ನವದೆಹಲಿ: ಪತಿ ಫೋನ್ ಕಾಲ್ ರಿಸೀವ್ ಮಾಡಲಿಲ್ಲ ಎಂಬ ಕಾರಣಕ್ಕೆ 37 ವರ್ಷದ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ.
ಭಾನುವಾರದಂದು ಕರ್ವಾ ಚೌತ್ ಹಬ್ಬದ ಅಂಗವಾಗಿ ಹೆಂಡತಿ ಉಪವಾಸ ಮುಗಿಸಿ ಪತಿಗೆ ಫೋನ್ ಮಾಡಿದ್ದಾರೆ. ಆದರೆ ಪತಿ ಕಾಲ್ ರಿಸೀವ್ ಮಾಡಿಲ್ಲ ಎಂದು ನೊಂದ ಪತ್ನಿ ಸೋಮವಾರದಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇವರಿಗೆ 3 ವರ್ಷಗಳ ಹಿಂದೆ ಮದುವೆಯಾಗಿದ್ದು, ಮದುವೆಯಾದ 15 ದಿನಗಳ ನಂತರ ಪತಿ ಅಮೆರಿಕಗೆ ಹೋಗಿ ನೆಲೆಸಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಉಪವಾಸ ಮಾಡದ್ದಕ್ಕೆ ಚಾಕುವಿನಿಂದ ಪತ್ನಿಗೆ ಇರಿದು ಆತ್ಮಹತ್ಯೆ ಮಾಡ್ಕೊಂಡ ಪತಿ https://t.co/oJB5qu0MwX#Murder#Wife#Husband#Karwachauthpic.twitter.com/f4h1itvZY7
— PublicTV (@publictvnews) October 9, 2017
ಬಾಲಿವುಡ್ ನಟಿಯರು ಒಟ್ಟಿಗೆ ಸೇರಿ ಕರ್ವಾ ಚೌತ್ ಆಚರಿಸಿದ್ರು! -ಫೋಟೋಗಳಲ್ಲಿ ನೋಡಿhttps://t.co/vQMWi5J8B4#Karwachauth#Bollywood#Cinema#Actresspic.twitter.com/p3qjS7Y4wj
— PublicTV (@publictvnews) October 9, 2017












