CricketLatestMain PostSports

ವಿರಾಟ್ ಕೊಹ್ಲಿಯ 973 ರನ್ ದಾಖಲೆ ಮುರಿಯುತ್ತೇನೆ: ಯಜುವೇಂದ್ರ ಚಹಲ್

ಮುಂಬೈ: ಆರಂಭಿಕ ಬ್ಯಾಟ್ಸ್‌ಮ್ಯಾನ್ ಆಗಿ ಬ್ಯಾಟಿಂಗ್ ಮಾಡಲು ಅವಕಾಶ ಸಿಕ್ಕರೆ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ 973 ರನ್‍ಗಳ ದಾಖಲೆಯನ್ನು ಕೇವಲ 10 ಪಂದ್ಯಗಳಲ್ಲಿ ಮುರಿಯುತ್ತೇನೆ ಎಂದು ರಾಜಸ್ಥಾನ್‌ ರಾಯಲ್ಸ್‌ ತಂಡದ ಲೆಗ್‌‌ ಸ್ಪಿನ್ನರ್ ಯಜುವೇಂದ್ರ ಚಹಲ್ ವ್ಯಂಗ್ಯವಾಗಿ ಹೇಳಿದ್ದಾರೆ.

ಈ ಕುರಿತು ಖಾಸಗಿ ಚಾನೆಲ್‍ವೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, ನನಗೆ ಆರಂಭಿಕ ಬ್ಯಾಟಿಂಗ್ ಮಾಡಲು ಅವಕಾಶ ಸಿಕ್ಕಿದ್ದರೆ, ನಾನು ಜೋಸ್ ಬಟ್ಲರ್ ಮಾತ್ರವಲ್ಲದೆ ಪ್ರತಿಯೊಬ್ಬ ಆಟಗಾರರ ದಾಖಲೆಯನ್ನು ಮುರಿಯುತ್ತಿದ್ದೆ. ವಿರಾಟ್ ಕೊಹ್ಲಿ ಅವರ (973 ರನ್) ದಾಖಲೆಯೂ ಸಹ ಮುರಿಯುತ್ತೇನೆ. ನಾನು ಪ್ರತಿ ಪಂದ್ಯದಲ್ಲೂ ಶತಕ ಗಳಿಸಬೇಕು ಎಂದರು.

ಯಜುವೇಂದ್ರ ಚಹಲ್ ಯಾವಾಗಲೂ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇದೀಗ ಜೋಕ್ ಮೂಲಕ ಎಲ್ಲರ ಗಮನ ಸೆಳೆದಿರುವ ಅವರು, ಜೋಸ್ ಬಟ್ಲರ್ ಜೊತೆ ಓಪನಿಂಗ್ ಮಾಡುವತ್ತ ಗಮನಹರಿಸಿರುವುದಾಗಿ ಹೇಳಿದ್ದಾರೆ. ರಾಜಸ್ಥಾನ್ ರಾಯಲ್ಸ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಇತ್ತೀಚಿನ ವೀಡಿಯೊದಲ್ಲಿ, ಚಹಲ್ ಐಪಿಎಲ್ 2022 ರಲ್ಲಿ ಇದುವರೆಗೆ 13 ಪಂದ್ಯಗಳಲ್ಲಿ 24 ವಿಕೆಟ್‍ಗಳನ್ನು ಕಬಳಿಸಿದ್ದಾರೆ. ಇದೀಗ ಪರ್ಪಲ್ ಕ್ಯಾಪ್‍ನ ರೇಸ್‍ನಲ್ಲಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿರುವ ಚಹಲ್ ಅವರನ್ನು ಪ್ರಸಕ್ತ ಸಾಲಿನಲ್ಲಿ ನಡೆದ ಮೆಗಾ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಖರೀದಿಸಿತ್ತು.

Leave a Reply

Your email address will not be published.

Back to top button