ಬೆಂಗಳೂರು: ರಾಜ್ಯದಲ್ಲಿ ನಿಲ್ಲಿಸಿರುವ ವಿದ್ಯಾರ್ಥಿ ಚುನಾವಣೆಯನ್ನು (Student Election) ಈ ವರ್ಷದಿಂದಲೇ ಆರಂಭಿಸುತ್ತೇವೆ ಎಂದು ಸಿಎಂ ಡಿ.ಕೆ ಶಿವಕುಮಾರ್ (D.K. Shivakumar) ಹೇಳಿದರು.
ಅರಮನೆ ಮೈದಾನದಲ್ಲಿ ನಡೆದ ಕೆಪಿಸಿಸಿ (KPCC) ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ, ಅಧಿಕಾರ ಹಸ್ತಾಂತರಿಸಿ ಅವರು ಮಾತಾಡಿದರು. ಈ ವೇಳೆ ವಿದ್ಯಾರ್ಥಿ ಚುನಾವಣೆ ಆರಂಭಿಸುವ ಬಗ್ಗೆ ಅವರು ಮಾಹಿತಿ ನೀಡಿದರು.

ಈ ವೇಳೆ ತಾವು ಅಧಿಕಾರ ವಹಿಸಿಕೊಂಡ ದಿನವನ್ನು ನೆನಪಿಸಿಕೊಂಡರು. ನನಗೆ 2020ರ ಮಾ.10 ರಂದು ಸೋನಿಯಾ ಗಾಂಧಿ ಪಕ್ಷದ ಅಧಿಕಾರ ನೀಡಿದ್ದರು. ಆಗ ಇಷ್ಟೊಂದು ದೊಡ್ಡದಾಗಿ ಕಾರ್ಯಕ್ರಮ ಮಾಡೋಕೆ ಆಗಿರಲಿಲ್ಲ. ಜೂಮ್ ಕಾಲ್‌ನಲ್ಲೇ ನಾನು ಅಧಿಕಾರ ಸ್ವೀಕರಿಸಿದೆ. ನಿಮ್ಮ ವಿಶ್ವಾಸ, ಸಹಕಾರದಿಂದ ಸೇವೆ ಮಾಡಿದ್ದೇನೆ. ನಾನು ಮನುಷ್ಯ, ನನ್ನ ಕೈಯಲ್ಲಿ ಅನೇಕ ತಪ್ಪು ಆಗಿರಬಹುದು ಎಂದರು. ಇದನ್ನೂ ಓದಿ: ಇದು ಕೇವಲ ಆರಂಭ, ಮುಂದೆ ಹೋರಾಟ ದೊಡ್ಡಮಟ್ಟದಲ್ಲಿ ಇದೆ: ನಿಖಿಲ್ ಕುಮಾರಸ್ವಾಮಿ ಗುಡುಗು
ಕೋವಿಡ್ ಕಾಲದಲ್ಲಿ ಸಿದ್ದರಾಮಯ್ಯ (Siddaramaiah) ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿದರು. ಅಂದು ನಾನು, ಸಿದ್ದರಾಮಯ್ಯ ಅವರು ಸೇರಿ ಸಂಕಲ್ಪ ಮಾಡಿದ್ದೆವು. ಖರ್ಗೆ ಅವರು ವಿರೋಧ ಪಕ್ಷದ ನಾಯಕರಾಗಿದ್ದರು. ವೇಣುಗೋಪಾಲ್ ಅವರು ಪಕ್ಷದ ಕಾರ್ಯದರ್ಶಿಯಾಗಿ ಸಾಕ್ಷಿಯಾಗಿದ್ದರು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿಯವರು ನನಗೆ ಆಶೀರ್ವಾದ ಮಾಡಿದರು. ಶುಭ ಘಳಿಗೆಯಲ್ಲಿ ಅಂದು ನಾನು ಅಧಿಕಾರ ಸ್ವೀಕರಿಸಿದ್ದೆ.
ಕೋವಿಡ್ ಕಾಲದಲ್ಲಿ ಮನೆಯಿಂದ ಹೊರಗೆ ಹೋಗೋಕೆ ಆಗಿರಲಿಲ್ಲ. ಜೂಮ್ ಮೀಟಿಂಗ್ ಮೂಲಕವೇ ಅನೇಕ ಸಮಸ್ಯೆ ಪರಿಹರಿಸಿದ್ದೇವೆ. ಕೋಟಿ ಕೋಟಿ ಹಣ ವೆಚ್ಚ ಮಾಡಿ ಫುಡ್ ಕಿಟ್ ಕೊಟ್ಟಿದ್ದೇವೆ. ಕೆಲವರು ಯಾದಗಿರಿ ವರೆಗೂ ಬಸ್‌ನಲ್ಲಿ ಹೋಗಬೇಕಿತ್ತು. ಆಗ ಕೆಪಿಸಿಸಿ ವತಿಯಿಂದ 1 ಕೋಟಿ ರೂ. ಚೆಕ್ ಕೊಟ್ಟೆ. ರೈಲು, ಬಸ್‌ನಲ್ಲಿ ಹೋಗೋಕೆ ವ್ಯವಸ್ಥೆ ಮಾಡಿದೆ. ಅಂದು ಮಾತು ಕೊಟ್ಟಂತೆ ನಡೆದುಕೊಂಡಿದ್ದೇವೆ. ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ಸರ್ಕಾರಿ ನೌಕರಿ ನೀಡಿದ್ದೇವೆ ಎಂದರು.

ಕೃಷಿ ಕಾಯ್ದೆ ವಿರುದ್ಧ ಹೋರಾಟ ಮಾಡಿದ್ದೆವು. ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡಿದ್ದೆವು. ಆಗ ಇಬ್ಬರು ಮಂತ್ರಿಗಳು ರಾಜೀನಾಮೆ ಕೊಡಿಸಿದ್ದೆವು. ಆಗ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರಿಗೆ ಕಿರುಕುಳ ನೀಡಿದರು. ಅದೆಲ್ಲಾ ಗಮನದಲ್ಲಿಟ್ಟುಕೊಂಡು ಹೋರಾಟ ಮಾಡಿದ್ವಿ. ಕೃಷ್ಣ ಕಾವೇರಿ ಹೋರಾಟ, ಮೇಕೆದಾಟು ಹೋರಾಟ ಮಾಡಿದ್ವಿ. ಅಂದು ಬಿಜೆಪಿವರು ಅವಕಾಶ ನೀಡಲಲ್ಲಿ. ಈಗ ಅದೆಲ್ಲಾ ಇತಿಹಾಸ ಎಂದರು.
ಸಿದ್ದರಾಮಯ್ಯ ಅವರು ಕೊಟ್ಟ ಆಡಳಿತ ಇಡೀ ದೇಶಕ್ಕೆ ಒಂದು ಮಾದರಿಯಾಗಿದೆ. ಈಗ ಬಿಕೆ ಹರಿಪ್ರಸಾದ್ (B.K Hariprasad) ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಹರಿಪ್ರಸಾದ್ ಜೊತೆ ಇಡೀ ಸರ್ಕಾರ ಇರುತ್ತದೆ. 2028ರಲ್ಲಿ ಮತ್ತೊಮ್ಮೆ ನಾವು ಅಧಿಕಾರಕ್ಕೆ ಏರಬೇಕು ಎಂದರು.
ಪ್ರತಿ ಪಂಚಾಯತಿ, ಪ್ರತಿ ವಾರ್ಡ್‌ಗೆ ಹೆಚ್ಚುವರಿಯಾಗಿ 5 ಜನ ಕಾರ್ಯಕರ್ತರನ್ನು ಗ್ಯಾರಂಟಿ ಸಮಿತಿಗೆ ನೇಮಕ ಮಾಡಲು ತೀರ್ಮಾನಿಸಿದ್ದೇವೆ. ಗ್ಯಾರಂಟಿ ಪರಿಷ್ಕರಣೆಗೆ ಅವರನ್ನ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಇದೇ ವೇಳೆ ಅವರು ಮಾಹಿತಿ ನೀಡಿದರು. ಇದನ್ನೂ ಓದಿ: ಅಡ್ಡಮತದ ಅಪಚಾರಕ್ಕೆ ಧರ್ಮಸ್ಥಳವನ್ನು ಎಳೆಯೋದು ಬೇಡ – ಸುರೇಶ್ ಕುಮಾರ್ ಆಕ್ಷೇಪ
