ಎಂಎಲ್‍ಎ ಚಾಲಕನ ಅವಾಂತರ- ಕುಡಿದು ವಾಹನ ಚಲಾಯಿಸಿ ಬೈಕ್‍ಗೆ ಗುದ್ದಿದ

1 Min Read

– ಸಂಡೇ ಲಾಕ್‍ಡೌನ್ ಟೈಮಲ್ಲಿ ಬೇಕಾಬಿಟ್ಟಿ ವಾಹನ ಚಾಲನೆ

ಬೆಂಗಳೂರು: ಶಾಸಕರ ಕಾರ್ ಚಾಲಕ ಕಂಠಪೂರ್ತಿ ಕುಡಿದು ಬೇಕಾಬಿಟ್ಟಿಯಾಗಿ ವಾಹನ ಚಲಾಯಿಸಿ ಬೈಕ್‍ಗೆ ಗುದ್ದಿರುವ ಘಟನೆ ನಗರದ ಹೊರ ವಲಯದ ನೆಲಮಂಗಲದಲ್ಲಿ ನಡೆದಿದೆ.

ನೆಲಮಂಗಲ ನಗರದ ಕುಣಿಗಲ್ ಸರ್ಕಲ್ ನಲ್ಲಿ ಘಟನೆ ನಡೆದಿದ್ದು, ಸಂಡೇ ಲಾಕ್‍ಡೌನ್ ಎಂಬುದನ್ನೂ ಲೆಕ್ಕಿಸದೆ ಕಂಠಪೂರ್ತಿ ಕುಡಿದು ಬೇಕಾಬಿಟ್ಟಿಯಾಗಿ ವಾಹನ ಚಾಯಿಸಿದ್ದಾನೆ. ಈ ವೇಳೆ ಮುಂದೆ ತೆರಳುತ್ತಿದ್ದ ದ್ವಿಚಕ್ರವಾಹನ್ಕೆ ಡಿಕ್ಕಿ ಹೊಡೆದಿದ್ದಾನೆ. ಗುದ್ದಿದ ರಭಸಕ್ಕೆ ಬೈಕ್ ಸವಾರರು ಹಾರಿ ಕೆಳಗೆ ಬಿದ್ದಿದ್ದು, ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

ಕಾರಿನ ಮೇಲೆ ಜಗಳೂರು ಶಾಸಕರ ಪಾಸ್ ಇದೆ. ಆದರೆ ಕಾರಿನಲ್ಲಿ ಶಾಸಕ ಇರಲಿಲ್ಲ. ಕಾರ್ ಕುಣಿಗಲ್ ಕಡೆಯಿಂದ ಬರುತ್ತಿತ್ತು ಎಂದು ಹೇಳಲಾಗಿದೆ. ಅಲ್ಲದೆ ಚಾಲಕ ಕಂಠಪೂರ್ತಿ ಕುಡಿದಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಾರನ್ನು ನೆಲಮಂಗಲ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *