ಬೆಂಗಳೂರು: ಬಿಗ್‍ಬಾಸ್ ಕಾರ್ಯಕ್ರಮದ ನಂತರ ಇದೇ ಮೊದಲ ಬಾರಿಗೆ ವೈಷ್ಣವಿ ಗೌಡ, ರಘು ಫ್ಯಾಮಿಲಿಯನ್ನು ಮೀಟ್ ಮಾಡಿದ್ದಾರೆ.
Advertisement
ಬಿಗ್‍ಬಾಸ್ ಸೀಸನ್-8ರ ಬೆಸ್ಟ್ ಫ್ರೆಂಡ್ಸ್ ಅಂದರೆ ಅದು ರಘು ಹಾಗೂ ವೈಷ್ಣವಿ. ಬಿಗ್‍ಬಾಸ್ ಕಾರ್ಯಕ್ರಮದ ಆರಂಭದಿಂದಲೂ ಅಂತ್ಯದವರೆಗೂ ದೊಡ್ಮನೆಯಲ್ಲಿ ಎಲ್ಲರ ನಡುವೆ ಇವರ ಸ್ನೇಹ ಪ್ರೇಕ್ಷಕರ ಹೃದಯ ಗೆದ್ದಿತ್ತು. ಇಬ್ಬರ ನಡುವೆ ಕೆಲವೊಂದಷ್ಟು ಜಗಳ, ಮನಸ್ತಾಪ ಬಂದರೂ ಒಬ್ಬರಿಗೊಬ್ಬರು ಬಿಟ್ಟು ಕೊಡದೇ ಅದನ್ನು ಚರ್ಚಿಸಿ ಹೊಂದಾಣಿಕೆಯಿಂದ ಆಟ ಆಡುತ್ತಿದ್ದ ಇವರಿಬ್ಬರ ಕಾಂಬಿನೇಷನ್ ನೋಡಿ ಅಭಿಮಾನಿಗಳು ನಿಜವಾದ ಫ್ರೆಂಡ್ಸ್ ಅಂದರೆ ಇವರಂತೆ ಇರಬೇಕು ಎಂದು ಮಾತನಾಡಿಕೊಂಡಿದ್ದು ಇದೆ. ಇದನ್ನೂ ಓದಿ: ಕೆಪಿಎಸ್‌ಸಿಯನ್ನು ಹಾಳು ಮಾಡಿದ್ದು ಬಿಜೆಪಿ, ಕಾಂಗ್ರೆಸ್ : ಜೆಡಿಎಸ್ ತಿರುಗೇಟು
Advertisement
Advertisement
ರಘು ತಮ್ಮ ಕಷ್ಟದ ದಿನಗಳನ್ನು ಹೇಳಿಕೊಂಡಿದ್ದಾಗ ವೈಷ್ಣವಿ ಸಮಾಧಾನ ಹೇಳಿ ಅವರಿಗೆ ಆತ್ಮಸ್ಥೈರ್ಯ ತುಂಬಿದ್ದರು. ಅಲ್ಲದೇ ದೊಡ್ಮನೆಯಲ್ಲಿ ಯಾವುದೇ ಟಾಸ್ಕ್ ಬಂದಗಲೂ ರಘು ವೈಷ್ಣವಿಗೆ, ವೈಷ್ಣವಿ ರಘುಗೆ ಪ್ರೋತ್ಸಾಹ ನೀಡುತ್ತಾ ಆಟ ಆಡುತ್ತಿದ್ದರು. ಆದರೆ ಬಿಗ್‍ಬಾಸ್ ಕಾರ್ಯಕ್ರಮದ ನಂತರ ರಘು, ವೈಷ್ಣ ವಿಎಲ್ಲೂ ಅಷ್ಟಾಗಿ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಇದನ್ನೂ ಓದಿ: ಹೆಸರುಬೇಳೆ ಪಾಯಸ ಮಾಡುವ ಸರಳ ವಿಧಾನ ನಿಮಗಾಗಿ
Advertisement
View this post on Instagram
ಇದೀಗ ಹಲವು ದಿನಗಳ ಬಳಿಕ ದಸರಾ ಹಬ್ಬದ ಹಿನ್ನೆಲೆ ರಘು ಹಾಗೂ ಅವರ ಕುಟುಂಬವನ್ನು ಭೇಟಿ ಮಾಡಿದ್ದಾರೆ. ಈ ಕುರಿತಂತೆ ವೈಷ್ಣವಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದು, ಫೋಟೋದಲ್ಲಿ ರಘು ಅವರ ಮಗನನ್ನು ಎತ್ತಿಕೊಂಡಿದ್ದು, ರಘು, ಪತ್ನಿ ವಿದ್ಯಾಶ್ರೀ ಹಾಗೂ ವೈಷ್ಣವಿ ನಗುತ್ತಾ ಫೋಟೋಗೆ ಪೋಸ್ ನೀಡಿರುವುದನ್ನು ಕಾಣಬಹುದಾಗಿದೆ. ಜೊತೆಗೆ ವೈನ್ ಸ್ಟೋರ್ ಫ್ಯಾಮಿಲಿ ಜೊತೆಗೆ ದಸರಾ ವಿಶೇಷ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.