ಚಾರ್ಲಿ 777 ಸಿನಿಮಾ ರಿಲೀಸ್ ನಂತರ ರಕ್ಷಿತ್ ಶೆಟ್ಟಿ (Rakshit Shetty) ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಯಾವುದೇ ಕಾರ್ಯಕ್ರಮಗಳಲ್ಲೂ ಅವರು ಭಾಗಿಯಾಗುತ್ತಿಲ್ಲ. ಚಾರ್ಲಿ ದೊಡ್ಡ ಮಟ್ಟದಲ್ಲಿ ಹಿಟ್ ಆದರೂ, ಅವರು ಮಾಧ್ಯಮಗಳ ಮುಂದೆ ಬರುತ್ತಿಲ್ಲ. ಅದಕ್ಕೊಂದು ಕಾರಣವಿದೆ. ಮುಂದಿನ ಸಿನಿಮಾಗಾಗಿ (New Movie) ಅವರು ಹೇರ್ ಸ್ಟೈಲ್ ಮತ್ತು ಬಾಡಿ ಶೇಪ್ ಬದಲಾಯಿಸಿಕೊಂಡಿದ್ದಾರೆ. ಅದು ಯಾರಿಗೂ ಗೊತ್ತಾಗಬಾರದು ಎನ್ನುವ ಕಾರಣಕ್ಕಾಗಿ ಆಚೆ ಕಾಣಿಸಿಕೊಳ್ಳುತ್ತಿಲ್ಲವಂತೆ.
Advertisement
ಸಿನಿಮಾ ಕಾರ್ಯಕ್ರಮ ಅಥವಾ ಯಾವುದೇ ಖಾಸಗಿ ಕಾರ್ಯಕ್ರಮಗಳಿಗೆ ರಕ್ಷಿತ್ ಶೆಟ್ಟಿ ಅವರನ್ನು ಆಹ್ವಾನಿಸಿದರೆ, ಅವರು ಒಪ್ಪಿಕೊಳ್ಳದೇ ಇರುವ ಕಾರಣ ಇದೆ. ಪಾತ್ರಕ್ಕಾಗಿ ಅವರು ವಿವಿಧ ರೀತಿಯಲ್ಲಿ ತಯಾರಾಗಿದ್ದರಿಂದ, ಅವರು ಯಾವುದೇ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿಲ್ಲ. ಆದರೂ, ಮೊನ್ನೆ ದೇವಸ್ಥಾನವೊಂದಕ್ಕೆ ಅವರು ಭೇಟಿ ನೀಡಿದ್ದಾರೆ. ಅಲ್ಲಿಯೂ ಆದಷ್ಟು ಜನರಿಂದ ಮತ್ತು ಕ್ಯಾಮೆರಾಗಳಿಂದ ದೂರ ಉಳಿದಿದ್ದಾರೆ.
Advertisement
Advertisement
ಸದ್ಯ ರಕ್ಷಿತ್ ಶೆಟ್ಟಿ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಮುಗಿದ ನಂತರ ಹೊಂಬಾಳೆ ಫಿಲ್ಮ್ಸ್ (Hombale Films) ಗಾಗಿ ಅವರು ಸಿನಿಮಾವೊಂದನ್ನು ನಿರ್ದೇಶನ ಮಾಡಬೇಕಿದೆ. ಆ ಸಿನಿಮಾ ಕೆಲಸದಲ್ಲೂ ಶೆಟ್ಟಿ ಬ್ಯೂಸಿಯಾಗಿದ್ದಾರೆ. ಹಾಗಾಗಿ ಅವರು ಹೆಚ್ಚೆಚ್ಚು ಜನರೊಂದಿಗೆ ಬೆರೆಯುತ್ತಿಲ್ಲ. ಮತ್ತು ಸಿನಿಮಾ ತಂಡದೊಂದಿಗೆ ಮಾತ್ರ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಪೃಥ್ವಿ ಶಾ ಯಾರು ಅಂತಾನೇ ಗೊತ್ತಿಲ್ಲ, ಆತ ಕುಡಿದು ಬಂದಿದ್ದ – ಸಪ್ನಾ ಗಿಲ್
Advertisement
ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಬಹುತೇಕ ಕೆಲಸ ಬಹುತೇಕ ಮುಗಿದಿದೆ. ಅಲ್ಲದೇ ರಕ್ಷಿತ್ ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯಲ್ಲಿ ಮನೆಯೊಂದನ್ನು ಕಟ್ಟುತ್ತಿದ್ದಾರೆ. ಮನೆಯಲ್ಲಿ ಸ್ಟುಡಿಯೋ, ಆಫೀಸ್ ಸೇರಿದಂತೆ ಸಿನಿಮಾ ಸಂಬಂಧಿ ಅಷ್ಟೂ ಚಟುವಟಿಕೆಗಳು ಅದೇ ಕಟ್ಟಡದಲ್ಲಿ ನಡೆಯಲಿವೆಯಂತೆ. ಆ ಕೆಲಸದಲ್ಲೂ ತಮ್ಮನ್ನು ತಾವು ತೊಡಗಿಕೊಂಡಿದ್ದಾರೆ. ಈ ಎಲ್ಲ ಕಾರಣದಿಂದಾಗಿ ಶೆಟ್ಟರು ಮನೆಯಲ್ಲೇ ಬೀಡುಬಿಟ್ಟಿದ್ದಾರೆ.