ಮೆಕ್ಸಿಕೋ: ಮಹಿಳೆಯೊಬ್ಬರು ಅಮ್ಯೂಸ್ಮೆಂಟ್ ಪಾರ್ಕಿನಲ್ಲಿ ಪೆಂಡ್ಯೂಲಮ್ನಲ್ಲಿ ರೈಡ್ ಮಾಡುತ್ತಿದ್ದಾಗ ಮೇಲಿಂದ ಕೆಳಗೆ ಬಿದ್ದ ಘಟನೆ ಮೆಕ್ಸಿಕೋದ ಸಿಯುಡಾಡ್ ಜುಆರೆಸ್ನಲ್ಲಿ ನಡೆದಿದ್ದು, ವಿಡಿಯೋ ಈಗ ವೈರಲ್ ಆಗುತ್ತಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆ ಪೆಂಡ್ಯೂಲಮ್ ರೈಡ್ ಮಾಡುತ್ತಿದ್ದಳು. ಈ ವೇಳೆ ಪೆಂಡ್ಯೂಲಮ್ ಮೇಲೆ ಕೆಳಗೆ ಆಗುತ್ತಿತ್ತು. ಸ್ವಲ್ಪ ಹೊತ್ತಿನ ಬಳಿಕ ಪೆಂಡ್ಯೂಲಮ್ ಒಂದು ರೌಂಡ್ ತಿರುಗಿತ್ತು. ಈ ವೇಳೆ ಮಹಿಳೆ ತನ್ನ ಸೀಟಿನಿಂದ ಕೆಳಗೆ ಬಿದ್ದಿದ್ದಾಳೆ.
ಮಹಿಳೆ ಕೆಳಗೆ ಬೀಳುವಾಗ ಪೆಂಡ್ಯೂಲಮ್ ತಿರುಗುತ್ತಿದ್ದ ಕಾರಣ ಆಕೆಗೆ ತಾಗಿದೆ. ಪರಿಣಾಮ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾಳೆ. ಮಹಿಳೆ ಬೀಳುತ್ತಿದ್ದನ್ನು ನೋಡಿದ ಅಲ್ಲಿಯ ಜನರು ತಕ್ಷಣ ಆಪರೇಟರ್ ಬಳಿ ಹೋಗಿ ಪೆಂಡ್ಯೂಲಮ್ ನಿಲ್ಲಿಸಲು ಹೇಳುತ್ತಾರೆ.
ಮಹಿಳೆಗೆ ಯಾವ ರೀತಿ ಗಾಯಗೊಂಡಿದ್ದಾಳೆ ಎಂಬುದು ತಿಳಿದು ಬಂದಿಲ್ಲ. ಆದರೆ ಮಹಿಳೆ ಕೆಳಗೆ ಬಿದ್ದ ತಕ್ಷಣ ಮತ್ತೆ ಮೇಲೆ ಎದ್ದು ಬಂದು ನಿಂತಿದ್ದಾಳೆ. ಮಹಿಳೆ ಪೆಂಡ್ಯೂಲಮ್ನಿಂದ ಬೀಳುತ್ತಿರುವ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.
ಈ ಘಟನೆ ಜೂನ್ 14ರಂದು ರಿಯೋ ಗ್ರಾಂಡೆಯಲ್ಲಿ ಮೆಕ್ಸಿಕನ್ ನಗರದ ಪ್ಲಾಜಾ ಲಾಸ್ ಆಂಟೆನಾಸ್ನ ಕಟಪ್ಲಮ್ ಅಮ್ಯೂಸ್ಮೆಂಟ್ ಪಾರ್ಕಿನಲ್ಲಿ ನಡೆದಿದೆ ಎಂದು ಸ್ಥಳೀಯ ಪ್ರತಿಕೆಯಲ್ಲಿ ಪ್ರಕಟಗೊಂಡಿದೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]