಂತಿಕಾರಿ ನಾಯಕ ಫಿಡೆಲ್ ಕಾಸ್ಟ್ರೋ ಆಲಿಂಗನದ ವೀಡಿಯೋ ಪೋಸ್ಟ್
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ವಿದೇಶಿ ನಾಯಕರನ್ನ ಭೇಟಿಯಾದಾಗ ಅಪ್ಪಿಕೊಳ್ಳುವ ರಾಜತಾಂತ್ರಿಕ ಶೈಲಿಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿರುವುದು ಇದೀಗ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ರಾಹುಲ್ ಗಾಂಧಿ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ಸಂಸದ ನಿಶಿಕಾಂತ್ ದುಬೆ (Nishikant Dubey), ಕಾಂಗ್ರೆಸ್‌ನ ಹಿಂದಿನ ನಾಯಕರ ರಾಜತಾಂತ್ರಿಕ ಭೇಟಿಯ ಚಿತ್ರಗಳನ್ನು ಮುಂದಿಟ್ಟುಕೊಂಡು ತೀವ್ರ ವಾಗ್ದಾಳಿ ನಡೆಸಿದ್ದಾರೆ.
Indira Gandhi hugging Fidel Castro
Hope Rahul Gandhi don’t make a sexist joke about this pic.twitter.com/Zdd0mMfwuw
— Rishi Bagree (@rishibagree) August 13, 2026
‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಕ್ಯೂಬಾ ಕ್ರಾಂತಿಕಾರಿ ನಾಯಕ ಫಿಡೆಲ್ ಕ್ಯಾಸ್ಟ್ರೋ ಹಾಗೂ ಪ್ಯಾಲೆಸ್ತೀನ್ ನಾಯಕ ಯಾಸರ್ ಅರಾಫತ್ ಅವರನ್ನ ಭೇಟಿಯಾದ ಸಂದರ್ಭದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರೊಂದಿಗೆ, ಸಂಸತ್‌ನಲ್ಲಿ 8 ವರ್ಷಗಳ ಹಿಂದೆ ರಾಹುಲ್ ಗಾಂಧಿ (Rahul Gandhi) ಅವರು ಪ್ರಧಾನಿ ಮೋದಿ ಅವರನ್ನು ಅಪ್ಪಿಕೊಂಡಿದ್ದ ಫೋಟೊ ಮತ್ತು ವಿಡಿಯೋ ಕೂಡ ಹರಿಬಿಡಲಾಗಿದೆ.
ಈ ಚಿತ್ರಗಳೊಂದಿಗೆ ದುಬೆ, ರಾಹುಲ್ ಗಾಂಧಿ ಅವರನ್ನು ವ್ಯಂಗ್ಯವಾಗಿ ಟೀಕಿಸಿದ್ದು, ಅವರ ಹೇಳಿಕೆಯ ಹಿಂದಿನ ಉದ್ದೇಶವನ್ನೇ ಪ್ರಶ್ನಿಸಿದ್ದಾರೆ. ಇದೇ ವೇಳೆ, ಇಂದಿರಾ ಗಾಂಧಿ ಹಾಗೂ ಫಿಡೆಲ್ ಕ್ಯಾಸ್ಟ್ರೋ ಭೇಟಿಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
#WATCH | Delhi: Lok Sabha LoP and Congress MP Rahul Gandhi says, “I don’t know where it came from; this idea got into their heads. I don’t know who put it there or where it came from, the idea that foreign policy means hugging politicians. I was young. We went to America. Since… pic.twitter.com/5G3j1osvvT
— ANI (@ANI) August 13, 2026
ಇದಕ್ಕೂ ಮುನ್ನ ಗುರುವಾರ ನಡೆದ ಕಾಂಗ್ರೆಸ್‌ನ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಪ್ರಧಾನಿ ಮೋದಿಯವರ ವಿದೇಶಾಂಗ ನೀತಿಯನ್ನ ಟೀಕಿಸಿದ್ದರು. ʻವಿದೇಶಾಂಗ ನೀತಿ ಎಂದರೆ ವಿದೇಶಿ ನಾಯಕರನ್ನ ಅಪ್ಪಿಕೊಳ್ಳುವುದು ಎಂಬ ಕಲ್ಪನೆ ಅವರಿಗೆ ಎಲ್ಲಿಂದ ಬಂತು ಎಂಬುದು ನನಗೆ ಅರ್ಥವಾಗುವುದಿಲ್ಲʼ ಎಂದು ವ್ಯಂಗ್ಯವಾಡಿದ್ದರು. ತಮ್ಮ ಮಾತನ್ನು ವಿವರಿಸಲು ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಅವರನ್ನ ಅಪ್ಪಿಕೊಂಡಿದ್ದರು. ಬಳಿಕ ದೀಕ್ಷಿತ್ ಅವರು, ʻಮೆಲೋನಿ ಎಂದುಕೊಂಡು ಅಪ್ಪಿಕೊಂಡಿರಲಿಲ್ಲ ತಾನೆ?ʼ ಎಂದು ಪ್ರಶ್ನಿಸಿದ್ದು, ಅದಕ್ಕೆ ರಾಹುಲ್ ಗಾಂಧಿ ʻನಾನು ಇನ್ನೂ ಆ ಹಂತಕ್ಕೆ ಬಂದಿಲ್ಲʼ ಎಂದು ಪ್ರತಿಕ್ರಿಯಿಸಿದ್ದರು.
.@RahulGandhi, when will you grow up? Running India requires mature leadership, not amateur dramatics. Calling a democratically elected government ‘jokers and clowns’ proves you are out of your depth. By insulting the Prime Minister, you mock millions of voters who chose Modi ji…
— Pralhad Joshi (@JoshiPralhad) August 13, 2026
ರಾಹುಲ್ ಗಾಂಧಿ ಅವರ ಈ ಮಾತುಗಳಿಗೆ ಬಿಜೆಪಿ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ʻರಾಹುಲ್ ಗಾಂಧಿ, ನೀವು ಯಾವಾಗ ಪ್ರಬುದ್ಧರಾಗುತ್ತೀರಿ?ʼ ಎಂದು ಪ್ರಶ್ನಿಸಿ, ಪ್ರಧಾನಿಯನ್ನ ಅವಮಾನಿಸುವ ಮೂಲಕ ಪ್ರಧಾನಿ ಮೋದಿಯನ್ನ ಆಯ್ಕೆ ಮಾಡಿದ ಕೋಟ್ಯಂತರ ಮತದಾರರನ್ನೂ ಅವಮಾನಿಸುತ್ತಿದ್ದೀರಿ ಎಂದು ಟೀಕಿಸಿದ್ದಾರೆ. ಇದೇ ವೇಳೆ, ಬಾನ್ಸುರಿ ಸ್ವರಾಜ್ ಅವರು ರಾಹುಲ್ ಗಾಂಧಿಯವರ ಭಾಷೆ ಲೋಕಸಭೆಯ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ತಕ್ಕದ್ದಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷೆ ವನತಿ ಶ್ರೀನಿವಾಸನ್ ಕೂಡ ರಾಹುಲ್ ಗಾಂಧಿ ಅವರ ಹೇಳಿಕೆಯನ್ನ ಖಂಡಿಸಿದ್ದಾರೆ. ರಾಜಕೀಯ ಪಕ್ಷಗಳಿಗೆ ವಿರೋಧಿಗಳನ್ನ ಟೀಕಿಸುವ ಹಕ್ಕಿದೆ, ಆದರೆ ಮಹಿಳೆಯರನ್ನು ಅವಮಾನಿಸುವ ರೀತಿಯಲ್ಲಿ ಹಾಗೂ ಸಾರ್ವಜನಿಕ ಜೀವನವನ್ನು ಅಸಭ್ಯ ಹಾಸ್ಯಕ್ಕೆ ಇಳಿಸುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ. ಹೀಗಾಗಿ ರಾಹುಲ್ ಗಾಂಧಿ ಅವರ ‘ಹಗ್’ ಹೇಳಿಕೆ ಇದೀಗ ಬಿಜೆಪಿ–ಕಾಂಗ್ರೆಸ್ ನಡುವಿನ ಮತ್ತೊಂದು ರಾಜಕೀಯ ವಾಕ್ಸಮರಕ್ಕೆ ವೇದಿಕೆಯಾಗಿದೆ.

