CricketLatestMain PostSports

ಐರ್ಲೆಂಡ್ ಪ್ರವಾಸ – ಭಾರತ ತಂಡಕ್ಕೆ ವಿವಿಎಸ್ ಲಕ್ಷ್ಮಣ್ ಮುಖ್ಯ ಕೋಚ್

ಮುಂಬೈ: ಜೂನ್ ಅಂತ್ಯದಲ್ಲಿ ಐರ್ಲೆಂಡ್ ಪ್ರವಾಸಕ್ಕಾಗಿ ಭಾರತದ ಮುಖ್ಯ ಕೋಚ್ ಆಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್‍ಸಿಎ) ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ನೇಮಕಗೊಳ್ಳಲಿದ್ದಾರೆ ಎಂದು ಮೂಲಗಳಿಂದ ವರದಿಯಾಗಿದೆ.

ಭಾರತವು ಐರ್ಲೆಂಡ್‍ನಲ್ಲಿ ಎರಡು ಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ. ಇದೇ ವೇಳೆ ಭಾರತವು ಇಂಗ್ಲೆಂಡ್‍ನಲ್ಲಿ ನಡೆಯಲಿರುವ ಏಕೈಕ ಟೆಸ್ಟ್‌ಗೆ ಸಜ್ಜಾಗುತ್ತಿದೆ. ಈ ಹಿನ್ನೆಲೆ ಭಾರತದ ಪ್ರಸ್ತುತ ಮುಖ್ಯ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಟೆಸ್ಟ್ ತಂಡದ ಜೊತೆಗೆ ಇರುವುದರಿಂದ ಐರ್ಲೆಂಡ್‍ಗೆ ತೆರಳಲಿರುವ ತಂಡಕ್ಕೆ ಲಕ್ಷ್ಮಣ್ ಅವರನ್ನು ಮುಖ್ಯ ಕೋಚ್ ಆಗಿ ಕಳುಹಿಸಲು ಬಿಸಿಸಿಐ ಪ್ಲಾನ್ ಮಾಡಿದೆ. ಇದನ್ನೂ ಓದಿ: ಗೇಲ್, ಎಬಿಡಿಗೆ ಆರ್‌ಸಿಬಿ ಹಾಲ್ ಆಫ್ ಫೇಮ್ ಗೌರವ

ಇಂಗ್ಲೆಂಡ್ ಮತ್ತು ಭಾರತ ನಡುವಿನ ಏಕೈಕ ಟೆಸ್ಟ್ ಪಂದ್ಯ ಜುಲೈ 1 ರಂದು ಆರಂಭವಾಗಲಿದೆ. ಇದಕ್ಕೂ ಮೊದಲು ಕೌಂಟಿ ತಂಡದ ಎದುರು ನಾಲ್ಕು ದಿನಗಳ ಅಭ್ಯಾಸ ಪಂದ್ಯವನ್ನು ಟೀಂ ಇಂಡಿಯಾ ಆಡಲಿದೆ. ಈ ಪಂದ್ಯ ಜೂನ್ 24ರಂದು ಆರಂಭವಾಗಲಿದೆ. ಇದನ್ನೂ ಓದಿ: ವಿರಾಟ್ ಕೊಹ್ಲಿಯ 973 ರನ್ ದಾಖಲೆ ಮುರಿಯುತ್ತೇನೆ: ಯಜುವೇಂದ್ರ ಚಹಲ್

ರಾಹುಲ್ ದ್ರಾವಿಡ್ ಟೆಸ್ಟ್ ತಂಡದ ಜೊತೆ ಇಂಗ್ಲೆಂಡ್‍ನಲ್ಲಿರುವುದರಿಂದ ಐರ್ಲೆಂಡ್ ಪ್ರವಾಸಕ್ಕೆ ತೆರಳುವ ತಂಡಕ್ಕೆ ಲಕ್ಷ್ಮಣ್ ಅವರು ಕೋಚಿಂಗ್ ಮಾಡುವುದು ಬಹುತೇಕ ಖಚಿತವಾಗಿದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

ಈ ಹಿಂದೆ ರವಿಶಾಸ್ತ್ರಿ ಭಾರತ ತಂಡದ ಮುಖ್ಯ ಕೋಚ್ ಆಗಿದ್ದಾಗ ಎನ್‍ಸಿಎ ಮುಖ್ಯಸ್ಥರಾಗಿದ್ದ ರಾಹುಲ್ ದ್ರಾವಿಡ್‍ರನ್ನು ಶ್ರೀಲಂಕಾ ಪ್ರವಾಸಕ್ಕೆ ತೆರಳಿದ ತಂಡದೊಂದಿಗೆ ಕಳುಹಿಸಲಾಗಿತ್ತು. ರವಿಶಾಸ್ತ್ರಿ ಟೆಸ್ಟ್ ತಂಡದೊಂದಿಗೆ ಇಂಗ್ಲೆಂಡ್‍ನಲ್ಲಿದ್ದರು.

ಐಪಿಎಲ್ ಫೈನಲ್ ಪಂದ್ಯ ಮುಗಿದು ಒಂದು ವಾರದ ನಂತರ ದಕ್ಷಿಣ ಆಫ್ರಿಕಾ ತಂಡ ಭಾರತ ಪ್ರವಾಸ ಕೈಗೊಳ್ಳಲಿದ್ದು ಜೂನ್ 9ರಿಂದ ಐದು ಟಿ20 ಪಂದ್ಯಗಳನ್ನು ಆಡಲಿದೆ. ಈ ಸರಣಿಗಾಗಿ ತಂಡವನ್ನು ಇದೇ 22ರಂದು ಆಯ್ಕೆ ಮಾಡಲಾಗುವುದು. ಸರಣಿಗೂ ಮುನ್ನ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಜಸ್‍ಪ್ರೀತ್ ಬೂಮ್ರಾ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ.

YouTube video

Leave a Reply

Your email address will not be published. Required fields are marked *

Back to top button