ಚೆನ್ನೈ: ತಮಿಳುನಾಡು ಸಿಎಂ ಆಗಿ ಟಿವಿಕೆ ಮುಖ್ಯಸ್ಥ ವಿಜಯ್ ಅವರನ್ನು ನೇಮಕ ಮಾಡಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ. ನಾಳೆ ಬೆಳಗ್ಗೆ 10 ಗಂಟೆಗೆ ವಿಜಯ್ ಸಿಎಂ ಆಗಿ ಪದಗ್ರಹಣ ಹೊಂದಲಿದ್ದಾರೆ.
ಸಣ್ಣ ಪಕ್ಷಗಳ ಬೆಂಬಲದೊಂದಿಗೆ ಇಂದು ಸಂಜೆ ರಾಜ್ಯಪಾಲರನ್ನು ಭೇಟಿಯಾಗಿ ವಿಜಯ್ ಸರ್ಕಾರ ರಚನೆಗೆ ಹಕ್ಕು ಮಂಡನೆ ಮಾಡಿದ್ದರು. ಹಕ್ಕು ಮಂಡನೆಗೆ ಒಪ್ಪಿಗೆ ಸೂಚಿಸಿದ ರಾಜ್ಯಪಾಲರು ತಮಿಳುನಾಡು ಸಿಎಂ ಆಗಿ ವಿಜಯ್ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಮೇ 13ರೊಳಗೆ ವಿಶ್ವಾಸ ಮತ ಯಾಚಿಸುವಂತೆ ನೂತನ ಸಿಎಂ ವಿಜಯ್‌ಗೆ ರಾಜ್ಯಪಾಲರು ನಿರ್ದೇಶನ ನೀಡಿದ್ದಾರೆ. ಈ ಸಂಬಂಧ ಲೋಕಭವನದಿಂದ ಅಧಿಕೃತ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ.
ನಾಳೆ ತಮಿಳುನಾಡು ಜನಕ್ಕೆ ಡಬಲ್ ಧಮಾಕ ಸಿಕ್ಕಿದೆ. ಬೆಳಗ್ಗೆ ದಳಪತಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮಧ್ಯಾಹ್ನ ಸಿಎಸ್‌ಕೆ ಐಪಿಎಲ್ ಮ್ಯಾಚ್ ನಡೆಯಲಿದೆ.

