ವಾಷಿಂಗ್ಟನ್: ಬರ್ತ್ಡೇ ಗಿಫ್ಟ್ ಆಗಿ ತಾಯಿ ಕೊಡಿಸಿದ ಗನ್ನಿಂದಲೇ 16 ವರ್ಷದ ಹುಡುಗನೊಬ್ಬ, ಶಾಲೆಯ ಮೂವರು ಮಕ್ಕಳು ಮತ್ತು ಓರ್ವ ಶಿಕ್ಷಕಿ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಶೌಂಟೈ ನಿಕರ್ಸನ್ ತನ್ನ ಪುತ್ರನಿಗೆ ಗನ್ ಕೊಡಿಸಿದ ಮಹಿಳೆ. ಗ್ರಿಫಿನ್ ಜೆ. ಜಾನ್ ಕೊಲೆ ಆರೋಪಿ ಬಾಲಕ. ಮಹಿಳೆಯು ‘ಮಾವೆರಿಕ್ 88 ಪಂಪ್-ಆಕ್ಷನ್ 12-ಗೇಜ್’ ಶಾಟ್ಗನ್ ಅನ್ನು ಕಾನೂನುಬದ್ಧವಾಗಿ ಖರೀದಿಸಿದ್ದಳು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಶೋರೂಮ್ನಿಂದ ಏಕಾಏಕಿ ರಸ್ತೆಗೆ ನುಗ್ಗಿದ ಹೊಸ ಕಾರು – ಬೈಕ್ ಸವಾರರಿಗೆ ಗಂಭೀರ ಗಾಯ
ಮಗನಿಗೆ ಮನರಂಜನೆಗೆಂದು ಮಹಿಳೆ ಗನ್ ಅನ್ನು ಬರ್ತ್ಡೇ ಗಿಫ್ಟ್ ಆಗಿ ನೀಡಿದ್ದಳು. ಆರೋಪಿ ಜಾನ್ ಆರಂಭದಲ್ಲಿ ಆ ಗನ್ನಿಂದ, ಚಲಿಸುತ್ತಿದ್ದ ಪಿಕಪ್ ಟ್ರಕ್ ಒಂದರತ್ತ ಗುಂಡು ಹಾರಿಸಿದ. ಆ ಟ್ರಕ್ನ ಚಾಲಕ 911ಕ್ಕೆ ಕರೆ ಮಾಡಿ ದೂರು ನೀಡಿದ್ದ. ನಂತರ ಜಾನ್ ಶಾಲೆಯೊಂದಕ್ಕೆ ನುಗ್ಗಿ ಗುಂಡು ಹಾರಿಸಿದ್ದಾನೆ. ಗುಂಡೇಟಿಗೆ ನಾಲ್ವರು ಬಲಿಯಾಗಿದ್ದಾರೆ.
ದಾಳಿಯಲ್ಲಿ 5 ವರ್ಷದ ರೋಮ್ ಸಮ್ಮರ್ ಹಾಗೂ 8 ಮತ್ತು 11 ವರ್ಷ ವಯಸ್ಸಿನ ಮಕ್ಕಳು ಮೃತಪಟ್ಟಿದ್ದಾರೆ. ಗುಂಡೇಟಿಗೆ 25 ವರ್ಷದ ಶಿಕ್ಷಕಿ ಮೇಗನ್ ಲ್ಯಾಂಬರ್ಟ್ ಕೂಡ ಬಲಿಯಾಗಿದ್ದಾರೆ.
