ಚಾಮರಾಜನಗರ: ಡೆತ್ ನೋಟ್ (Death Note) ಬರೆದಿಟ್ಟು ಕೆರೆಗೆ ಹಾರಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ (Chamarajangar) ತಾಲೂಕಿನ ಬೆಂಡರವಾಡಿ (Bendaravadi) ಗ್ರಾಮದಲ್ಲಿ ನಡೆದಿದೆ.
ಗುರುಮೂರ್ತಿ ಮೃತಪಟ್ಟ ಯುವಕ. ನಾಲ್ವರು ಬಂದು ಗಲಾಟೆ ನಡೆಸಿ ಅವಮಾನಿಸಿದ್ದೆ ಸಾವಿಗೆ ಕಾರಣ ಎಂದು ಡೆತ್ ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಕರ್ನಾಟಕ, ದೆಹಲಿ ಬಳಿಕ UP ನಲ್ಲೂ ಫುಡ್ ಸೇಫ್ಟಿ ರೇಡ್ – 200 ಕೆಜಿ ಕಲಬೆರಕೆ ಸ್ವೀಟ್ಸ್ ಸೀಜ್
ಸದ್ಯ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸಿ ಕೆರೆಯಿಂದ ಶವ ಹೊರತೆಗೆದಿದ್ದಾರೆ. ಘಟನೆ ಸಂಬಂಧ ಶ್ರವಣ, ಅಭಿ ಎಂಬುವವರ ವಿರುದ್ಧ ಕುಟುಂಬಸ್ಥರು ದೂರು ನೀಡಿದ್ದಾರೆ. ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಗದಗ | ಅನೈತಿಕ ಸಂಬಂಧದ ಶಂಕೆ; ಮಹಿಳೆಯ ಕುಟುಂಬಸ್ಥರಿಂದ ವ್ಯಕ್ತಿಯ ಭೀಕರ ಕೊಲೆ
