ಬೆಂಗಳೂರು: ಭೂಮಿ ಕೊರೆದರೆ ನೀರು ಬರುತ್ತೆ ಅಂತ ನಮಗೆ ಗೊತ್ತು. ಆದರೆ ಮರವನ್ನ ಕೊರೆದರೆ ನೀರು ಬರುತ್ತೆ ಅಂದ್ರೆ ನಂಬೋದಕ್ಕೆ ಕಷ್ಟ. ಆಶ್ಚರ್ಯವಾದ್ರೂ ಇದು ಸತ್ಯ. ಈ ಮರವನ್ನ ಕೊರೆದರೆ ನೀರು ಚಿಮ್ಮುತ್ತೆ.
ಈ ಮರದ ತಳಿಯನ್ನು “ಮತ್ತಿ” ಅಂತ ಕರಿಯುತ್ತಾರೆ. ಇದು ಭಾರತ, ನೇಪಾಳ, ಬಾಂಗ್ಲಾದೇಶ, ಮ್ಯಾನ್ಮಾರ್, ಥೈಲ್ಯಾಂಡ್, ಲಾವೋಸ್, ಕಾಂಬೋಡಿಯಾ, ಮತ್ತು ವಿಯೆಟ್ನಾಂ ನಲ್ಲಿ ಸಿಗುತ್ತದೆ .
Advertisement
Advertisement
ಇದು ಕೊಂಬ್ರೇಟಸಿಯೆ ಕುಟುಂಬಕ್ಕೆ ಸೇರಿದ್ದು. ಟರ್ಮಿನಾಲಿಯ ಸಸ್ಯಕುಲ(Genus)ದಲ್ಲಿದೆ. ಇದರ ಸಸ್ಯಶಾಸ್ತ್ರೀಯ ಹೆಸರು ಟರ್ಮಿನಾಲಿಯ ಟೋಮೆಂಟೋಸ ಎಂದಾಗಿದೆ. ಇದನ್ನು ಟರ್ಮಿನಾಲಿಯ ಎಲಿಪ್ಟಿಕಾ ಎಂದೂ ಕರೆಯುತ್ತಾರೆ.
Advertisement
ಇದರ ಕಾಂಡದಲ್ಲಿ ಸಾಮಾನ್ಯವಾಗಿ ನೀರು ಸಂಗ್ರಹವಾಗಿರುತ್ತದೆ. ಅರಣ್ಯ ನಿವಾಸಿಗಳು ಬೇಸಿಗೆಯಲ್ಲಿ ಕುಡಿಯುವ ನೀರಿನ ಮೂಲವಾಗಿ ಇದನ್ನ ಬಳಸುತ್ತಾರೆ. ಇದು ಹೊಟ್ಟೆ ನೋವು ಸರಿಪಡಿಸುವ ಮೌಲ್ಯವನ್ನು ಹೊಂದಿದೆ ಎಂದು ಹೇಳಲಾಗಿದೆ.
Advertisement