ಶಿವಮೊಗ್ಗ: ದಸರಾ ಹಬ್ಬದ ಸಂಭ್ರಮದಲ್ಲಿ ಕಾರನ್ನು (Car) ಡೆಲಿವರಿ ಪಡೆದು, ರಸ್ತೆಗಿಳಿಸುವ ವೇಳೆಯೇ ಭೀಕರ ಅಪಘಾತ (Accident) ನಡೆದ ಘಟನೆ ಸಾಗರದಲ್ಲಿ (Sagar) ನಡೆದಿದೆ.
ನಗರದ ಮಾರುತಿ ಕಾರು ಶೋರೂಮ್ ಬಳಿ ಈ ಘಟನೆ ನಡೆದಿದೆ. ಶೋರೂಮ್ನಲ್ಲಿ ಹೊಸ ಕಾರನ್ನ ಪಡೆದು, ಹೊರಬರುವ ವೇಳೆ ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿದ ಕಾರು, ಶೋರೂಮ್ ಎದುರಿನ ಬ್ಯಾರಿಕೇಡ್ಗೆ ಡಿಕ್ಕಿಯಾಗಿ, ಬಳಿಕ ರಸ್ತೆಗೆ ನುಗ್ಗಿದೆ. ಈ ವೇಳೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್ಗೆ ಕಾರು ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ದೆಹಲಿ-ಮುಂಬೈ ಎಕ್ಸ್ಪ್ರೆಸ್ ವೇಯಲ್ಲಿ ಕಂದಕಕ್ಕೆ ಉರುಳಿದ ಬಸ್ – 8 ಮಂದಿ ದುರ್ಮರಣ, 17 ಜನರಿಗೆ ಗಾಯ
ಡಿಕ್ಕಿಯ ರಭಸಕ್ಕೆ ಬೈಕ್ನಲ್ಲಿದ್ದ ಇಬ್ಬರು ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಗಾಯಾಳುಗಳನ್ನ ಸಾಗರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಅಪಘಾತದ ದೃಶ್ಯ ಶೋರೂಮ್ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: CNG ಟ್ರಕ್ಗೆ ಕಾರು ಡಿಕ್ಕಿ – ಬಾಲಕ ಸ್ಥಳದಲ್ಲೇ ಸಾವು, ಮೂವರು ಅಪ್ರಾಪ್ತರಿಗೆ ಗಂಭೀರ ಗಾಯ
