ರಾಮನಗರ: ರಾಷ್ಟ್ರಧ್ವಜ ಹಾರಿಸದ, ರಾಷ್ಟ್ರಗೀತೆ ಹೇಳದ ಬಿಜೆಪಿ (BJP) ಮತ್ತು ಆರ್‌ಎಸ್‌ಎಸ್‌ನವರಿಂದ (RSS) ನಮಗೆ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಸಚಿವ ಹೆಚ್.ಸಿ.ಬಾಲಕೃಷ್ಣ (HC Balakrishna) ತಿರುಗೇಟು ನೀಡಿದ್ದಾರೆ.
ವಂದೇ ಮಾತರಂ (Vande Mataram) ಗೀತೆಯನ್ನು ಮೊಟಕುಗೊಳಿಸಲಾಗಿದೆ ಎಂಬ ಬಿಜೆಪಿ ಟೀಕೆಗೆ ಉತ್ತರಿಸಿದ ಅವರು, ಗೀತೆ ಉದ್ದವಿರುವ ಕಾರಣ ಎರಡು ಚರಣ ಹಾಡಲಾಗುತ್ತಿದೆ. ನಾಡಗೀತೆಯಲ್ಲೂ ಕೆಲವು ಸಾಲುಗಳನ್ನು ಬಿಟ್ಟು ಹಾಡಲಾಗುವುದಿಲ್ಲವೇ? ಹಾಗೆಂದ ಮಾತ್ರಕ್ಕೆ ಅಗೌರವ ಅಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಖಾಸಗಿ ಶಾಲಾ ಶಿಕ್ಷಕರಿಗೂ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿ ನೀಡುವ ಚಿಂತನೆ ಇದೆ: ಮಧು ಬಂಗಾರಪ್ಪ
ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲಹೆ ನೀಡಿರೋ ವಿಚಾರ ಕುರಿತು ಕುದೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಘೋಷಿಸಿಲ್ಲ. ಇತ್ತೀಚಿನ ಚುನಾವಣೆಗಳಲ್ಲಿ ಹಣದ ಹೊಳೆ ಹರಿಯುತ್ತಿರುವ ವ್ಯವಸ್ಥೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಚುನಾವಣಾ ರಾಜಕೀಯದಿಂದ ಹಿಂದೆ ಸರಿಯಬಹುದೇ ವಿನಃ ರಾಜಕಾರಣ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಇರಲಿದ್ದಾರೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: 4 ತಿಂಗಳಿಂದ ಮಳೆಯಿಲ್ಲದೇ ಭೀಕರ ಬರಗಾಲಕ್ಕೆ ಬೀದರ್ ಸಾಕ್ಷಿ – ತಾವು ಬೆಳೆದ ಬೆಳೆಯನ್ನೇ ನಾಶಪಡಿಸಿದ ರೈತರು
ಅಪೆಕ್ಸ್ ಬ್ಯಾಂಕ್ ವಿಚಾರದಲ್ಲಿ ಕೆ.ಎನ್.ರಾಜಣ್ಣ ಅಸಮಾಧಾನದ ಕುರಿತು ಮಾತನಾಡಿ, ಹೊಸ ಮುಖಗಳಿಗೆ ಅವಕಾಶ ನೀಡಲು ಈ ನಿರ್ಧಾರ ಮಾಡಲಾಗಿದೆ. ರಾಜಣ್ಣ ಹಿರಿಯ ನಾಯಕರು, ಮುಂದೆ ಅವರ ಗೌರವಕ್ಕೆ ತಕ್ಕ ಸ್ಥಾನಮಾನ ಸಿಗಲಿದೆ ಎಂದರು. ಇದನ್ನೂ ಓದಿ: ಸಾಮಾಜಿಕ ಕಳಕಳಿಗೆ ಕನ್ನಡಿ ಹಿಡಿದ ‘ಮೀಡಿಯಾ ಮನಸುಗಳು’

