ನೆಲಮಂಗಲ: ಅಕ್ರಮವಾಗಿ ಕಸಾಯಿಖಾನೆ ಸಾಗಿಸುತ್ತಿದ್ದ ಜಾನುವಾರುಗಳ ಖಚಿತವಾದ ಮಾಹಿತಿ ಮೇರೆಗೆ ನೆಲಮಂಗಲ (Nelamangala) ಡಿವೈಎಸ್ ಪಿ ಉಮಾರಾಣಿ ನೇತೃತ್ವದಲ್ಲಿ ಪೊಲೀಸರ ತಂಡ ದಾಳಿ ಮಾಡಿ ಜಾನುವಾರುಗಳನ್ನ ರಕ್ಷಣೆ ಮಾಡಿದೆ.
ಈ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ಬಳಿಯ ಕೂತಗಟ್ಟ ಗ್ರಾಮದಲ್ಲಿ ನಡೆದಿದೆ. ಕಳೆದ ರಾತ್ರಿ ಎರಡು ಗಂಟೆ ಸುಮಾರಿನಲ್ಲಿ ಜಾನುವಾರುಗಳನ್ನ ರಕ್ಷಣೆ ಮಾಡಲಾಗಿದೆ.
70 ಎಮ್ಮೆಗಳು 3 ಹಸುಗಳನ್ನ ಲಾರಿಯಲ್ಲಿ ಸಾಗಾಟ ಮಾಡುವ ವೇಳೆ ಖಚಿತವಾಗಿ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು ಲಾರಿ ಹಾಗೂ ಇಬ್ಬರನ್ನ ವಶಕ್ಕೆ ಪಡೆಡಿದ್ದಾರೆ. ಬಳಿಕ ಪೊಲೀಸರು ವಿಚಾರಣೆ ನಡೆಸಿ ಡಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

