ರಾಮನಗರ/ಯಾದಗಿರಿ: ಬದುಕು ಕಟ್ಟಿಕೊಳ್ಳಲು ಹೋಗಿದ್ದ ಯಾದಗಿರಿ (Yadagiri) ಕಾರ್ಮಿಕನೋರ್ವ ಕಲ್ಲು ಕ್ವಾರಿ ದುರಂತದಲ್ಲಿ ಸಾವನ್ನಪ್ಪಿದ್ದಾರೆ.
ಯಾದಗಿರಿ ಜಿಲ್ಲೆಯ ಶಹಾಪುರ (Shahapura) ತಾಲೂಕಿನ ನಡಿಹಾಳ ದೇವಸು ನಾಯಕ ತಾಂಡಾದ ನಿವಾಸಿ ರಾಮು ನಾಯಕ (೪೫ ) ಮೃತ ದುರ್ದೈವಿ. ಇದನ್ನೂ ಓದಿ: ಕಲ್ಲು ಕ್ವಾರೆ ದುರಂತ – ಮೃತರ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಲಿ: ಹೆಚ್‌ಡಿಕೆ
ಮೃತ ಕಾರ್ಮಿಕ 4 ವರ್ಷ ಹಿಂದೆ ಯಾದಗಿರಿಯಿಂದ ಬೆಂಗಳೂರಿಗೆ (Bengaluru) ವಲಸೆ ಬಂದಿದ್ದರು. ಆದರೆ ಇಂದು (ಜು.2) ಮಾದಪಟ್ಟಣದ ಕಲ್ಲು ಕ್ವಾರಿಯಲ್ಲಿ ಬಿಹಾರ ಮೂಲದ ಕಾರ್ಮಿಕರ ಜೊತೆ ಕೆಲಸ ಮಾಡುತ್ತಿದ್ದಾಗ ಬಂಡೆ ಕುಸಿದಿದ್ದು, ಪರಿಣಾಮ ಸಾವನ್ನಪ್ಪಿದ್ದಾರೆ.
ಸದ್ಯ ಮೃತ ರಾಮು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಬೆಂಗಳೂರರಿನತ್ತ ಪ್ರಯಾಣ ಬೆಳೆಸಿದ್ದಾರೆ.ಇದನ್ನೂ ಓದಿ: ಬೆಂಗಳೂರು ಸಮೀಪದ ಕಲ್ಲು ಕ್ವಾರಿಯಲ್ಲಿ ಘೋರ ದುರಂತ – ಬಂಡೆ ಕುಸಿದು 7 ಕಾರ್ಮಿಕರು ಸಾವು
