ಸೋಷಿಯಲ್ ಮೀಡಿಯಾ ಸೆನ್ಸೇಷನಲ್ ಸ್ಟಾರ್ ಉರ್ಫಿ ಜಾವೇದ್ ಚಿತ್ರವಿಚಿತ್ರವಾದ ಡ್ರೆಸ್ ತೊಡುವುದರಲ್ಲಿ ಯಾವಾಗಲೂ ಮುಂದು. ಡ್ರೆಸ್ ವಿಚಾರಕ್ಕೆ ಪ್ರತಿ ಸಲ ಟ್ರೋಲ್ ಆಗ್ತಿದ್ರು ಅದು ಯಾವದಕ್ಕೂ ತಲೆ ಕೆಡಿಸಿಕೊಳ್ಳದೇ ದಿನದಿಂದ ದಿನಕ್ಕೆ ಕಮ್ಮಿ ಬಟ್ಟೆಯನ್ನೇ ಹಾಕುತ್ತಾರೆ. ಮೊನ್ನೆಯಷ್ಟೇ ಬಟ್ಟೆಯಿಲ್ಲದೇ ಮತ್ತಷ್ಟು ವಿಚಿತ್ರವಾಗಿ ಕಾಣಿಸಿಕೊಂಡಿದ್ದ ಉರ್ಫಿ ಸಖತ್ ಟ್ರೋಲ್ ಆಗಿದ್ದರು. ಈಗ ಮತ್ತೆ ಟಾಪ್ಲೆಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
View this post on Instagram
`ಬಿಗ್ ಬಾಸ್’ ಒಟಿಟಿ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದ ಬೋಲ್ಡ್ ನಟಿ ಉರ್ಫಿ ಮತ್ತೆ ಹೊಸ ವಿಚಾರವಾಗಿ ಇಂಟರ್ನೆಟ್ನಲ್ಲಿ ಸೆನ್ಸೆಷನ್ ಕ್ರಿಯೇಟ್ ಮಾಡಿದ್ದಾರೆ. ಕಳೆದ ಬಾರಿ ಬಟ್ಟೆ ಇದ್ದು ಇಲ್ಲದಂತೆ ಬಂದಿದ್ದ ಉರ್ಫಿ ಈಗ ಟಾಪ್ಲೆಸ್ ಆಗಿ ಉಡುಗೆ ತೊಟ್ಟು ಕ್ಯಾಮೆರಾ ಕಣ್ಣಿಗೆ ಪೋಸ್ ಕೊಟ್ಟಿದ್ದಾರೆ. ಟಾಪ್ಲೆಸ್ ಲುಕ್ನಲ್ಲಿ ಕಾಣಿಸಿಕೊಂಡಿರುವ ಉರ್ಫಿ ತಮ್ಮ ಉದ್ದನೆಯ ಕೂದಲನ್ನ ಮುಂದಕ್ಕೆ ಹಾಕಿ, ಪೋಸ್ ನೀಡಿದ್ದಾರೆ. ಇದನ್ನೂ ಓದಿ:ಸಮಂತಾ ಆ ಹೇಳಿಕೆಯಿಂದ ಪೈಪೋಟಿಗಿಳಿದ್ರಾ ನಾಗಚೈತನ್ಯ
View this post on Instagram
ಸದ್ಯ ಉರ್ಫಿಯ ವಿಚಿತ್ರ ಅವತಾರಕ್ಕೆ ಅಭಿಮಾನಿಗಳು ದಂಗಾಗಿದ್ದಾರೆ. ಉರ್ಫಿಗೆ ಮೈ ತುಂಬಾ ಬಟ್ಟೆ ಹಾಕಿ ಅಂತಾ ಕೆಲ ನೆಟ್ಟಿಗರು ಮನವಿ ಮಾಡಿದ್ದಾರೆ. ಒಟ್ನಲ್ಲಿ ಉರ್ಫಿಯ ವಿಚಿತ್ರ ಅವತಾರಕ್ಕೆ ಪಡ್ಡೆಹುಡುಗರು ಸುಸ್ತಾಗಿದ್ದಾರೆ.