ತುಮಕೂರು: ಉತ್ತರಾಖಂಡದಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ (Uttarakhand Helicopter Crash) ಮೃತಪಟ್ಟ ತುಮಕೂರು (Tumakuru) ಜಿಲ್ಲೆ ಕುಣಿಗಲ್ (Kunigal) ತಾಲೂಕಿನ ಹುಲಿಯೂರುದುರ್ಗ ಮೂಲದ ಶಂಕರೇಗೌಡ ಮತ್ತು ಹೆಚ್.ಎಸ್.ನಟರಾಜು ಅವರ ಅಂತ್ಯಸಂಸ್ಕಾರ (Funeral) ಇಂದು ಬೆಳಗ್ಗೆ ಒಕ್ಕಲಿಗ ಸಂಪ್ರದಾಯದಂತೆ ನೆರವೇರಿತು.
ಸೋಮವಾರ ರಾತ್ರಿ ಬೆಂಗಳೂರಿಗೆ ವಿಮಾನದ ಮೂಲಕ ತರಲಾದ ಇಬ್ಬರ ಪಾರ್ಥಿವ ಶರೀರಗಳು ತಡರಾತ್ರಿ ಹುಲಿಯೂರುದುರ್ಗಕ್ಕೆ ಆಗಮಿಸಿತ್ತು. ಹುಲಿಯೂರುದುರ್ಗದ ಹಳೇಯೂರಮ್ಮ ರಸ್ತೆಯಲ್ಲಿರುವ ನಟರಾಜು ಅವರ ಮನೆಯಲ್ಲಿ ಹಾಗೂ ಅಕ್ಕಿಮರಿಪಾಳ್ಯದಲ್ಲಿರುವ ಶಂಕರೇಗೌಡರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಂಬAಧಿಕರು, ಸ್ನೇಹಿತರು ಹಾಗೂ ನೂರಾರು ಗ್ರಾಮಸ್ಥರು ಅಂತಿಮ ದರ್ಶನ ಪಡೆದರು. ಇದನ್ನೂ ಓದಿ: ಕೇರಳದ ಹೆಣ್ಮಗಳ ದೂರು ಎಲ್ಲಿ ಹೋಯ್ತು? ಕೃಪಾ ಆಳ್ವಾ ವಿದೇಶಕ್ಕೆ ಕಳುಹಿಸಿದ್ದು ಯಾಕೆ?- ಡಿಕೆಶಿ ಸಿಡಿ ಲಿಂಕ್ ಬಿಚ್ಚಿಟ್ಟು ಹೆಚ್ಡಿಕೆ ಬಾಂಬ್
ಇಂದು ಬೆಳಗ್ಗೆ 10 ಗಂಟೆಗೆ ಜ್ಯೂನಿಯರ್ ಕಾಲೇಜು ಹಿಂಭಾಗದಲ್ಲಿರುವ ನಟರಾಜು ಅವರ ಜಮೀನಿನಲ್ಲಿ ಹಾಗೂ ಅಕ್ಕಿಮರಿಪಾಳ್ಯದಲ್ಲಿರುವ ಶಂಕರೇಗೌಡರ ತೋಟದಲ್ಲಿ ಒಕ್ಕಲಿಗ ಸಂಪ್ರದಾಯದಂತೆ ವಿಧಿವಿಧಾನಗಳೊಂದಿಗೆ ಅಂತ್ಯಸAಸ್ಕಾರ ನೆರವೇರಿತು. ಅಂತಿಮ ದರ್ಶನ ಪಡೆದ ಕುಣಿಗಲ್ ಶಾಸಕ ಡಾ. ರಂಗನಾಥ್ ಅವರು ಪ್ರತಿಕ್ರಿಯಿಸಿ, ಉತ್ತರಾಖಂಡದಲ್ಲಿ ಬಳಸಿದ ಹೆಲಿಕಾಪ್ಟರ್ ತುಂಬಾ ಹಳೆಯದು. ಸರಿಯಾಗಿ ಮೆಂಟೇನ್ ಮಾಡಿರಲಿಲ್ಲ. ಯಾವುದೇ ರೂಲ್ಸ್, ರೆಗ್ಯುಲೇಷನ್ ಪಾಲನೆ ಮಾಡಿರಲಿಲ್ಲ. ಅಲ್ಲಿನ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು. ಶಾಸಕರು ಎರಡೂ ಮನೆಗಳಿಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದನ್ನೂ ಓದಿ: ಸ್ಟಿಂಗ್ ಆಪರೇಷನ್ ಕೇಸ್ – ನಿರೀಕ್ಷಣಾ ಜಾಮೀನಿಗೆ ಹೆಚ್ಡಿಕೆ ಪಿಆರ್ಒ ಪ್ರಜ್ವಲ್ ಪ್ರಸಾದ್ ಅರ್ಜಿ
