Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ವಿಶ್ವದ ಅತಿ ಎತ್ತರದ ಶ್ರೀಕೃಷ್ಣನ ದೇವಾಲಯ ಇದು – ಇಲ್ಲಿ ಟೋಪಿಯಲ್ಲಿ ನಿರ್ಧಾರವಾಗುತ್ತೆ ನಿಮ್ಮ ಭವಿಷ್ಯ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ವಿಶ್ವದ ಅತಿ ಎತ್ತರದ ಶ್ರೀಕೃಷ್ಣನ ದೇವಾಲಯ ಇದು – ಇಲ್ಲಿ ಟೋಪಿಯಲ್ಲಿ ನಿರ್ಧಾರವಾಗುತ್ತೆ ನಿಮ್ಮ ಭವಿಷ್ಯ

Latest

ವಿಶ್ವದ ಅತಿ ಎತ್ತರದ ಶ್ರೀಕೃಷ್ಣನ ದೇವಾಲಯ ಇದು – ಇಲ್ಲಿ ಟೋಪಿಯಲ್ಲಿ ನಿರ್ಧಾರವಾಗುತ್ತೆ ನಿಮ್ಮ ಭವಿಷ್ಯ

Public TV
Last updated: December 24, 2025 7:10 am
Public TV
Share
4 Min Read
Yulla Kanda Krishna Temple Himachal Pradesh
SHARE

ಪ್ರತಿಯೊಂದು ದೇವಾಲಯ ಅದರದ್ದೇ ಆದ ಇತಿಹಾಸ, ಮಹತ್ವ ಹಾಗೂ ಶಕ್ತಿಯನ್ನು ಹೊಂದಿರುತ್ತದೆ. ಇಂತಹ ಸುಮಾರು ಕಾರ್ಣಿಕವುಳ್ಳ ದೇವಾಲಯಗಳು ನಮ್ಮ ಭಾರತದಲ್ಲಿವೆ. ಇಂಥದ್ದೇ ಒಂದು‌ ಕೃಷ್ಣನ ದೇವಾಲಯ ಹಿಮಾಚಲ ಪ್ರದೇಶದಲ್ಲಿದೆ. ಇದು ವಿಶ್ವದ ಅತ್ಯಂತ ಎತ್ತರದ ಶ್ರೀಕೃಷ್ಣನ ದೇವಾಲಯ ಎಂಬ ಖ್ಯಾತಿಯನ್ನು ಹೊಂದಿದೆ. ಹಾಗಿದ್ರೆ ಈ ದೇವಾಲಯದ ವಿಶೇಷತೆ ಏನು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.

ದೇವಾಲಯ ಎಲ್ಲಿದೆ?
ಹಿಮಾಚಲ ಪ್ರದೇಶವನ್ನು ದೇವತೆಗಳ ನಾಡು ಎಂದು ಕರೆಯಲಾಗುತ್ತದೆ. ಇಲ್ಲಿ ನೂರಾರು ದೇವಾಲಯಗಳಿವೆ. ಕಾಂಗ್ರಾದಿಂದ ಕಿನ್ನೌರ್‌ವರೆಗೆ, ಪ್ರತಿ ವರ್ಷ ಲಕ್ಷಾಂತರ ಭಕ್ತರನ್ನು ಆಕರ್ಷಿಸುವ ಹಲವಾರು ಶಕ್ತಿಪೀಠಗಳಿವೆ. ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ಯುಲ್ಲಾ ಕಾಂಡದ ಸರೋವರದ ಮಧ್ಯದಲ್ಲಿ ಶ್ರೀಕೃಷ್ಣನ ಒಂದು ಸಣ್ಣ ದೇವಾಲಯವಿದೆ. ಇದನ್ನು ಯುಲ್ಲಾ ಕಾಂಡ್ ಶ್ರೀಕೃಷ್ಣನ ದೇವಾಲಯ ಎಂದು ಸಹ ಕರೆಯುತ್ತಾರೆ. ಪುರಾಣಗಳ ಪ್ರಕಾರ, ಪಾಂಡವರು ತಮ್ಮ ವನವಾಸದ ಸಮಯದಲ್ಲಿ ಸರೋವರದ ಮಧ್ಯದಲ್ಲಿ ಈ ದೇವಾಲಯವನ್ನು ನಿರ್ಮಿಸಿದರು ಎಂದು ಹೇಳಲಾಗುತ್ತದೆ. ಇದನ್ನು ಭಾರತದ ಹಾಗೂ ಪ್ರಪಂಚದ ಅತಿ ಎತ್ತರದ ಶ್ರೀಕೃಷ್ಣನ ದೇವಾಲಯ ಎಂದು ಗುರುತಿಸಲಾಗಿದೆ.

Yulla Kanda Krishna Temple Himachal Pradesh

ಸಮುದ್ರ ಮಟ್ಟದಿಂದ 12,000 ಅಡಿ ಎತ್ತರ:
ಅಂದಹಾಗೆ, ಶ್ರೀಕೃಷ್ಣನ ಅತಿ ಎತ್ತರದಲ್ಲಿರುವ ಈ ದೇವಾಲಯವು, ಸಮುದ್ರಮಟ್ಟದಿಂದ ಸುಮಾರು 12,000 ಅಡಿ ಎತ್ತರದಲ್ಲಿದೆ. ಇದೊಂದು ಪ್ರಾಚೀನ ಆಲಯವಾಗಿದ್ದು, ಅಲ್ಲಿಗೆ ತಲುಪಲು 14 ಕಿ.ಮೀ ದೂರ ಕಾಲ್ನಡಿಗೆಯ ಮೂಲಕ ಹೋಗಬೇಕಾಗುತ್ತದೆ. ಒಬ್ಬರು ದೇವಾಲಯಕ್ಕೆ ತಲುಪಲು ಬಹಳ ಕಷ್ಟಪಡಬೇಕು. ಆದರೆ ಶ್ರೀಕೃಷ್ಣನ ಮೇಲಿರುವ ನಂಬಿಕೆ ಹಾಗೂ ಭಕ್ತಿಯು ಮಾರ್ಗವನ್ನು ಸುಲಭಗೊಳಿಸುತ್ತದೆ ಎಂದು ಭಕ್ತರು ನಂಬುತ್ತಾರೆ.

ಕೃಷ್ಣ ಜನ್ಮಾಷ್ಟಮಿಯಂದು ಸಾವಿರಾರು ಭಕ್ತರು ಈ ಒಂದು ಸಣ್ಣ ದೇವಾಲಯಕ್ಕೆ ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ದೇವಾಲಯದ ಸಮಿತಿಯು ಭಕ್ತರಿಗಾಗಿ ಆಹಾರ, ವಾಸ್ತವ್ಯವನ್ನು ಕಲ್ಪಿಸುತ್ತಾರೆ. ಕೃಷ್ಣ ಜನ್ಮಾಷ್ಟಮಿಯ ಹಿಂದಿನ ದಿನವೇ ಭಕ್ತರು ಜಾನಪದ ಗೀತೆಗಳು ಮತ್ತು ಮಂತ್ರಗಳನ್ನು ಪಠಿಸುತ್ತಾ 15 ಕಿಲೋಮೀಟರ್‌ ನಡೆದು ಸರಾಯ್ ಭವನವನ್ನು ತಲುಪುತ್ತಾರೆ. ನಂತರ ಅವರು ಮರುದಿನ ಪೂಜೆ ಸಲ್ಲಿಸುತ್ತಾರೆ.

Yulla Kanda Krishna Temple Himachal Pradesh 4

ಇಲ್ಲಿ ಯುಲ್ಲಾ ಕಾಂಡದ ಜನ್ಮಾಷ್ಟಮಿ ಬಹಳ ಪ್ರಸಿದ್ಧ. ಈ ಜನ್ಮಾಷ್ಟಮಿ ಹಬ್ಬದ ಇತಿಹಾಸವು ಬುಷಾರ್ ರಾಜಪ್ರಭುತ್ವದ ರಾಜ್ಯದ ಜೊತೆ ತಳುಕು ಹಾಕಿಕೊಂಡಿದೆ. ಈ ಯುಲ್ಲಾ ಕಾಂಡದ ಜನ್ಮಾಷ್ಟಮಿಯು ರಾಜ ಕೆಹರಿ ಸಿಂಗ್ ಕಾಲದಲ್ಲಿ ಪ್ರಾರಂಭವಾಯಿತು. ಇಲ್ಲಿ ನಡೆಯುವ ಜಾತ್ರೆಯನ್ನು ನೋಡಲು ಹಾಗೂ ಪಾಲ್ಗೊಳ್ಳಲು ಸುತ್ತಮುತ್ತಲಿನ ಗ್ರಾಮಗಳಿಂದ ಮತ್ತು ಹೊರಗಿನಿಂದ ಜನರು ಸೇರುತ್ತಾರೆ.

ಟೋಪಿ ಭವಿಷ್ಯ:
ಕೃಷ್ಣ ಜನ್ಮಾಷ್ಟಮಿಯ ದಿನದಂದು, ಕಿನ್ನೌರಿ ಟೋಪಿಯನ್ನು ಕೃಷ್ಣ ದೇವಾಲಯದ ಉದ್ದಕ್ಕೂ ಹರಿಯುವ ಸರೋವರದಲ್ಲಿ ತಲೆಕೆಳಗಾಗಿ ಎಸೆಯಲಾಗುತ್ತದೆ. ಟೋಪಿ ತೇಲುತ್ತಾ ಹೋಗಿ ಮುಳುಗದೆ ಇನ್ನೊಂದು ತುದಿಯನ್ನು ತಲುಪಿದರೆ, ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ ಎಂಬ ಅರ್ಥವನ್ನು ಸೂಚಿಸುತ್ತದೆ. ನೀವು ಅಂದುಕೊಂಡ ಅದೃಷ್ಟವು ನಿಮಗೆ ಅನುಕೂಲಕರವಾಗಿರುತ್ತದೆ ಎಂಬುದರ ಸಂಕೇತ ಇದಾಗಿದೆ. ಒಂದು ವೇಳೆ ಟೋಪಿ ಇನ್ನೊಂದು ತುದಿಯನ್ನು ತಲುಪುವ ಮುನ್ನ ಮುಳುಗಿದರೆ, ಕೆಟ್ಟದು ಸಂಭವಿಸಲಿದೆ ಎಂದು ನಂಬಲಾಗಿದೆ.

Yulla Kanda Krishna Temple Himachal Pradesh 3

ಈ ಟೋಪಿಯ ಭವಿಷ್ಯ ಇಲ್ಲಿ ಬಹಳ ಪ್ರಸಿದ್ಧವಾಗಿದ್ದು, ಕಿನ್ನೌರ್ ಮಾತ್ರವಲ್ಲದೆ ಶಿಮ್ಲಾ ಮತ್ತು ಇತರ ಜಿಲ್ಲೆಗಳ ಜನರು ಸಹ ತಮ್ಮ ಅದೃಷ್ಟವನ್ನು ಪರೀಕ್ಷಿಸಲು ಇಲ್ಲಿಗೆ ಬರುತ್ತಾರೆ.

ಪುರಾಣಗಳ ಪ್ರಕಾರ, ಪಾಂಡವರು ವನವಾಸದ ಸಮಯದಲ್ಲಿ ಕಿನ್ನೌರ್ ಪರ್ವತದ ಮೇಲೆ ಒಂದು ರಾತ್ರಿ ವಿಶ್ರಾಂತಿ ಪಡೆದರು ಎಂದು ನಂಬಲಾಗಿದೆ. ಈ ವೇಳೆ ಯುಧಿಷ್ಠಿರನು ಈ ಪರ್ವತದ ಮೇಲೆ ಶ್ರೀ ಕೃಷ್ಣನನ್ನು ಧ್ಯಾನಿಸಿದನೆಂದು ನಂಬಲಾಗಿದೆ. ಚಾರಣ ಪ್ರಿಯರಿಗೆ ಈ ಸ್ಥಳ ಉತ್ತಮ ಆಯ್ಕೆ.

Yulla Kanda Krishna Temple Himachal Pradesh 2

ದೇವಾಲಯದ ಭೇಟಿಗೆ ಉತ್ತಮ ಸಮಯ:
ಮೇನಿಂದ ಅಕ್ಟೋಬರ್‌ವರೆಗೆ ಯುಲ್ಲಾ ಕಾಂಡ ಚಾರಣವನ್ನು ಕೈಗೊಳ್ಳಲು ಉತ್ತಮ ಸಮಯ. ಈ ಸಮಯದಲ್ಲಿ ಹಿಮ ಕಡಿಮೆಯಾಗಿ ಹಾದಿಗಳು ಸ್ಪಷ್ಟವಾಗಿ ಗೋಚರಿಸುವುದರಿಂದ ಯಾವುದೇ ಅಡೆತಡೆಯಿಲ್ಲದೆ ಚಾರಣ ಮಾಡಬಹುದು. ಅಲ್ಲದೇ ಈ ಸಮಯದಲ್ಲಿ ತಾಪಮಾನವು ಆಹ್ಲಾದಕರವಾಗಿರುತ್ತದೆ, ಆಕಾಶ ಮತ್ತು ಸರೋವರವು ಸಂಪೂರ್ಣವಾಗಿ ಗೋಚರಿಸುತ್ತದೆ. ಇನ್ನು ಈ ಪ್ರದೇಶದಲ್ಲಿ ಆಲ್ಪೈನ್ ಸಸ್ಯವರ್ಗ ಸಂಪೂರ್ಣವಾಗಿ ಅರಳಿರುತ್ತದೆ. ಇದು ನಿಮ್ಮ ಟ್ರೆಕ್ಕಿಂಗ್‌ಗೆ ಮತ್ತಷ್ಟು ಹುರುಪು, ಸಂತೋಷವನ್ನು ನೀಡಿ ಮನಸ್ಸಿಗೆ ಮುದನೀಡುತ್ತದೆ.

ಈ ದೇವಾಲಯದಕ್ಕೆ ಸ್ಥಳೀಯ ಮಾರ್ಗದರ್ಶಿಯೊಂದಿಗೆ ಪ್ರಯಾಣಿಸುವುದು ಉತ್ತಮ. ಅಲ್ಲದೇ ಚಾರಣದ ವೇಳೆ ಬೆಚ್ಚಗಿನ ಬಟ್ಟೆ, , ಗಟ್ಟಿಮುಟ್ಟಾದ ಚಾರಣ ಬೂಟುಗಳು ಮತ್ತು ಪ್ರಯಾಣಕ್ಕೆ ಸಾಕಷ್ಟು ಆಹಾರ ಸಾಮಗ್ರಿಗಳಂತಹ ಅಗತ್ಯ ವಸ್ತುಗಳನ್ನು ಒಯ್ಯಿರಿ. ಈ ದೇವಾಲಯ ಎತ್ತರದಲ್ಲಿ ಇರುವ ಕಾರಣದಿಂದಾಗಿ,ಅಲ್ಲಿಗೆ ಒಗ್ಗಿಕೊಳ್ಳುವುದು ಸ್ವಲ್ಪ ಕಷ್ಟವೆನಿಸಬಹುದು. ದೇವಾಲಯಕ್ಕೆ ತೆರಳುವ ಮೊದಲು ಯುಲ್ಲಾ ಖಾಸ್‌ನಲ್ಲಿ ಒಂದು ದಿನ ಕಳೆಯಬಹುದು. ನವೆಂಬರ್‌ನಿಂದ ಏಪ್ರಿಲ್‌ವರೆಗೆ ಹೆಚ್ಚಿನ ಹಿಮಪಾತವಿರುವುದರಿಂದ ಈ ಸಮಯದಲ್ಲಿ ಚಾರಣ ಹಾಗೂ ದೇವಾಲಯದ ಭೇಟಿಯನ್ನು ತಪ್ಪಿಸಿದರೆ ಒಳ್ಳೆಯದು.

Yulla Kanda Krishna Temple Himachal Pradesh 1

ಯುಲ್ಲಾ ಕಾಂಡಾ ಮಂದಿರಕ್ಕೆ ಹೇಗೆ ತಲುಪುವುದು?
-ಹತ್ತಿರದ ಪ್ರಮುಖ ನಗರ: ರೇಕಾಂಗ್ ಪಿಯೋ
-ಶಿಮ್ಲಾದಿಂದ ಸುಮಾರು 230 ಕಿ.ಮೀ.ದೂರ
-ರೇಕಾಂಗ್ ಪಿಯೋದಿಂದ ಯುಲ್ಲಾ ಗ್ರಾಮಕ್ಕೆ 25-30 ಕಿ.ಮೀ.
-ಹತ್ತಿರದ ರೈಲು ನಿಲ್ದಾಣ: ಶಿಮ್ಲಾ ಅಥವಾ ಕಾಲ್ಕಾ.
– ಕಾಲ್ಕಾದಿಂದ ಶಿಮ್ಲಾಕ್ಕೆ ಟಾಯ್ ಟ್ರೈನ್ ಸಹ ತೆಗೆದುಕೊಳ್ಳಬಹುದು.
-ಹತ್ತಿರದ ವಿಮಾನ ನಿಲ್ದಾಣ: ಶಿಮ್ಲಾ ವಿಮಾನ ನಿಲ್ದಾಣ (ಜುಬ್ಬರ್‌ಹಟ್ಟಿ).
-ಇಲ್ಲಿಂದ ಟ್ಯಾಕ್ಸಿ ಅಥವಾ ಬಸ್ ಮೂಲಕ ರೇಕಾಂಗ್ ಪಿಯೋ ತಲುಪಬಹುದು.
-ಬಸ್/ಟ್ಯಾಕ್ಸಿ ಮೂಲಕ-ಶಿಮ್ಲಾದಿಂದ ರೇಕಾಂಗ್ ಪಿಯೋಗೆ ಹಿಮಾಚಲ ಸಾರಿಗೆಯ ಬಸ್‌ಗಳು ಲಭ್ಯವಿದೆ.
-ರೇಕಾಂಗ್ ಪಿಯೋದಿಂದ ಟ್ಯಾಕ್ಸಿ ಅಥವಾ ಸ್ಥಳೀಯ ವಾಹನದ ಮೂಲಕ ಯುಲ್ಲಾ ತಲುಪಬೇಕು.
-ಟ್ರೆಕ್ಕಿಂಗ್ ಮೂಲಕ-ಯುಲ್ಲಾ ಗ್ರಾಮದಿಂದ 4-5 ಗಂಟೆಗಳ ಟ್ರೆಕ್ಕಿಂಗ್ ಮಾಡಬೇಕು.

TAGGED:himachal pradeshkrishna templeTrekkingYulla Kanda Temple
Share This Article
Facebook Whatsapp Whatsapp Telegram

Cinema news

3 Idiots
10 ವರ್ಷಗಳ ಬಳಿಕವೂ ಅದೇ ಪಾತ್ರಗಳೊಂದಿಗೆ ಬರಲಿದೆ 3 Idiots ಸೀಕ್ವೆಲ್
Bollywood Cinema Latest Top Stories
nikhil kumaraswamy actor chetan
ಡಾ.ರಾಜ್‌ಕುಮಾರ್ ಎಂದರೆ ಆರು ಕೋಟಿ ಕನ್ನಡಿಗರ ಭಾವನೆ: ನಟ ಚೇತನ್‌ಗೆ ನಿಖಿಲ್ ಕುಮಾರಸ್ವಾಮಿ ಕಿಡಿ
Bengaluru City Cinema Latest Sandalwood Top Stories
Sanjay Dutt
ಸರ್ಸೆ ಸೆರಗ ಸರ್ಸೆ ಹಾಡಿನ ವಿವಾದ – ಕ್ಷಮೆಯಾಚಿಸಿದ ಸಂಜಯ್ ದತ್, ಬುಡಕಟ್ಟು ಜನಾಂಗದ 50 ಹುಡುಗಿಯರ ಶಿಕ್ಷಣಕ್ಕೆ ಹಣದ ಭರವಸೆ
Bollywood Cinema Latest National Sandalwood Top Stories
ChetanKumar Ahimsa
ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌
Cinema Karnataka Latest Top Stories

You Might Also Like

soraba bjp worker
Crime

ಶಿವಮೊಗ್ಗದ ಸೊರಬದಲ್ಲಿ ಬಿಜೆಪಿ ಮುಖಂಡನ ಪತ್ನಿ ನೇಣಿಗೆ ಶರಣು – ಪತಿ ಬಂಧನ

Public TV
By Public TV
53 minutes ago
Donovan Ferreira
Cricket

ಪಂಜಾಬ್‌ ಗೆಲುವಿನ ಓಟಕ್ಕೆ ಬ್ರೇಕ್‌ – ರಾಜಸ್ಥಾನ್‌ಗೆ 6 ವಿಕೆಟ್‌ಗಳ ಜಯ

Public TV
By Public TV
1 hour ago
Apekshaben Sonis victory
Latest

100% ಮುಸ್ಲಿಂ ಮತದಾರರ ವಾರ್ಡ್‌ನಲ್ಲಿ ಸ್ವತಂತ್ರ ಹಿಂದೂ ಅಭ್ಯರ್ಥಿಗೆ ಗೆಲುವು

Public TV
By Public TV
2 hours ago
Dharwad Suicide
Dharwad

ಧಾರವಾಡ | ಮರ್ಯಾದೆಗೆ ಅಂಜಿ ವಿದ್ಯಾರ್ಥಿ ನೇಣಿಗೆ ಶರಣು

Public TV
By Public TV
2 hours ago
gundlupet inspector safari
Chamarajanagar

ನಿರ್ಬಂಧಿತ ಅರಣ್ಯಪ್ರದೇಶದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಬಿಂದಾಸ್ ಸವಾರಿ

Public TV
By Public TV
4 hours ago
supreme Court 1
Court

ಪ್ರತಿಯೊಂದು ಧಾರ್ಮಿಕ ಸಂಸ್ಥೆಗಳಲ್ಲಿ ನಿಯಮಗಳಿರಬೇಕು, ಅರಾಜಕತೆ ಇರಬಾರದು – ಶಬರಿಮಲೆ ಕೇಸ್‌ನಲ್ಲಿ ಸುಪ್ರೀಂ ಅಭಿಪ್ರಾಯ

Public TV
By Public TV
4 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?