ಬೆಂಗಳೂರು: ಕೋಪ ಸೆರಗಲ್ಲಿ ಬೆಂಕಿ ಕಟ್ಟಿಕೊಂಡ ಹಾಗೆ ಎಂಬ ಮಾತು ಅದೆಷ್ಟು ಸತ್ಯ ಅಲ್ವಾ? ಈ ಮಾತಿಗೆ ಪೂರಕವಾಗಿದೆ ಬೆಂಗಳೂರಿನ ಈ ಟೆಕ್ಕಿ ದಂಪತಿಯ ದುರಂತ ಅಂತ್ಯ ಪ್ರಕರಣ.

ಇತ್ತೀಚೆಗೆ ರಾಜಗೋಪಾಲ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ ಮಾಡಿಕೊಂಡಿದ್ದರ ಹಿಂದಿನ ಕಾರಣ ರಿವೀಲ್ ಆಗಿದೆ. ಇಬ್ಬರಿಗೂ ಅತಿಯಾದ ಕೋಪವೇ ಈ ದುರಂತಕ್ಕೆ ಕಾರಣ ಎಂಬುದು ತಿಳಿದು ಬಂದಿದೆ.
ಎರಡು ದಿನಗಳ ಹಿಂದೆ ಟೆಕ್ಕಿ ಸುಮಂತ್ ಜೈನ್ ತನ್ನ ಪತ್ನಿ ಪದ್ಮಾವತಿಯ ಕತ್ತುಹಿಸುಕಿ ಕೊಲೆ ಮಾಡಿ ತಾನು ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಟೆಕ್ಕಿ ದಂಪತಿ ಸಾವಿಗೆ ನಿಖರ ಕಾರಣ ತಿಳಿದಿರಲಿಲ್ಲ. ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ರಾಜಗೋಪಾಲ ನಗರ ಪೊಲೀಸರು ಘಟನೆ ಹಿಂದೆ ಕಾರಣದ ಬಗ್ಗೆ ತನಿಖೆ ನಡೆಸಿದಾಗ, ಇಬ್ಬರ ಅತಿಯಾದ ಕೋಪವೇ ಇದಕ್ಕೆ ಕಾರಣ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಹೆಂಡತಿ ಕೊಂದು ಗಂಡ ಆತ್ಮಹತ್ಯೆ
ಸುಮಂತ್ ಜೈನ್ ಚಿಕ್ಕಮಗಳೂರಿನಲ್ಲಿ ಕೆಲಸ ಮಾಡಿಸುತ್ತಿದ್ದರಂತೆ. ದಿನ ಬಿಟ್ಟು ದಿನ ಮನೆಗೆ ಬರುತ್ತಿದ್ದರು. ಉದ್ಯೋಗದ ಒತ್ತಡಕ್ಕೆ ಇಬ್ಬರ ನಡುವೆ ಮನಸ್ಥಾಪವಾಗಿತ್ತು. ಪತಿ ಮನೆಗೆ ಸರಿಯಾಗಿ ಬರುತ್ತಿಲ್ಲ ಎನ್ನುವ ಕಾರಣಕ್ಕೆ ಇಬ್ಬರ ನಡುವೆ ಜಗಳವಾಗಿದೆ. ಜಗಳ ವಿಕೋಪಕ್ಕೆ ಹೋದಾಗ ಕೊಲೆ ಆಗಿರುವ ಬಗ್ಗೆ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ವೃತ್ತಿಯಲ್ಲಿ ಇಬ್ಬರು ಇಂಜಿನಿಯರ್ ಆಗಿದ್ದರು, ಕೈತುಂಬ ಸಂಬಳ ಕೂಡ ಬರುತ್ತಿತ್ತು. ಇಬ್ಬರಿಗೂ ಇದ್ದ ಅತಿಯಾದ ಕೋಪ ದಂಪತಿಯ ದುರಂತ ಅಂತ್ಯಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಸೆಲ್ಫಿ ನೆಪದಲ್ಲಿ ಮಗುವನ್ನು ಸೇತುವೆ ಮೇಲಿಂದ ಯಮುನಾ ನದಿಗೆಸೆದ ಪಾಪಿ ತಂದೆ

