ಬೆಂಗಳೂರು: ಡಿಸೆಂಬರ್ 4ರಿಂದ 13ರವರೆಗೆ ನಮ್ಮ ಬೆಂಗಳೂರು ಊರಹಬ್ಬ `ಬೆಂಗಳೂರು ಜಾತ್ರೆ’ (Bengaluru Jathre) ನಡೆಯಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಫ್ರೀಡಂ ಹಬ್ಬ ಈಗಾಗಲೇ ಜನರ ಮನಸು ಗೆದ್ದಿತ್ತು. ಬೆಂಗಳೂರು ಜನರಿಗಾಗಿ ಊರ ಹಬ್ಬ ಮಾಡಬೇಕು ಎಂದು ಸಿಎಂ ಕೂಡ ಹೇಳಿದ್ದರು. ಬೆಂಗಳೂರು ಉತ್ಸವದ ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆ ಡಿ.4ರಿಂದ 13ರವರೆಗೆ `ಬೆಂಗಳೂರು ಜಾತ್ರೆʼ ಆಯೋಜನೆ ಮಾಡುತ್ತಿದ್ದೇವೆ ಎಂದರು. ಇದನ್ನೂ ಓದಿ: ಆಂಧ್ರದ ಔಷಧ ತಯಾರಿಕಾ ಘಟಕದಲ್ಲಿ ಬಾಯ್ಲರ್ ಸ್ಫೋಟ – ನಾಲ್ವರು ಸಾವು
ಬೆಂಗಳೂರು ಮೆಟ್ರೋ, ಪೊಲೀಸ್ ಇಲಾಖೆ, ಬೆಸ್ಕಾಂ ಸೇರಿದಂತೆ ಎಲ್ಲಾ ಅಂಗ ಸಂಸ್ಥೆಗಳು ಸೇರಿ ಈ ಬೆಂಗಳೂರು ಜಾತ್ರೆ ಮಾಡುತ್ತೇವೆ. ಎಲ್ಲಾ ಸಂಸ್ಥೆಗಳಿಗೂ ಪತ್ರ ಬರೆದಿದ್ದೇವೆ. ಐಟಿ ಹಬ್‌ಗಳಿದ್ದಾವೆ, ಖಾಸಗಿ ಶಿಕ್ಷಣ ಸಂಸ್ಥೆಗಳು, ಕೇಂದ್ರದಡಿ ಬರುವ ಇಲಾಖೆಗಳಿದ್ದಾವೆ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಹೀಗಾಗಿ ಅವರಿಗೂ ಕಾರ್ಯಕ್ರಮ ಮಾಡುವಂತೆ ಆಹ್ವಾನ ನೀಡಲಿದ್ದೇವೆ. ಹೋಟೆಲ್, ರೆಸ್ಟೋರೆಂಟ್‌ಗಳಿಗೂ ಆಹ್ವಾನ ನೀಡಿದ್ದೇವೆ. ಆಯೋಜಕರಾಗಿ ಭಾಗಿಯಾಗುವಂತೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಬಿಜೆಪಿ ನಾಯಕರ ಮೇಲೆ FIR; ಡಿಜಿ-ಐಜಿಪಿ ಭೇಟಿಯಾದ ಬಿಎಸ್‌ವೈ, ಬಿವೈವಿ, ಅಶೋಕ್ ನಿಯೋಗ
ಕಾರ್ಯಕ್ರಮದಲ್ಲಿ ಕರ್ನಾಟಕದ ಎಲ್ಲಾ ಕಲೆಯನ್ನು ಪರಿಚಯ ಮಾಡಲಿದ್ದೇವೆ. ಐದು ವಲಯಗಳಲ್ಲಿಯೂ ಕಾರ್ಯಕ್ರಮ ನಡೆಯಲಿದೆ. ಬೇರೆ ರಾಜ್ಯದ ಕಲೆ ಸಂಸ್ಕೃತಿಯನ್ನು ಪರಿಚಯಿಸುವ ಅವಕಾಶವನ್ನು ನೆರೆ ರಾಜ್ಯದವರಿಗೆ ನೀಡಲಿದ್ದೇವೆ. ಭಾರತೀಯ ಕಲೆಯ ಅನಾವರಣವಾಗಲಿದೆ. ಬೇರೆ ರಾಜ್ಯದವರಿಗೂ ಆಹ್ವಾನ ನೀಡಲಿದ್ದೇವೆ. ಅಪಾರ್ಟ್ಮೆಂಟ್ ಅಸೋಸಿಯೇಷನ್‌ನವರಿಗೂ ಸ್ಥಳಾವಕಾಶ ಕೊಡಲಿದ್ದೇವೆ. ಅವರು ಕಾರ್ಯಕ್ರಮ ಮಾಡಬಹುದು. ನೃತ್ಯ ಸಂಗೀತ ಸೇರಿದಂತೆ ಕಾರ್ಯಕ್ರಮ ಮಾಡಬಹುದು. ಬೆಂಗಳೂರು ಜಾತ್ರೆಯಲ್ಲಿ ವಿಶೇಷ ಆಹಾರ ವೈವಿಧ್ಯತೆ ಇರುತ್ತದೆ. ಕರ್ನಾಟಕದ ಆಹಾರ ಶೈಲಿಯ ವಿಶೇಷ ಫುಡ್ ಫೆಸ್ಟ್‌ಗೆ ಹೋಟೆಲ್ ಅಸೋಸಿಯೇಷನ್‌ಗೆ ತಿಳಿಸಿದ್ದೇವೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಕಾವೇರಿ ತೀರ್ಥೋದ್ಭವ ಸನ್ನಿಹಿತ – ಕಾವೇರಿ ನೀರಾವರಿ ನಿಗಮದಿಂದ 2 ಕೋಟಿ ರೂ. ಬಿಡುಗಡೆ
ಬೆಂಗಳೂರಿಗೆ ಪ್ರವಾಸಿಗರು ಕೂಡ ಹೆಚ್ಚಾಗಲಿದ್ದಾರೆ. ಸಾಮಾನ್ಯ ಜನರಿಗೆ ಹಬ್ಬವಾಗಿ ಬೆಂಗಳೂರು ಜಾತ್ರೆ ನಡೆಯಲಿದೆ. 300 ಕಾರ್ಯಕ್ರಮಗಳ ಪ್ಲ್ಯಾನ್ ಇದೆ. ವೆಬ್‌ಸೈಟ್‌ನಲ್ಲಿ ಲೋಕೇಷನ್ ಮಾಹಿತಿ ಇರಲಿದೆ. ಕೆರೆ, ಪಾರ್ಕ್, ಆಡಿಟೋರಿಯಂ, ಗ್ರೌಂಡ್ ಸೇರಿದಂತೆ ಐದು ಕಾರ್ಪೋರೇಷನ್‌ನಲ್ಲಿ ಬೆಂಗಳೂರು ಜಾತ್ರೆ ನಡೆಯಲಿದೆ. ಒಂದೊಂದು ಕಾರ್ಪೋರೇಷನ್‌ನಲ್ಲಿ ಎರಡೆರಡು ಕಡೆ ದೊಡ್ಡದಾಗಿ ಸ್ಟೇಜ್ ಹಾಕಿ ಕಾರ್ಯಕ್ರಮ ಮಾಡಲಿದ್ದೇವೆ. ಫ್ರೀಡಂ ಪಾರ್ಕ್ ಪ್ಲ್ಯಾನ್ ಮಾಡುತ್ತಿದ್ದೇವೆ. ನ್ಯಾಷನಲ್ ಲೆವೆಲ್ ಆರ್ಟಿಸ್ಟ್ ಕರೆಸಿ ಕಾರ್ಯಕ್ರಮ ಮುಕ್ತಾಯದ ದಿನ ದೊಡ್ಡ ಕಾರ್ಯಕ್ರಮ ಮಾಡುತ್ತೇವೆ ಎಂದರು. ಇದನ್ನೂ ಓದಿ: 180 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್ ಸ್ಮಿತ್‌ಗೆ 1 ಕೋಟಿ ರೂ. ಘೋಷಣೆ
ಚಿತ್ರರಂಗಕ್ಕೂ ಆಹ್ವಾನ ಕೊಡಲಿದ್ದೇವೆ. 15-20 ಕೋಟಿ ಅಂದಾಜು ವೆಚ್ಚ ಇದೆ. ಕಲಾವಿದರಿಗೆ ಸಂಭಾವನೆ ಕೊಡಲೇಬೇಕು. ಹೀಗಾಗಿ ಬೆಂಗಳೂರು ಜಾತ್ರೆಗೆ ಐದು ನಗರ ಪಾಲಿಕೆಯಿಂದ ಒಂದೊಂದು ಕೋಟಿ ಅನುದಾನ ನೀಡಲಿದೆ. ಎಲ್ಲಾ ಇಲಾಖೆಗಳಿಂದ ಅನುದಾನ ಪಡೆಯಲಿದ್ದೇವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 5 ಕೋಟಿ ಕೊಡುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ರಾಮ ಮಂದಿರದಲ್ಲಿ `ಮಿಲಿಟರಿ ಮಾದರಿ’ ಶಿಸ್ತು – ಆಡಳಿತದಲ್ಲಿ ಮಹತ್ವದ ಬದಲಾವಣೆ

