Connect with us

Bagalkot

ಶೀಲ ರಕ್ಷಣೆಗಾಗಿ ಸೀಮೆಎಣ್ಣೆ ಸುರಿದುಕೊಂಡ ಮಹಿಳೆ- ಬೆಂಕಿ ಹಚ್ಚಿ ಕಾಮುಕ ಪರಾರಿ

Published

on

ಬಾಗಲಕೋಟೆ: ತನ್ನ ಮೇಲಿನ ಅತ್ಯಾಚಾರವನ್ನು ತಡೆಯಲು ಮಹಿಳೆಯೊಬ್ಬರು ಸೀಮೆ ಎಣ್ಣೆ ಸುರಿದುಕೊಂಡು ಸಂಕಷ್ಟಕ್ಕೆ ಸಿಲುಕಿದ ಆಘಾತಕಾರಿ ಘಟನೆ ನಡೆದಿದೆ.

ಈ ಘಟನೆ ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ನಡೆದಿದ್ದು, 33 ವರ್ಷದ  ಮಹಿಳೆ ಗಂಭೀರ ಗಾಯಗೊಂಡಿದ್ದಾರೆ. ಸದ್ಯ ಗಾಯಾಳು ಮಹಿಳೆ ಇದೀಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಏನಿದು ಪ್ರಕರಣ?: ಗಂಡನನ್ನು ಕಳೆದುಕೊಂಡ ಮಹಿಳೆ ತನ್ನ ಮೂರು ಮಕ್ಕಳೊಂದಿಗೆ ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದರು. ಆದ್ರೆ ಸುರೇಶ ಭಜಂತ್ರಿ ಎಂಬಾತ ಮಹಿಳೆಯನ್ನು ಲೈಂಗಿಕವಾಗಿ ಪ್ರಚೋದಿಸುತ್ತಿದ್ದ. ಸುರೇಶ್ ಬುಧವಾರ ಅತ್ಯಾಚಾರಕ್ಕೆ ಯತ್ನಿಸಿದಾಗ ಇದನ್ನು ವಿರೋಧಿಸಿದ್ದ ಮಹಿಳೆ ಆತನನ್ನು ಹೆದರಿಸಲೆಂದು ತನ್ನ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡಿದ್ದಾರೆ. ಈ ವೇಳೆ ಆರೋಪಿ ಸುರೇಶ ಬೆಂಕಿ ಪೊಟ್ಟಣದಿಂದ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಘಟನೆಯಿಂದಾಗಿ ಮಹಿಳೆಯ ದೇಹದ ಬಹುತೇಕ ಭಾಗ ಸುಟ್ಪಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ.

ಕೆರೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Click to comment

Leave a Reply

Your email address will not be published. Required fields are marked *