ಚಂಡೀಗಢ: ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳ ಮೇಲೆ ಪಿಟ್ ಬುಲ್ (Pit Bull) ನಾಯಿಯೊಂದು ದಾಳಿ ಮಾಡಿದ್ದು, ಇದೀಗ ಮಹಿಳೆಯ ಕಾಲು, ಕೈ ಮತ್ತು ತಲೆಗೆ 50 ಹೊಲಿಗೆ ಹಾಕಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಹರಿಯಾಣದ (Hariyana) ರೇವಾರಿಯ (Rewari) ಬಲಿಯಾರ್ ಖುರ್ದ್ (Baliar Khurd) ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಗಾಯಗೊಂಡ ಇಬ್ಬರು ಮಕ್ಕಳನ್ನು ಶನಿವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಇದನ್ನೂ ಓದಿ: ಹಾಸನ ಭೀಕರ ಅಪಘಾತ ಪ್ರಕರಣ – ಎಸ್ಕೇಪ್ ಆಗಿದ್ದ ಹಾಲಿನ ಟ್ಯಾಂಕರ್ ಚಾಲಕ ಪೊಲೀಸರ ವಶಕ್ಕೆ
ಈ ಬಗ್ಗೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಗ್ರಾಮದ ಮಾಜಿ ಸರಪಂಚ್ ಮತ್ತು ಮಹಿಳೆಯ ಪತಿ, ಶುಕ್ರವಾರ ಮನೆಗೆ ಪತ್ನಿಯೊಂದಿಗೆ ಬಂದಾಗ ಸಾಕಿದ್ದ ನಾಯಿ ನನ್ನ ಪತ್ನಿ ಮೇಲೆ ದಾಳಿ ನಡೆಸಿದೆ ಮತ್ತು ಇಬ್ಬರು ಮಕ್ಕಳ ಮೇಲೂ ದಾಳಿ ನಡೆಸಿದೆ. ಈ ವೇಳೆ ಕಿರುಚಾಡುತ್ತಿರುವುದನ್ನು ಕೇಳಿಸಿಕೊಂಡ ಅಕ್ಕಪಕ್ಕದ ಮನೆಯವರು ನಾಯಿಯಿಂದ ನನ್ನ ಪತ್ನಿ ಮತ್ತು ಮಕ್ಕಳನ್ನು ರಕ್ಷಿಸಿದ್ದಾರೆ.
ಹಲವಾರು ಬಾರಿ ಕೋಲಿನಿಂದ ನಾಯಿಯನ್ನು ಹೊಡೆದರೂ ಅದು ತನ್ನ ದಾಳಿಯನ್ನು ನಿಲ್ಲಿಸಲಿಲ್ಲ. ಕೊನೆಗೆ ನಾಯಿಯಿಂದ ನನ್ನ ಪತ್ನಿ ಮತ್ತು ಮಕ್ಕಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಕಾಶ್ಮೀರ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ವಾಹನ ಸಂಚಾರ ಸ್ಥಗಿತ