Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮೀಸಲಾತಿ ಫೈಟ್ ಮಧ್ಯೆ ‘ಹಿಂದ’ ಪಾಲಿಟಿಕ್ಸ್ – ಸಿದ್ದು ಬಣದ ತಂತ್ರಗಾರಿಕೆಗೆ ಕಾಂಗ್ರೆಸ್ಸಲ್ಲೇ ಅತೃಪ್ತಿ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಮೀಸಲಾತಿ ಫೈಟ್ ಮಧ್ಯೆ ‘ಹಿಂದ’ ಪಾಲಿಟಿಕ್ಸ್ – ಸಿದ್ದು ಬಣದ ತಂತ್ರಗಾರಿಕೆಗೆ ಕಾಂಗ್ರೆಸ್ಸಲ್ಲೇ ಅತೃಪ್ತಿ!

Bengaluru City

ಮೀಸಲಾತಿ ಫೈಟ್ ಮಧ್ಯೆ ‘ಹಿಂದ’ ಪಾಲಿಟಿಕ್ಸ್ – ಸಿದ್ದು ಬಣದ ತಂತ್ರಗಾರಿಕೆಗೆ ಕಾಂಗ್ರೆಸ್ಸಲ್ಲೇ ಅತೃಪ್ತಿ!

Public TV
Last updated: February 11, 2021 8:44 pm
Public TV
Share
3 Min Read
hind Politics
SHARE

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೆರಡು ವರ್ಷ ಇರುವಂತೆಯೇ ರಾಜಕೀಯ ಪಕ್ಷಗಳ ತಂತ್ರಗಾರಿಕೆಗಳು ಮೆಲ್ಲಗೆ ಶುರುವಾಗಿವೆ. ಮೀಸಲಾತಿ ಹೋರಾಟದಲ್ಲಿ ಸಚಿವರೇ ತೊಡಗಿಕೊಂಡಿರುವ ಕಾರಣ ಆಡಳಿತಾರೂಢ ಬಿಜೆಪಿಯಲ್ಲಿ ಅಸಮಾಧಾನ ಹೊಗೆಯಾಡಲು ಶುರು ಮಾಡಿದೆ. ಈ ಬೆಳವಣಿಗೆಗಳ ಬೆನ್ನಲ್ಲೇ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಹಿಂದ’ ಹೋರಾಟಕ್ಕೆ ಮುಂದಾಗುತ್ತಾರೆ ಅನ್ನೋ ವದಂತಿ ದಟ್ಟವಾಗಿ ಹಬ್ಬಿದೆ.

Siddaramaiah 1

ಬುಧವಾರ ಮಾಜಿ ಸಚಿವ ಹಾಗೂ ಆಪ್ತೇಷ್ಠ ಎಚ್.ಸಿ. ಮಹದೇವಪ್ಪ ಅವರನ್ನು ಭೇಟಿಯಾದ ಬೆನ್ನಲ್ಲೇ ಈ ಸುದ್ದಿ ಇನ್ನಷ್ಟು ವೇಗ ಪಡೆದುಕೊಂಡಿದೆ. ಸಿದ್ದರಾಮಯ್ಯ ನಡೆಗೆ ಅವರ ಪಕ್ಷದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ ಎನ್ನಲಾಗಿದೆ. ಕಾಂಗ್ರೆಸ್‍ನ ಒಂದು ಬಣ ಪಕ್ಷದ ಅಧ್ಯಕ್ಷರಿಗೆ ದೂರು ಸಹ ನೀಡಿದೆ. ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಪಕ್ಷದ ಚೌಕಟ್ಟು ಮೀರುವಂತಿಲ್ಲ. ಜಾತಿ ಸಮಾವೇಶಗಳಿಂದ ಪಕ್ಷಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಸಿದ್ದರಾಮಯ್ಯ ಅಹಿಂದ ಎಂದು ಹೊರಟ್ರೇ ತಪ್ಪು ಸಂದೇಶ ರವಾನೆಯಾಗುತ್ತೆ. ಬೇರೆ ಸಮುದಾಯಗಳ ಮತ ಸಿಗುವುದು ಕಷ್ಟವಾಗುತ್ತೆ. ಪಕ್ಷ ಸಾಮಾಜಿಕ ನ್ಯಾಯದ ಪರ ಇದೆ.. ಇಂಥಾ ಹೊತ್ತಲ್ಲಿ ಪ್ರತ್ಯೇಕ ಜಾತಿ ಸಮಾವೇಶಗಳು ಬೇಕಿಲ್ಲ. ಇದನ್ನು ಹೈಕಮಾಂಡ್ ಮೂಲಕ ತಡೆಯಿರಿ ಎಂದು ಸಿದ್ದರಾಮಯ್ಯ ವಿರೋಧಿ ಬಣ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‍ಗೆ ದೂರು ನೀಡಿದೆ ಎಂದು ತಿಳಿದು ಬಂದಿದೆ.

HC Mahadevappa

ಈ ಬೆನ್ನಲ್ಲೇ ಸ್ಪಷ್ಟನೆ ನೀಡಿರೋ ಸಿದ್ದರಾಮಯ್ಯ, ನಾನು ‘ಹಿಂದ’ ಸಂಘಟನೆ, ಸಮಾವೇಶ ಮಾಡ್ತೀನಿ ಅಂತಾ ಎಲ್ಲೂ ಹೇಳಿಲ್ಲ. ಮಾಡೋದು ಇಲ್ಲ ಅಂತ ಹೇಳಿದ್ದಾರೆ. ಆದರೆ ಸಿದ್ದರಾಮಯ್ಯ ಆಪ್ತ ಗೆಳೆಯ ಮಾಜಿ ಮಂತ್ರಿ ಹೆಚ್‍ಸಿ ಮಹದೇವಪ್ಪ ಮಾತ್ರ, ನಿನ್ನೆ ಸಿದ್ದರಾಮಯ್ಯ ಜೊತೆ ಚರ್ಚೆ ಆಗಿರೋದು ನಿಜ. ಇದು ಅಹಿಂದ ಮಾದರಿ ಹೋರಾಟ ಅಂತಾ ಇಲ್ಲ. ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರ ಹಕ್ಕುಗಳಿಗೆ ಅನ್ಯಾಯವಾದರೆ ನಾವು ಹೋರಾಟಕ್ಕೆ ಇಳಿಯುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

DK Shivakumar 2

ನಮ್ಮ ಹೋರಾಟಗಳನ್ನು ಹಿಂದಿನ ರೀತಿಯ ಅಹಿಂದ ಹೋರಾಟ ಎಂದು ಕರೆಯಬೇಕಿಲ್ಲ. ಕಾಂಗ್ರೆಸ್ ಅನ್ನೋದೇ ಒಂದು ಚಳವಳಿ. ನಾವಿಬ್ಬರು ಪ್ರತ್ಯೇಕವಾಗಿ ಹೋರಾಟವೇನೂ ರೂಪಿಸುವ ಅಗತ್ಯವಿಲ್ಲ ಎಂದು ಮಹದೇವಪ್ಪ ಹೇಳಿದರು.

ಕಾಂಗ್ರೆಸ್ ಥಿಂಕ್ ಟ್ಯಾಂಕ್ ವಾದ ಏನು?
ಜಾತಿ ಸಮಾವೇಶಗಳು ಕಳೆದ ಚುನಾವಣೆಯಲ್ಲಿ ಪಕ್ಷಕ್ಕೆ ಲಾಭ ತಂದಿಲ್ಲ. ಜಾತಿ ಸಮಾವೇಶದಲ್ಲಿ ಸಿದ್ದರಾಮಯ್ಯ ಪಾಲ್ಗೊಂಡ್ರೂ, ಹಿಂದ ವರ್ಗದ ಹೆಚ್ಚು ಮತ ಸಿಕ್ಕಿಲ್ಲ. ಕಾಂಗ್ರೆಸ್‍ಗೆ ಸಣ್ಣ ಸಮುದಾಯಗಳ ಬೆಂಬಲ ಸಿಕ್ಕಿದೆ. ಆದರೆ ಹೆಚ್ಚು ಮತಗಳಿರುವ ಸಮುದಾಯಗಳನ್ನ ಸೆಳೆಯುವಲ್ಲಿ ವಿಫಲವಾಗಿತ್ತು. ಅಹಿಂದ ಸಮಾವೇಶಗಳಿಂದ ಮೇಲ್ವರ್ಗ ಮತ್ತಷ್ಟು ದೂರವಾಗುವ ಆತಂಕ ಕಾಂಗ್ರೆಸ್ ಕೆಲ ನಾಯಕರಿಗೆ ಎದುರಾಗಿದೆ ಎನ್ನಲಾಗ್ತಿದೆ.

Siddaramaiah 2

ಅಹಿಂದ ಹೋರಾಟ ಒಕ್ಕಲಿಗರ ಮತ ಸೆಳೆಯುವ ಡಿಕೆಶಿ ತಂತ್ರಕ್ಕೆ ಹಿನ್ನೆಡೆ ಆಗಬಹುದು. ಸಿಎಂ ಯಡಿಯೂರಪ್ಪ, ಮಾಜಿ ಪಿಎಂ ದೇವೇಗೌಡರು ನಿವೃತ್ತಿ ಅಂಚಿನಲ್ಲಿದ್ದು, ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯ ಸೆಳೆಯಲು ಇದು ಸಕಾಲ. ಜಾತಿ ಸಮಾವೇಶಗಳಿಗಿಂತ ಸಾರ್ವತ್ರಿಕ ಸಮಾವೇಶಗಳತ್ತ ಚಿತ್ತ ಹರಿಸಬೇಕು. ರೈತ, ಕಾರ್ಮಿಕ ಸಮಾವೇಶಗಳನ್ನು ಹೆಚ್ಚು ಹೆಚ್ಚು ನಡೆಸಬೇಕು. ವಿಷಯಾಧಾರಿತ ಹೋರಾಟಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಲಾಭ ಎಂದು ಒಂದು ವರ್ಗದ ಕೈ ನಾಯಕರು ವಾದ ಮಂಡಿಸುತ್ತಿದ್ದಾರೆ.

ಬಿಜೆಪಿ ವ್ಯಂಗ್ಯ: ಸಿದ್ದರಾಮಯ್ಯ ಬಣದ ‘ಹಿಂದ’ ಪಾಲಿಟಿಕ್ಸ್ ಗೆ ಬಿಜೆಪಿ ವ್ಯಂಗ್ಯವಾಡಿದೆ. ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಉನ್ನತ ಸ್ಥಾನಮಾನ ತಪ್ಪಿಸಿದವರು ಸಿದ್ದರಾಮಯ್ಯ. 2013ರಲ್ಲಿ ದಲಿತ ಪರಮೇಶ್ವರ್ ಸೋಲಿಸಿ, ಸಿಎಂ ಗಾದಿ ತಪ್ಪಿಸಿದವರು ಸಿದ್ದರಾಮಯ್ಯ. ಆದ್ರೇ ಈಗ ಅವರೇ ಹಿಂದ ನಾಟಕ ಮಾಡಲು ಸಜ್ಜಾಗಿದ್ದಾರೆ. ಇದು ಬಹಳ ಚನ್ನಾಗಿದೆ ಎಂದು ಟ್ವೀಟ್ ಮೂಲಕ ಲೇವಡಿ ಮಾಡಿದೆ.

ಸಚಿವ ರಮೇಶ್ ಜಾರಕಿಹೊಳಿ ಮಾತಾಡಿ, ಈಗ ಜಾತಿ, ಹಿಂದ ಏನೂ ಇಲ್ಲ. ಈಗೇನಿದ್ರೂ ಹಿಂದುತ್ವ ಮಾತ್ರ ಎಂದು ಸಿದ್ದರಾಮಯ್ಯಗೆ ಟಾಂಗ್ ಕೊಟ್ರು. ಸಿದ್ದರಾಮಯ್ಯನವರು ವಿಪಕ್ಷ ನಾಯಕರಾಗಿ ಹೊಸ ಯೋಚನೆ ಮಾಡ್ತಿದ್ದಾರೆ. ಅವರು ಅಹಿಂದ ಸಂಘಟನೆ ಮಾಡಲಿ ಅಂತಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಟಾಂಗ್ ನೀಡಿದ್ದಾರೆ.

TAGGED:Ahinda PoliticsbjpcongressDK Shivakumarhc mahadevappajdsPublic TVsiddaramaiahಅಹಿಂದ ಪಾಲಿಟಿಕ್ಸ್ಕಾಂಗ್ರೆಸ್ಜೆಡಿಎಸ್ಡಿ.ಕೆ.ಶಿವಕುಮಾರ್ಪಬ್ಲಿಕ್ ಟಿವಿಬಿಜೆಪಿಸಿದ್ದರಾಮಯ್ಯಹೆಚ್.ಸಿ.ಮಹದೇವಪ್ಪ
Share This Article
Facebook Whatsapp Whatsapp Telegram

Cinema news

Deepika Padukone Ranveer Singh
2ನೇ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ, ರಣವೀರ್‌ ಸಿಂಗ್‌ ದಂಪತಿ
Bollywood Cinema Latest Top Stories
darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood

You Might Also Like

Patahi Airport
Latest

ಬಿಹಾರದಲ್ಲಿ ಮತ್ತೊಂದು ಏರ್‌ಪೋರ್ಟ್‌ ನಿರ್ಮಾಣ – ಶೀಘ್ರದಲ್ಲೇ ವಿಮಾನ ಸೇವೆ ಆರಂಭ

Public TV
By Public TV
4 minutes ago
a man from Belthangady who was going to sabarimala temple fell from the train and died in kerala
Dakshina Kannada

ಶಬರಿಮಲೆ ಯಾತ್ರೆಗೆ ತೆರಳಿದ್ದ ಬೆಳ್ತಂಗಡಿಯ ವ್ಯಕ್ತಿ ರೈಲಿನಿಂದ ಬಿದ್ದು ದುರ್ಮರಣ

Public TV
By Public TV
11 minutes ago
Donald Trump Asim Munir Shehbaz Sharif
Latest

ಅಮೆರಿಕದ ವಿರುದ್ಧ ಮುನೀರ್‌ ಡಬಲ್‌ಗೇಮ್‌ – ಟ್ರಂಪ್‌ಗೆ ಗುಪ್ತಚರ ಸಂಸ್ಥೆಯಿಂದ ಎಚ್ಚರಿಕೆ

Public TV
By Public TV
27 minutes ago
Davanagere Kavya Murder Case
Crime

ಮಹಿಳೆ ಅನುಮಾನಾಸ್ಪದ ಸಾವು – ಪರಸ್ತ್ರೀ ಸಹವಾಸದಿಂದ ಹತ್ಯೆಗೈದ್ನಾ ಪತಿ?

Public TV
By Public TV
40 minutes ago
Pahalgam QR Code IdentificationS
Latest

ಪಹಲ್ಗಾಮ್‌ ನರಮೇಧಕ್ಕೆ 1 ವರ್ಷ – ಪ್ರವಾಸಿಗರ ರಕ್ಷಣೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳೇನು?

Public TV
By Public TV
1 hour ago
pm modi meeting
Latest

ದೇಶವನ್ನು ಉದ್ದೇಶಿಸಿ ಭಾಷಣ – ಮೋದಿ ವಿರುದ್ಧ ಕಾಂಗ್ರೆಸ್‌, ಸಿಪಿಎಂನಿಂದ ದೂರು

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?