ವಾಷಿಂಗ್ಟನ್: ಭಾರತೀಯ ಮೂಲದ ವ್ಯಕ್ತಿಯೊಬ್ಬ ಜಗಳವಾಡಿ ಬೇರಾಗಿದ್ದ ಹೆಂಡತಿ, ತನ್ನ ಸಹೋದ್ಯೋಗಿಯನ್ನ ಡೇಟ್ ಮಾಡಿದ್ದಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಅಮೆರಿಕದ (America) ಚಿಕಾಗೋದಲ್ಲಿ(Chicago) ನಡೆದಿದೆ.
ಗುಜರಾತ್ ಮೂಲದ (31) ಅಂಕುರ್ ಪಟೇಲ್ ಕೊಲೆ ಆರೋಪಿ. 32 ವರ್ಷದ ಪತ್ನಿ ಕೊಲೆಯಾದ ದುರ್ದೈವಿ. ವಿಸ್ಕಾನ್ಸಿನ್ಸ್ನಲ್ಲಿ ವಾಸವಾಗಿದ್ದ ಈ ದಂಪತಿಗೆ ಒಬ್ಬ ಹೆಣ್ಣು ಮಗು ಕೂಡ ಇದೆ.
ಕುಟುಂಬಸ್ಥರ ಒತ್ತಡದಿಂದಾಗಿ ಅಂಕುರ್ನಿಂದ ಬೇರೆಯಾಗಿದ್ದ ಮಹಿಳೆ, ಮೂರು ತಿಂಗಳಿಂದ ಒಂಟಿಯಾಗಿ ಜೀವನ ನಡೆಸುತ್ತಿದ್ದಳು. ಈ ವೇಳೆ ಆಫೀಸ್ನಲ್ಲಿ ಸಹುದ್ಯೋಗಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದ ಮಹಿಳೆ, ಮಗಳನ್ನ ಗಂಡನ ಮನೆಯಲ್ಲೇ ಬಿಟ್ಟು ಪ್ರಿಯಕರನೊಂದಿಗೆ ಲಿವಿಂಗ್ನಲ್ಲಿ ಇದ್ದಳು.
ಈ ವಿಚಾರ ತಿಳಿದ ನಂತರ ಅಂಕೂರ್ ಅವರಿಬ್ಬರನ್ನು ಕೊಲೆ ಮಾಡುವುದಾಗಿ ಹಲವು ಬಾರಿ ಬೆದರಿಕೆ ಹಾಕಿದ್ದಾನೆ. ಆತನನ್ನು ಬಿಟ್ಟು ತನ್ನೊಂದಿಗೆ ಮತ್ತೇ ಜೀವನ ನಡೆಸುವಂತೆ ಒತ್ತಾಯಿಸಿದ್ದಾನೆ. ಆದರೆ, ಆತನ ಬೇಡಿಕೆಗೆ ಒಪ್ಪದ ಹೆಂಡತಿಯನ್ನ ಮಗಳ ನೆಪದಲ್ಲಿ ಅಪಾರ್ಟ್ಮೆಂಟ್ಗೆ ಕರೆಸಿದ್ದಾನೆ. ನಂತರ, ಚಾಕುವಿನಿಂದ ಆಕೆಯ ಕುತ್ತಿಗೆ ಇರಿದು ಕೊಲೆ ಮಾಡಿದ್ದಾನೆ. ಬಳಿಕ ಅಲ್ಲಿಂದ ಅಂಕುರ್ ಪರಾರಿಯಾಗಿದ್ದಾನೆ.
ಕೊಲೆಯಾದ ಮೂರು ತಿಂಗಳ ಬಳಿಕ ಈ ಘಟನೆ ತಿಳಿದುಬಂದಿದೆ. ಕೊಲೆಗೂ ಮುನ್ನ ಮಗಳನ್ನು ಭಾರತಕ್ಕೆ ಕಳುಹಿಸಿದ್ದ ಆರೋಪಿ ಅಂಕುರ್, ನಂತರ ತಾನು ಭಾರತಕ್ಕೆ ಬರಲು ಪ್ರಯತ್ನಿಸಿದ್ದಾನೆ.
ಆರೋಪಿ ಚಿಕಾಗೋದ ಒ’ಹೇರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಿದ್ದಾನೆ. ಆದರೆ, ಕೌಂಟರ್ ಮುಚ್ಚಿದ್ದರಿಂದ ಆತನಿಗೆ ಟಿಕೆಟ್ ಖರೀದಿಸಲು ಸಾಧ್ಯವಾಗಲಿಲ್ಲ. ನಂತರ ಆತ ಹತ್ತಿರದ ಹೋಟೆಲ್ಗೆ ಹೋಗಿ ಕೊಲೆ ಮಾಡಲು ಬಳಸುತ್ತಿದ್ದ ಚಾಕು ಮತ್ತು ಇನ್ನಿತರ ವಸ್ತುಗಳನ್ನು ಅಲ್ಲೇ ಬಿಟ್ಟು ಬಂದಿದ್ದಾನೆ. ಇದನ್ನೂ ಓದಿ: ದೆಹಲಿಯಲ್ಲಿ ಪ್ರತಿಭಟನೆ ಬಿಸಿ: ವ್ಯಾಪಾರಕ್ಕೆ ಭಾರಿ ಹೊಡೆತ, ಸುಪ್ರೀಂ ಮೊರೆ ಹೋದ ವ್ಯಾಪಾರಿಗಳು
ಮರುದಿನ ಭಾರತಕ್ಕೆ ಬರಲು ವಿಮಾನ ಟಿಕೆಟ್ ಖರೀದಿಸಿದ್ದಾನೆ. ಆದರೆ, ವಿಮಾನ ಹತ್ತುವ ಮೊದಲೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: KPSC Scam | 10 ತಿಂಗಳಲ್ಲಿ ಕೋಟಿ ಕೋಟಿ ಕಮಾಯ್ – 8 ಕೋಟಿ ಮೌಲ್ಯದ ಆಸ್ತಿ ಖರೀದಿಸಿದ್ದ ಕನ್ನಾಳೆ


