– ಪ್ರವಾಸೋದ್ಯಮದ 5 ಪ್ರಮುಖ ವಿಭಾಗಗಳಲ್ಲಿ ಒಟ್ಟು 35 ಪ್ರಶಸ್ತಿಗಳು
– ಸೆಪ್ಟೆಂಬರ್ 17ರವರೆಗೆ ನಾಮನಿರ್ದೇಶನ ಸಲ್ಲಿಸಲು ಅವಕಾಶ
ಬೆಂಗಳೂರು: ರಾಜ್ಯದ ಪ್ರವಾಸೋದ್ಯಮ ಇಲಾಖೆಯ (Karnataka Tourism Department) ಇತಿಹಾಸದಲ್ಲಿ ಮೊದಲ ಬಾರಿಗೆ, ಪ್ರವಾಸೋದ್ಯಮ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿರುವ ಸಂಸ್ಥೆಗಳು, ಉದ್ಯಮಿಗಳು ಹಾಗೂ ವ್ಯಕ್ತಿಗಳನ್ನು ರಾಜ್ಯಮಟ್ಟದ ವೇದಿಕೆಯಡಿ ಗುರುತಿಸಲು ‘ಕರ್ನಾಟಕ ಟೂರಿಸಂ ಅವಾರ್ಡ್ಸ್ 2026’ ಆಯೋಜಿಸಲಾಗುತ್ತಿದೆ ಎಂದು ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ (KJ George) ತಿಳಿಸಿದ್ದಾರೆ.
ರಾಜ್ಯ ಪ್ರವಾಸೋದ್ಯಮ ಇಲಾಖೆ , ಕರ್ನಾಟಕ ಟೂರಿಸಂ ಸೊಸೈಟಿ (KTS) ಯ ಸಹಯೋಗದೊಂದಿಗೆ ಆಯೋಜಿಸುತ್ತಿರುವ ಈ ಪ್ರಶಸ್ತಿಗಳು ಕರ್ನಾಟಕದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸೇವಾ ಗುಣಮಟ್ಟ, ನಾವೀನ್ಯತೆ, ಸುಸ್ಥಿರತೆ ಹಾಗೂ ಸ್ಥಳೀಯ ಸಮುದಾಯದ ಕೊಡುಗೆಯನ್ನು ಗುರುತಿಸುವ ಪ್ರಮುಖ ವೇದಿಕೆಯಾಗಲಿದೆ. ರಾಜ್ಯದ `One State, Many Worlds’ ಬ್ರ್ಯಾಂಡ್ ಪರಿಕಲ್ಪನೆಯಡಿ ರೂಪಿಸಿರುವ ಪ್ರಶಸ್ತಿಗಳು ಕರ್ನಾಟಕದ 31 ಜಿಲ್ಲೆಗಳಲ್ಲಿರುವ ಪ್ರವಾಸೋದ್ಯಮ ಕ್ಷೇತ್ರದ ವೈವಿಧ್ಯಮಯ ಸಾಧನೆಗಳನ್ನು ರಾಜ್ಯಮಟ್ಟದಲ್ಲಿ ಗುರುತಿಸುವ ಉದ್ದೇಶ ಹೊಂದಿವೆ ಎಂದಿದ್ದಾರೆ. ಇದನ್ನೂ ಓದಿ: `ಕೆಲ್ಸ ಮಾಡೋದು ಬಿಟ್ಟು, ಬಿಟ್ಟಿ ಯಾಕೆ ಹೋಗ್ತೀರಿ?ʼ – ನಿರ್ವಾಹಕರ ವಿರುದ್ಧ ಸಿಡಿದ ಮಹಿಳೆಯರು
5 ಪ್ರಮುಖ ವಿಭಾಗಗಳಲ್ಲಿ 35 ಪ್ರಶಸ್ತಿಗಳು:
– Accommodation & Hospitality ವಿಭಾಗದಲ್ಲಿ ಹೋಟೆಲ್, ರೆಸಾರ್ಟ್, ಬೂಟಿಕ್ ಸ್ಟೇ, ಹೆರಿಟೇಜ್ ಪ್ರಾಪರ್ಟಿ, ರೆಸ್ಟೋರೆಂಟ್ ಹಾಗೂ ಆತಿಥ್ಯ ಸೇವೆಗಳಲ್ಲಿನ ಸಾಧನೆಗಳನ್ನು ಗುರುತಿಸಲಾಗುತ್ತದೆ.
– Tour Operators & Travel Agents ವಿಭಾಗದಲ್ಲಿ ದೇಶೀಯ ಹಾಗೂ ಇನ್‌ಬೌಂಡ್ ಟೂರ್ ಆಪರೇಟರ್‌ಗಳು, ಸಾಹಸ ಪ್ರವಾಸೋದ್ಯಮ ಸಂಸ್ಥೆಗಳು, ಸಾರಿಗೆ ಸೇವೆಗಳು, MICE ಹಾಗೂ ನವೀನ ಪ್ರವಾಸ ಸೇವೆಗಳಿಗೆ ಅವಕಾಶ ಕಲ್ಪಿಸಲಾಗಿದೆ.
– Events, Venues & Infrastructure ವಿಭಾಗದಲ್ಲಿ ಹೆರಿಟೇಜ್ ಸ್ಮಾರಕಗಳು, ವಸ್ತುಸಂಗ್ರಹಾಲಯಗಳು, ಕಾರ್ಯಕ್ರಮ ಹಾಗೂ ಪ್ರವಾಸೋದ್ಯಮ ಸ್ನೇಹಿ ಸ್ಥಳಗಳು ಸೇರಿದಂತೆ ವಿವಿಧ ವಿಭಾಗಗಳನ್ನು ಒಳಗೊಂಡಿದೆ.
– Education, Publications & Individuals ವಿಭಾಗದಲ್ಲಿ ಪ್ರವಾಸಿ ಮಾರ್ಗದರ್ಶಕರು, ನೈಸರ್ಗಿಕ ತಜ್ಞರು, ಶಿಕ್ಷಣ ಸಂಸ್ಥೆಗಳು, ಸ್ಟಾರ್ಟ್‌ಅಪ್‌ಗಳು, ತಂತ್ರಜ್ಞಾನ ಕ್ಷೇತ್ರದ ಸಾಧಕರು, ಲೇಖಕರು ಹಾಗೂ ಜೀವಮಾನ ಸಾಧಕರನ್ನು ಗುರುತಿಸಲಾಗುತ್ತದೆ.
– Sustainability & Rural Tourism ವಿಭಾಗದಲ್ಲಿ ಹೋಂಸ್ಟೇ, ಗ್ರಾಮೀಣ ಪ್ರವಾಸೋದ್ಯಮ ಯೋಜನೆಗಳು, ಸುಸ್ಥಿರ ಪ್ರವಾಸೋದ್ಯಮ ಹಾಗೂ ಪ್ರವಾಸಿ ತಾಣಗಳ ಉತ್ತಮ ನಿರ್ವಹಣೆಗೆ ಆದ್ಯತೆ ನೀಡಲಾಗಿದೆ.
ಅರ್ಹತೆ ಮತ್ತು ಸಾಧನೆಯೇ ಮಾನದಂಡ
ಪ್ರಶಸ್ತಿಗಳ ಆಯ್ಕೆಗೆ ಉದ್ಯಮ ಕ್ಷೇತ್ರದ ಹಿರಿಯರು, ವಿಷಯ ತಜ್ಞರು ಹಾಗೂ ಸಂಬಂಧಿತ ಪ್ರತಿನಿಧಿಗಳನ್ನು ಒಳಗೊಂಡ ಸ್ವತಂತ್ರ ಸ್ಕ್ರೀನಿಂಗ್ ಸಮಿತಿ ಕಾರ್ಯನಿರ್ವಹಿಸಲಿದೆ. ಸೇವಾ ಗುಣಮಟ್ಟ, ಪ್ರವಾಸಿಗರ ಅಭಿಪ್ರಾಯ ಮತ್ತು ಅನುಭವ, ನಾವೀನ್ಯತೆ, ಪರಿಸರ ಸುಸ್ಥಿರತೆ ಹಾಗೂ ಸ್ಥಳೀಯ ಸಮುದಾಯದ ಅಭಿವೃದ್ಧಿಗೆ ನೀಡಿರುವ ಕೊಡುಗೆ ಸೇರಿದಂತೆ ಹಲವು ಮಾನದಂಡಗಳ ಆಧಾರದ ಮೇಲೆ ನಾಮನಿರ್ದೇಶನಗಳನ್ನು ಮೌಲ್ಯಮಾಪನ ಮಾಡಲಾಗುವುದು. ಈ ಮೂಲಕ ಪ್ರಶಸ್ತಿ ಆಯ್ಕೆಯಲ್ಲಿ ಪಾರದರ್ಶಕತೆ, ವಿಶ್ವಾಸಾರ್ಹತೆ ಮತ್ತು merit-based recognition ಖಚಿತಪಡಿಸುವ ಉದ್ದೇಶ ಹೊಂದಲಾಗಿದೆ.ಇದನ್ನೂ ಓದಿ: ಹೊಸ ಸಿಇಓ ನೇಮಕ ಬಳಿಕ ಅಯೋಧ್ಯೆ ರಾಮ ಮಂದಿರದ ವ್ಯವಸ್ಥೆಯಲ್ಲಿ ಹಲವು ಬದಲಾವಣೆ
ಸೆಪ್ಟೆಂಬರ್ 17ರವರೆಗೆ ನಾಮನಿರ್ದೇಶನ
ಅರ್ಹ ಹೋಟೆಲ್‌ಗಳು, ರೆಸಾರ್ಟ್‌ಗಳು, ಟೂರ್ ಆಪರೇಟರ್‌ಗಳು, ನೋಂದಾಯಿತ ಹೋಂಸ್ಟೇಗಳು, ಪ್ರವಾಸ ಸೇವಾ ಸಂಸ್ಥೆಗಳು, ಪ್ರವಾಸೋದ್ಯಮ ಸ್ಟಾರ್ಟ್‌ಅಪ್‌ಗಳು, ತಂತ್ರಜ್ಞಾನ ಸಂಸ್ಥೆಗಳು ಹಾಗೂ ವ್ಯಕ್ತಿಗಳು ಸೆಪ್ಟೆಂಬರ್ 17, 2026ರ ರಾತ್ರಿ 11.59ರವರೆಗೆ ನಾಮನಿರ್ದೇಶನ ಸಲ್ಲಿಸಬಹುದು. ಪ್ರಶಸ್ತಿ ಪ್ರದಾನ ಸಮಾರಂಭವನ್ನು ವಿಶ್ವ ಪ್ರವಾಸೋದ್ಯಮ ದಿನವಾದ ಸೆಪ್ಟೆಂಬರ್ 27ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗುವುದು.
ನಾಮನಿರ್ದೇಶನದ ಕೊನೆಯ ದಿನಾಂಕ: ಸೆಪ್ಟೆಂಬರ್ 17, 2026
ಪ್ರಶಸ್ತಿ ಪ್ರದಾನ: ಸೆಪ್ಟೆಂಬರ್ 27, 2026 – ವಿಶ್ವ ಪ್ರವಾಸೋದ್ಯಮ ದಿನ
ಸ್ಥಳ: ಬೆಂಗಳೂರು
ಅಧಿಕೃತ ವೆಬ್ ಪೋರ್ಟಲ್: www.karnatakatourismawards.com ಇದನ್ನೂ ಓದಿ: ದೆಹಲಿ ಕಟ್ಟಡ ದುರಂತ; ಅಡಿಪಾಯದ ಮಿತಿ ಗೊತ್ತಿದ್ದರೂ 4 ಮಹಡಿ ನಿರ್ಮಾಣ, FIRನಲ್ಲಿ ಬಹಿರಂಗ
