– ಹತ್ಯೆ ಬಳಿಕ ಪೊಲೀಸರಿಗೆ ಫೋನ್
ಲಕ್ನೋ: ಅವಳಿ ಹೆಣ್ಣುಮಕ್ಕಳನ್ನು (Twin Daughters) ತಂದೆಯೇ (Father) ಕತ್ತು ಸೀಳಿ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ (Uttar Pradesh) ಕಾನ್ಪುರದಲ್ಲಿ (Kanpur) ಭಾನುವಾರ ಮುಂಜಾನೆ ನಡೆದಿದೆ.
48 ವರ್ಷದ ಮೆಡಿಕಲ್ ರೆಪ್ ಶಶಿ ರಂಜನ್ ಮಿಶ್ರಾ ತನ್ನ 11 ವರ್ಷದ ಇಬ್ಬರು ಹೆಣ್ಣುಮಕ್ಕಳನ್ನು ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಕೊಲೆ ಬಳಿಕ ಪೊಲೀಸರಿಗೆ ಕರೆ ಮಾಡಿ ಹೆಣ್ಣುಮಕ್ಕಳನ್ನು ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ. ಇದನ್ನೂ ಓದಿ: ಇಟಲಿಯಲ್ಲಿ ಇಬ್ಬರು ಭಾರತೀಯರಿಗೆ ಗುಂಡಿಕ್ಕಿ ಹತ್ಯೆ
ಬಿಹಾರ ನಿವಾಸಿ ಶಶಿ ರಂಜನ್ ತನ್ನ ಪತ್ನಿ ರೇಷ್ಮಾ, ಅವಳಿ ಹೆಣ್ಣುಮಕ್ಕಳಾದ ರಿದ್ಧಿ ಮತ್ತು ಸಿದ್ಧಿ ಮತ್ತು ಆರು ವರ್ಷದ ಮಗನೊಂದಿಗೆ ವಾಸಿಸುತ್ತಿದ್ದ. ಪತ್ನಿಗೆ ಅನೈತಿಕ ಸಂಬಂಧವಿದೆ ಎಂದು ಶಶಿ ರಂಜನ್ ಮಿಶ್ರಾ ಅನುಮಾನಿಸಿದ್ದ. ಆಕೆ ತನ್ನ ಮಗನೊಂದಿಗೆ ವಾಸಿಸಬೇಕು ಮತ್ತು ಹೆಣ್ಣುಮಕ್ಕಳನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಆಗಾಗ್ಗೆ ಹೇಳುತ್ತಿದ್ದ. ಇದನ್ನೂ ಓದಿ: ಜೈಲಲ್ಲಿರೋ ತಂದೆ ವಿನಯ್ ಕುಲಕರ್ಣಿ ನೆನೆದು ಫೋಟೊ ಜೊತೆ ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ಮಕ್ಕಳು
ನನ್ನ ಪತಿ ಖಿನ್ನತೆಯಿಂದ ಬಳಲುತ್ತಿದ್ದಾನೆ, ಮನೆಯೊಳಗೆ ಹಲವಾರು ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಿದ್ದಾನೆ. ಅಲ್ಲದೇ ನನ್ನನ್ನು ಹೆಣ್ಣುಮಕ್ಕಳಿದ್ದ ಕೋಣೆಗೆ ಹೋಗಲು ಬಿಡುತ್ತಿರಲಿಲ್ಲ ಎಂದು ಪತ್ನಿ ರೇಷ್ಮಾ ಆರೋಪಿಸಿದ್ದಾರೆ. ಶನಿವಾರ ರಾತ್ರಿ ಊಟ ಮಾಡಿದ ನಂತರ, ಪತಿ ಹೆಣ್ಣುಮಕ್ಕಳನ್ನು ಮಲಗಿಸಲು ಕರೆದೊಯ್ದಿದ್ದಾನೆ. ತಡರಾತ್ರಿ 2:30ರ ಸುಮಾರಿಗೆ ಒಬ್ಬ ಮಗಳನ್ನು ಶೌಚಾಲಯಕ್ಕೆ ಕರೆದೊಯ್ದ ನಂತರ ಇಬ್ಬರೂ ಕೋಣೆಗೆ ಹಿಂತಿರುಗಿದ್ದಾರೆ. ಬಳಿಕ ಲೈಟ್ ಆಫ್ ಮಾಡಲಾಯಿತು ಎಂದು ರೇಷ್ಮಾ ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಜೊತೆ ಸೇರಿ ಟಿಎಂಸಿ ಪಿತೂರಿ, ಬಂಗಾಳದ ಮಹಿಳೆಯರಿಗೆ ಮತ್ತೆ ದ್ರೋಹ: ಮೋದಿ ವಾಗ್ದಾಳಿ
ಇದಾಗಿ ಎರಡು ಗಂಟೆಗಳ ನಂತರ, ಶಶಿ ರಂಜನ್ ಪೊಲೀಸರಿಗೆ ಕರೆ ಮಾಡಿ ಮಕ್ಕಳನ್ನು ಕೊಲೆ ಮಾಡಿರುವುದಾಗಿ ವಿಷಯ ತಿಳಿಸಿದ್ದಾನೆ. ಕೂಡಲೇ ಪೊಲೀಸರು ಸ್ಥಳಕ್ಕೆ ಬಂದು ನೋಡಿದಾಗ ಇಬ್ಬರು ಹೆಣ್ಣಮಕ್ಕಳು ಕತ್ತು ಸೀಳಿ ರಕ್ತದ ಮಡುವಿನಲ್ಲಿ ಹೆಣವಾಗಿ ಬಿದ್ದಿದ್ದರು. ಇದನ್ನೂ ಓದಿ: ಚಾ.ನಗರ ಆಕ್ಸಿಜನ್ ದುರಂತ ಸಂತ್ರಸ್ತರ ಹೋರಾಟಕ್ಕೆ ಜಯ – 21 ಮಂದಿಗೆ ಸರ್ಕಾರಿ ಕೆಲಸ
ಪಶ್ಚಿಮ ಬಂಗಾಳದ ರೇಷ್ಮಾ, ಕಾನ್ಪುರದ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಶಶಿಯ ಪರಿಚಯವಾಗಿ 2014ರಲ್ಲಿ ವಿವಾಹವಾದರು. ಸದ್ಯ ಘಟನೆ ಸಂಬಂಧ ತಂದೆ ಶಶಿ ರಂಜನ್‌ನನ್ನು ಬಂಧಿಸಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಉಪ ಆಯುಕ್ತ ದೀಪೇಂದ್ರ ನಾಥ್ ಚೌಧರಿ ತಿಳಿಸಿದ್ದಾರೆ. ಇದನ್ನೂ ಓದಿ: ಕಾಡಿನಲ್ಲಿ ಅಪ್ರಾಪ್ತೆ ಮೇಲೆ ರೇಪ್ ಆರೋಪ – ಧರ್ಮಸ್ಥಳ ಪೊಲೀಸರಿಂದ ಇಬ್ಬರ ಬಂಧನ

