– ಕರಡು ಮತದಾರರ ಪಟ್ಟಿ ಆ.24 ರಂದು ಪ್ರಕಟ
ಬೆಂಗಳೂರು: ಕರ್ನಾಟಕದಲ್ಲಿ (Karnataka) ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (Special Intensive Revision – SIR) ಮನೆ ಮನೆ ಸಮೀಕ್ಷೆ ಇಂದು ಮುಕ್ತಾಯವಾಗಿದ್ದು 1.08 ಕೋಟಿ ಮತದಾರರ ಹೆಸರು ಡಿಲೀಟ್ ಆಗಿದೆ.

ಒಟ್ಟು 1,08,31,945 ಅಂದರೆ 19.54% ರಷ್ಟು ಮತದಾರರನ್ನು ASDDO(ಗೈರು, ಸ್ಥಳಾಂತರಗೊಂಡವರು, ಮೃತರು, ನಕಲಿ ಮತ್ತು ಇತರರು – Absentee, Shifted, Dead, Duplicate, and Others) ಪಟ್ಟಿಗೆ ಸೇರಿಸಲಾಗಿದೆ.

5.54 ಕೋಟಿ ಎನಮ್ಯೂರೇಷನ್ ಫಾರಂ ವಿತರಣೆ ಮಾಡಲಾಗಿದ್ದು, 4.46 ಕೋಟಿ ಫಾರಂ ಡಿಜಿಟಲೈಸೇಷನ್ ಅಂದರೆ 80.46% ಡಿಜಿಟಲೈಸೇಷನ್ ಆಗಿದೆ. ಬೆಂಗಳೂರಿನಲ್ಲಿ ಒಟ್ಟು ಮತದಾರರು 1.08 ಕೋಟಿ ಮತದಾರರ ಪೈಕಿ 56.73 ಲಕ್ಷ ಮತದಾರರ ಡಿಜಿಟಲೈಸೇಷನ್ ಆಗಿದೆ. ಬಾಕಿ 47 ಲಕ್ಷದ 15 ಸಾವಿರದ 188 ಮತದಾರರನ್ನು ಎಡಿಎಸ್‌ಎಸ್‌ಓ ಎಂದು ಗುರುತಿಸಲಾಗಿದೆ.

ಮತಗಟ್ಟೆಗಳ ತಾರ್ಕಿಕ ಮರುಹೊಂದಾಣಿಕೆ ಕಾರ್ಯ ನಾಳೆಯಿಂದ ಆರಂಭವಾಗಲಿದೆ. ಕರುಡು ಮತದಾರರ ಪಟ್ಟಿ ಆಗಸ್ಟ್ 24 ರಂದು ಪ್ರಕಟವಾಗಲಿದೆ. ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆಗೆ ಆಗಸ್ಟ್ 24 ರಿಂದ ಸೆಪ್ಟೆಂಬರ್ 23 ರವರೆಗೆ ಕಾಲಾವಕಾಶ ಇರಲಿದೆ.
ಹಕ್ಕು ಆಕ್ಷೇಪಣೆಗಳ ವಿಲೇವಾರಿ ಆಗಸ್ಟ್ 24 ರಿಂದ ಅಕ್ಟೋಬರ್ 22 ರವರೆಗೂ ನಡೆಯಲಿದೆ. ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 10 ರಂದು ಪ್ರಕಟವಾಗಲಿದೆ.
ಅಂಕಿ ಸಂಖ್ಯೆಯಲ್ಲಿ ಎಸ್‌ಐಆರ್
ಒಟ್ಟು ಗಣತಿ ನಮೂನೆ ಹಂಚಿಕೆ: 5,54,32,314
ಸ್ವೀಕೃತ ನಮೂನೆಗಳು: 4,46,00,369 – 80.46%
ಎಎಸ್‌ಡಿಡಿಒ ಎಂದು ಗುರುತಿಸಲಾದ ಮತದಾರರ ಸಂಖ್ಯೆ: 1,08,31,945 – 19.54%
ಮತರರು ಆನ್‌ಲೈನ್‌ನಲ್ಲಿ ಸಲ್ಲಿಸಿದ ಇಎಫ್‌ಗಳು: 7,11,712 (1.28%)

ASDDO ಪಟ್ಟಿಯಲ್ಲಿ ಯಾರಿದ್ದಾರೆ?
ಪತ್ತೆಯಾಗದ / ಗೈರುಹಾಜರಾದ ಮತದಾರರು: 15,28,985 – 2.76%
ಶಾಶ್ವತವಾಗಿ ಸ್ಥಳಾಂತರಗೊಂಡ ಮತದಾರರು: 65,61,607 – 11.84%
ಮರಣ ಹೊಂದಿದ ಮತದಾರರು: 16,38,839 – 2.96%
ಈಗಾಗಲೇ ದಾಖಲಾಗಿರುವ ಮತದಾರರು: 7,07,792 – 1.28%
ಇತರರು: 3,94,722 – 0.71%
