ನವದೆಹಲಿ: ಬಹುತೇಕ ಜನರು ಸಾಕು ಪ್ರಾಣಿಗಳನ್ನು (Animals) ತಮ್ಮ ಕುಟುಂಬದ ಸದಸ್ಯರಂತೆಯೇ ಭಾವಿಸುತ್ತಾರೆ. ಅದರಲ್ಲೂ ಮುದ್ದಿನ ನಾಯಿಗಳೆಂದರೇ (Dog) ಎಲ್ಲರಿಗೂ ಅಚ್ಚುಮೆಚ್ಚು.
`ಚಾರ್ಲಿ-777′ (Charlie777 Movie) ಸಿನಿಮಾ ರಿಲೀಸ್ ಆದ್ಮೇಲೆ ಸಾಕು ನಾಯಿಗಳ (Dog) ಮೇಲಿನ ಪ್ರೀತಿ ಮಾಲೀಕರಲ್ಲಿ ಇನ್ನಷ್ಟು ಹೆಚ್ಚಾಗಿದೆ. ಕೆಲವರು ತಮ್ಮ ಶ್ವಾನಗಳಿಗೆ ಆಧಾರ್ ಕಾರ್ಡ್ ಮಾಡಿಸಿದ್ದೂ ಉಂಟು. ಹಾಗೆಯೇ ಇಲ್ಲೊಬ್ಬರು ಮಹಿಳೆ ತಮ್ಮ ಮುದ್ದಿನ ಸಾಕು ನಾಯಿಗೆ ಸೀಮಂತ ಮಾಡಿ ಸಂತಸ ಪಟ್ಟಿದ್ದಾರೆ. ಇದನ್ನೂ ಓದಿ: ನಿಮ್ಮ ಸಾಧನೆ ಎಲ್ಲರಿಗೂ ಗೊತ್ತು – ರೊನಾಲ್ಡೊಗೆ ಭಾವನಾತ್ಮಕ ಸಂದೇಶ ರವಾನಿಸಿದ ಕೊಹ್ಲಿ
View this post on Instagram
ತನ್ನ ನೆಚ್ಚಿನ ಸಾಕು ನಾಯಿಗೆ ಸೀಮಂತ ಮಾಡಿರುವ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರ ಮನಗೆದ್ದಿದೆ. ಸುಜಾ ಹೌಸ್ಮೇಟ್ ಎನ್ನುವ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೋ ಹಂಚಿಕೊಂಡಿದ್ದಾರೆ. ಇದರಲ್ಲಿ ಮಹಿಳೆ, ಶ್ವಾನದ ಕುತ್ತಿಗೆಗೆ ಹಾರ ಹಾಕಿ, ಹಣೆಗೆ ಸಿಂಧೂರವಿಟ್ಟು, ಮಿರಿ ಮಿರಿ ಮಿಂಚುವ ಬಟ್ಟೆ ತೊಡಿಸಿ ಖುಷಿ ಪಟ್ಟಿದ್ದಾರೆ. ವೀಡಿಯೋ ಕಂಡು ಫಿದಾ ಆಗಿರುವ ನೆಟ್ಟಿಗರು ದೇವರು ನಿಮ್ಮನ್ನು ಆಶೀರ್ವದಿಸಲಿ ಎಂದು ಮನದುಂಬಿ ಹಾರೈಸಿದ್ದಾರೆ.
ಈಗಾಗಲೇ 3 ಲಕ್ಷಕ್ಕೂ ಅಧಿಕ ಮಂದಿ ಇನ್ಸ್ಟಾಗ್ರಾಮ್ ಗ್ರಾಮ್ನಲ್ಲಿ ವೀಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಮ್ಮನ್ನು ಬೇರ್ಪಡಿಸಬೇಡಿ- ಡೆತ್ನೋಟ್ ಬರೆದಿಟ್ಟು ಪ್ರೇಮಿಗಳು ಆತ್ಮಹತ್ಯೆ