ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿ ಪವಿತ್ರಾಗೌಡ ರನ್ನ (Pavithra Gowda) ಬ್ಯಾರಕ್ ಶಿಫ್ಟ್ ಮಾಡಲಾಗಿದೆ.

ಇಬ್ಬರ ಬ್ಯಾರಕ್‌ನಲ್ಲಿದ್ದ ಆರೋಪಿಯನ್ನ (Accused) 16 ಕೈದಿಗಳಿರುವ ಬ್ಯಾರಕ್‌ಗೆ ಶಿಫ್ಟ್ ಮಾಡಲಾಗಿದೆ. ಮೂಲಕ ಪವಿತ್ರಗೌಡಗೆ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು ಶಾಕ್ ನೀಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್ (Renukaswamy Murder Case) ಕೋರ್ಟ್‌ನಲ್ಲಿದೆ. ಟ್ರಯಲ್ ನಡೆಯುವಾಗ ಎಲ್ಲಾ ಆರೋಪಿಗಳು ವಿಸಿ ಮೂಲಕ ನ್ಯಾಯಾಧೀಶರ ಮುಂದೆ ಹಾಜರಾಗಬೇಕು. ಕಳೆದ ಮೂರು ದಿನಗಳ ಹಿಂದೆ ಎಲ್ಲಾ ಆರೋಪಿಗಳು ಹಾಜರಾದ ಬಳಿಕ ತಡವಾಗಿ ಪವಿತ್ರಾಗೌಡ ಹಾಜರಾಗಿ ನ್ಯಾಯಾಧೀಶರ ಕೆಂಗಣ್ಣಿಗೆ ಗುರಿಯಾಗಿದ್ದರು.
ಅಷ್ಟೇ ಅಲ್ಲದೇ ಪವಿತ್ರಾಗೌಡ ವಿಸಿಯಲ್ಲಿ ಹಾಜರಾಗಿದ್ದಾಗ ಕಿವಿಯಲ್ಲಿ ಏರ್‌ಬಡ್ಸ್ ಬಳಕೆ ಮಾಡಿದ್ದರು. ನ್ಯಾಯಾಧೀಶರು ಮಹಿಳಾ ಬ್ಯಾರಕ್‌ನಲ್ಲಿ ಏರ್‌ಬಡ್ಸ್ ಬಳಕೆ ಮಾಡುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಏರ್‌ಬಡ್ಸ್ ಬಳಕೆ ಮಾಡಿರುವ ಬಗ್ಗೆ ಜೈಲು ಅಧಿಕಾರಿಗಳಿಂದ ನ್ಯಾಯಾಧೀಶರು ಸ್ಪಷ್ಟನೆ ಕೇಳಿದ್ದರು. ಈ ಎಲ್ಲಾ ಕಾರಣಗಳಿಂದ ಪವಿತ್ರಾಗೌಡ ಬ್ಯಾರಕ್‌ನ ಶಿಫ್ಟ್ ಮಾಡಲಾಗಿದೆ.
