ಬೀದರ್: ಸತತ ನಾಲ್ಕು ತಿಂಗಳಿಂದ ಮಳೆ ಬಾರದೇ ಭೀಕರ ಬರಗಾಲಕ್ಕೆ ಬೀದರ್ (Bidar) ಸಾಕ್ಷಿಯಾಗಿದೆ. ಹೀಗಾಗಿ ಇಂದು ರೈತರು ತಾವು ಬೆಳೆದ ವಿವಿಧ ಬೆಳೆಗಳನ್ನು ತಮ್ಮ ಕೈಯಾರೆ ಕಿತ್ತು ಹಾಕಿ, ನಾಶ ಮಾಡುತ್ತಿದ್ದಾರೆ.
ರಾಜ್ಯ ಸರ್ಕಾರ ಬೀದರ್ ಜಿಲ್ಲೆಯ ನಾಲ್ಕು ತಾಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಣೆ ಮಾಡಿದ್ದು, ಇನ್ನುಳಿದ ನಾಲ್ಕು ತಾಲೂಕಗಳಲ್ಲಿ ಬರ ಘೋಷಣೆ ಮಾಡಿಲ್ಲ. ಹೀಗಾಗಿ ಜಿಲ್ಲೆಯ ರೈತರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದು, ಈ ಕೂಡಲೇ ಪ್ರತಿ ಎಕರೆಗೆ 50 ಸಾವಿರ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಇಡಿ ಕೇಂದ್ರದ ಕೈಗೊಂಬೆ, ಇನ್ನಷ್ಟು ಕಾಂಗ್ರೆಸ್ ಶಾಸಕರ ಮೇಲೆ ದಾಳಿ ಆಗಲಿದೆ: ನಾಗೇಂದ್ರ ಭವಿಷ್ಯ
ಬೆಳೆ ನಾಶ ಮಾಡಲು ಹಣವಿಲ್ಲದೇ ಕೂಲಿಗಳನ್ನು ಕರೆಸದೇ ರೈತರು ತಾವೇ ತಮ್ಮ ಕೈಯಾರೆ ಒಣಗಿ ನಿಂತ ವಿವಿಧ ಬೆಳೆಗಳನ್ನ, ಕಿತ್ತು ಹಾಕಿ ನಾಶಪಡಿಸಿದ್ದಾರೆ.

