ಡಾರ್ವಿನ್: ಆಸ್ಟ್ರೇಲಿಯಾ(Australia) ನೆಲದಲ್ಲಿ ಬಾಂಗ್ಲಾದೇಶ(Bangladesh) ಕ್ರಿಕೆಟ್ ತಂಡ ಐತಿಹಾಸಿಕ ಸಾಧನೆ ಮಾಡಿದೆ. ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ 9 ವಿಕೆಟ್‌ಗಳ ಅಮೋಘ ಜಯ ದಾಖಲಿಸಿ ಇತಿಹಾಸ ಬರೆದಿದೆ.

ಆಸೀಸ್ ನೆಲದಲ್ಲಿ 23 ವರ್ಷಗಳ ಸುದೀರ್ಘ ಕಾಯುವಿಕೆಯ ಬಳಿಕ ಬಾಂಗ್ಲಾದೇಶ ಗಳಿಸಿದ ಚೊಚ್ಚಲ ಟೆಸ್ಟ್ (Test) ಗೆಲುವು ಇದಾಗಿದೆ. ಈ ಗೆಲುವಿನೊಂದಿಗೆ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬಾಂಗ್ಲಾದೇಶ 1-0 ಮುನ್ನಡೆ ಸಾಧಿಸಿದೆ.
ಎರಡನೇ ಇನ್ನಿಂಗ್ಸ್‌ನಲ್ಲಿ 284 ರನ್‌ಗಳಿಗೆ ಆಸ್ಟ್ರೇಲಿಯಾ ಆಲೌಟ್ ಆಯ್ತು. 56 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ 1 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು. ಪಂದ್ಯದಲ್ಲಿ ಒಟ್ಟು 9 ವಿಕೆಟ್ ಕಬಳಿಸಿದ ಹಸನ್ ಮಹಮೂದ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
𝙃𝙞𝙨𝙩𝙤𝙧𝙞𝙘 𝙒𝙞𝙣 𝙛𝙤𝙧 𝘽𝙖𝙣𝙜𝙡𝙖𝙙𝙚𝙨𝙝 🔝
Australia ನೆಲದಲ್ಲಿ ಹೊಸ ಟೆಸ್ಟ್ ಅಧ್ಯಾಯದ ಶುಭಾರಂಭ! 2️⃣3️⃣ ವರ್ಷಗಳ ನಂತರ ಒಲಿದ ಈ ಐತಿಹಾಸಿಕ ಗೆಲುವಿನೊಂದಿಗೆ, 1️⃣-0️⃣ ಲೀಡ್ ಪಡೆದು Bangladesh ತಂಡದ ಗತ್ತಿನ ದರ್ಬಾರ್ ಶುರು!❤️🔥#AUSvBAN
[Darwin, Cameron Green, Najmul Hossain Shanto] pic.twitter.com/sp5jC1gF9B
— Star Sports Kannada (@StarSportsKan) August 16, 2026
ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ಬಾಂಗ್ಲಾದ ವೇಗಿ ಹಸನ್ ಮಹಮೂದ್ ಅವರ ಮಾರಕ ದಾಳಿಗೆ ತತ್ತರಿಸಿ ಕೇವಲ 198 ರನ್‌ಗಳಿಗೆ ಸರ್ವಪತನ ಕಂಡಿತು. ನಂತರ ಮೊದಲ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ, ಯುವ ಆರಂಭಿಕ ಆಟಗಾರ ತಂಜಿದ್ ಹಸನ್ ತಮೀಮ್ 101 ರನ್ ಅವರ ಶತಕ, ನಾಯಕ ನಜ್ಮುಲ್ ಹುಸೇನ್ ಶಾಂತೋ 84 ರನ್, ಹಾಗೂ ಮೆಹಿದಿ ಹಸನ್ ಮಿರಾಜ್ 65 ರನ್ ನೆರವಿನಿಂದ 426 ರನ್‌ಗಳ ಬೃಹತ್ ಮೊತ್ತ ಕಲೆಹಾಕಿ, 228 ರನ್‌ಗಳ ಮುನ್ನಡೆ ಪಡೆಯಿತು.
ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಪರ ಕ್ಯಾಮೆರಾನ್ ಗ್ರೀನ್ 104 ರನ್ ಹೊಡೆದು ಏಕಾಂಗಿ ಹೋರಾಟ ನಡೆಸಿದರೂ, ಮೆಹಿದಿ ಹಸನ್ ಮಿರಾಜ್ 5 ವಿಕೆಟ್ ಮತ್ತು ಹಸನ್ ಮಹಮೂದ್ 3 ವಿಕೆಟ್ ಕೀಳುವ ಮೂಲಕ 284 ರನ್‌ಗಳಿಗೆ ಆಲೌಟ್ ಆಯಿತು.
ಕೇವಲ 57 ರನ್‌ಗಳ ಸುಲಭ ಗುರಿ ಪಡೆದ ಬಾಂಗ್ಲಾದೇಶ, 4ನೇ ದಿನದಾಟದಲ್ಲಿ ಆರಂಭಿಕ ತಂಜಿದ್ ಹಸನ್ ವಿಕೆಟ್ ಕಳೆದುಕೊಂಡರೂ ಶಾದ್ಮನ್ ಇಸ್ಲಾಂ ಹಾಗೂ ಮೊಮಿನುಲ್ ಹಕ್ ಅವರ ಸಂಯಮದ ಆಟದೊಂದಿಗೆ 1 ವಿಕೆಟ್ ನಷ್ಟಕ್ಕೆ ಗುರಿ ಮುಟ್ಟಿ 9 ವಿಕೆಟ್‌ಗಳ ಐತಿಹಾಸಿಕ ಜಯ ದಾಖಲಿಸಿತು.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 198/10
ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್ 426/10
ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ 284/10
ಬಾಂಗ್ಲಾದೇಶ ಎರಡನೇ ಇನ್ನಿಂಗ್ಸ್ 57/1
