ಬೆಂಗಳೂರು: ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಹಳಿಗೆ ಹಾರಿ ಪ್ರಯಾಣಿಕನೋರ್ವ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಘಟನೆಯಿಂದ ಮೆಟ್ರೋ ನಿಲ್ದಾಣದಲ್ಲಿ (Namma Metro Station) ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಕೆಲಕಾಲ ಸಂಚಾರ ಸ್ಥಗಿತಗೊಳಿಸಲಾಗಿತ್ತು.
ಶನಿವಾರ (ಇಂದು) ಮಧ್ಯಾಹ್ನ 12:25 ಕ್ಕೆ ಹಳಿಗಳ ಮೇಲೆ ಹಾರಿದ ಪ್ರಯಾಣಿಕನನ್ನ ಸಿಬ್ಬಂದಿ ರಕ್ಷಿಸಿದ್ದು, 10 ನಿಮಿಷದ ಬಳಿಕ ರೈಲು ಸಂಚಾರ ಪುನರ್ ಆರಂಭವಾಗಿದೆ. ಇದನ್ನೂ ಓದಿ: ಸನ್ನಡತೆ ಆಧಾರದ ಮೇಲೆ ರಾಜ್ಯದ ವಿವಿಧ ಜೈಲುಗಳಿಂದ 24 ಕೈದಿಗಳು ರಿಲೀಸ್

ಏಕಾಏಕಿ ಹಳಿಗೆ ಹಾರಿದ ಪ್ರಯಾಣಿಕ?
ಇಂದು ಮಧ್ಯಾಹ್ನ 12:25 ರ ಸುಮಾರಿಗೆ ಘಟನೆ ನಡೆದಿದೆ. ಹಸಿರು ಮಾರ್ಗದ ಮೆಟ್ರೋ ರೈಲು ನಿಲ್ದಾಣ ಪ್ರವೇಶಿಸುತ್ತಿದ್ದಂತೆ. ಅಲ್ಲೇ ನಿಂತಿದ್ದ ಪ್ರಯಾಣಿಕ ಹಳಿಗೆ ಹಾರಿ, ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣವೇ ಎಚ್ಚೆತ್ತ ಲೋಕೋ ಪೈಲಟ್ ರೈಲು ನಿಲ್ಲಿಸಿದ್ದಾರೆ. ಇತ್ತ ಮೆಟ್ರೋ ಸಿಬ್ಬಂದಿ ಕೂಡ ಹಳಿಗೆ ಪೂರೈಕೆ ಆಗ್ತಿದ್ದ ವಿದ್ಯುತ್ ಸ್ಥಗಿತಗೊಳಿಸಿದ್ದಾರೆ.
ಬಳಿಕ ಹಳಿಗೆ ಹಾರಿದ ಪ್ರಯಾಣಿಕನನ್ನ ರಕ್ಷಿಸಿ, ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆಯಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸುಮಾರು 10 ನಿಮಿಷಗಳ ಕಾಲ ಮೆಟ್ರೋ ಸ್ಥಗಿತಗೊಂಡಿತ್ತು. 12.34 ಕ್ಕೆ ಎಂದಿನಂತೆ ಮೆಟ್ರೋ ಸಂಚಾರ ಆರಂಭಗೊಂಡಿದೆ. ಇದನ್ನೂ ಓದಿ: ಚಿಕ್ಕಮಗಳೂರು | ಪ್ರೀತಿ ನಿರಾಕರಿಸಿದ ಅಪ್ರಾಪ್ತೆಯನ್ನು ನೆಲಕ್ಕೆ ಹಾಕಿ ತುಳಿದ ಪಾಗಲ್ ಪ್ರೇಮಿ
