ಕೋಲಾರ: ಹಾಲಿನ ಬೆಲೆ ಏರಿಕೆಯ ಬೆನ್ನಲ್ಲೇ (Milk Price Hike) ಪಶು ಆಹಾರದ ಬೆಲೆಯಲ್ಲೂ ಏರಿಕೆಯಾದ ಪರಿಣಾಮ ಸರ್ಕಾರ ರೈತರಿಗೆ ಬಲಗೈನಲ್ಲಿ ಕೊಟ್ಟು ಎಡಗೈನಲ್ಲಿ ಕಿತ್ತುಕೊಂಡಿದೆ ಎಂದು ಕೋಲಾರದ (Kolar) ರೈತರು ಬೇಸರ ಹೊರಹಾಕಿದ್ದಾರೆ.
ಪಶು ಆಹಾರದ ಬೆಲೆಗಳಲ್ಲಿ ಏರಿಕೆ ಕಂಡಿರುವ ಕುರಿತು ಮಾಹಿತಿ ನೀಡುತ್ತಿರುವ ಪಶು ಆಹಾರ ಮಾರಾಟ ಮಳಿಗೆಗಳು, ಮತ್ತೊಂದೆಡೆ ಪಶು ಆಹಾರದ ಬೆಲೆ ಏರಿಕೆಗೆ ಆಕ್ರೋಶಗೊಂಡಿರುವ ರೈತರು. ಆದರೆ, ಪಶು ಆಹಾರವನ್ನ ಸಬ್ಸಿಡಿ ದರದಲ್ಲಿ ಕೊಡುತ್ತಿದ್ದೇವೆ ಎನ್ನುತ್ತಿರುವ ಕೋಮುಲ್ ಆಡಳಿತ ಮಂಡಳಿ.
ನವೆಂಬರ್ 1ರಿಂದ ರಾಜ್ಯಾದ್ಯಂತ ಸರ್ಕಾರ ಹಾಲಿನ ಬೆಲೆಯಲ್ಲಿ 8 ರೂ. ಏರಿಕೆ ಮಾಡಿ ಏಳು ರೂಪಾಯಿ ನೇರವಾಗಿ ರೈತರಿಗೆ ನೀಡುವುದಾಗಿ ಹೇಳಿ ಬೆಲೆ ಏರಿಕೆ ಮಾಡಿತ್ತು. ಈ ಬೆನ್ನಲ್ಲೇ ಪಶು ಆಹಾರಗಳ ಬೆಲೆಯಲ್ಲೂ ಗಣನೀಯ ಏರಿಕೆ ಮಾಡಲಾಗಿದೆ. ಒಂದು ಬ್ಯಾಗ್ ಪಶು ಆಹಾರದ ಮೇಲೆ ಸುಮಾರು 100 ರಿಂದ 150 ರೂ. ಏರಿಕೆ ಕಂಡಿದೆ. ರಾಜ್ಯದಲ್ಲಿ ಬರ ಪರಿಸ್ಥಿತಿಯಲ್ಲಿ ಹಸಿರು ಮೇವು ಸಿಗದ ಸ್ಥಿತಿಯಲ್ಲಿ ರೈತರು ಹಾಲು ಉತ್ಪಾದನೆ ಮಾಡಬೇಕು ಅಂದರೆ ಹೆಚ್ಚೆಚ್ಚು ಪಶು ಆಹಾರವನ್ನು ಬಳಕೆ ಮಾಡಬೇಕು ಇಂತಹ ಪರಿಸ್ಥಿತಿಯಲ್ಲಿ ದರ ಏರಿಕೆಯಾಗಿರುವುದಕ್ಕೆ ಹಾಲು ಉತ್ಪಾದಕರು, ರೈತರು ಬೇಸರ ಹೊರಹಾಕಿದ್ದಾರೆ.ಇದನ್ನೂ ಓದಿ: ಡಿವೈಎಸ್ಪಿ ಉಮಾರಾಣಿ ನೇತೃತ್ವದಲ್ಲಿ ದಾಳಿ; ಕಸಾಯಿಖಾನೆ ಸಾಗಿಸುತ್ತಿದ್ದ ಜಾನುವಾರುಗಳ ರಕ್ಷಣೆ
ಹಾಲು ಬೆಲೆ ಏರಿಕೆಗೂ ಮೊದಲು ಹಿಂಡಿ ಬೆಲೆಯಲ್ಲಿ 1600 ರೂ. ಇದ್ದ ಬೆಲೆ ಈಗ 1750 ರೂ. ಏರಿಕೆ ಕಂಡಿದೆ. ಬೂಸಾ ಬೆಲೆ 1100 ದಿಂದ 1150 ರೂ.ಗೆ ಏರಿಕೆಯಾಗಿದೆ, ಇನ್ನು ಡಿಲಕ್ಸ್ ಬ್ರಾನ್- 1500- 1650 ಏರಿಕೆಯಾಗಿದೆ ಜೊತೆಗೆ ಕಡ್ಲೆ ಹೊಟ್ಟಿನಲ್ಲೂ ಬೆಲೆ ಏರಿಕೆಯಾಗಿದೆ. ಸದ್ಯ ಹಾಲು ಒಕ್ಕೂಟದಿಂದ ನೀಡುವ ಪೀಡ್ಸ್ ಬೆಲೆಗಳಲ್ಲಿ ಮಾತ್ರ ಸದ್ಯ ಯಾವುದೇ ಏರಿಕೆ ಕಂಡಿಲ್ಲ..ಇದನ್ನೂ ಓದಿ: ದೀಪಾವಳಿ ಸಂಭ್ರಮದ ನಡುವೆ ಅಗ್ನಿ ಅವಘಡ – ಮೂರು ಅಂಗಡಿಗಳು ಸಂಪೂರ್ಣ ಭಸ್ಮ
