ಲಕ್ನೋ: 44 ಲಕ್ಷ ವಿಮೆ ಪಡೆಯಲು ಪತ್ನಿಯನ್ನು ಹೊಡೆದು ಕೊಂದು, ಮೃತದೇಹದ ಮೇಲೆ ಕಾರು ಹತ್ತಿಸಿ ಕ್ರೌರ್ಯ ಮೆರೆದಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಹಮೀರ್‌ಪುರದಲ್ಲಿ ನಡೆದಿದೆ.
ರೀಟಾ ಕೊಲೆಯಾದ ಮಹಿಳೆ. ಪತಿ ಅಮರ್ ಸಿಂಗ್, ತನ್ನ ಪತ್ನಿ ಕಾಣೆಯಾಗಿದ್ದಾಳೆಂದು ಪೊಲೀಸರಿಗೆ ದೂರು ನೀಡಿದ್ದ. ಆದರೆ, ವಿಚಾರಣೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ. ಇದನ್ನೂ ಓದಿ: ಹೆಂಡತಿ ಡಿವೋರ್ಸ್ ಕೇಳಿದ್ದಕ್ಕೆ ಮನನೊಂದು ವ್ಯಕ್ತಿ ನೇಣಿಗೆ ಶರಣು
ಪೊಲೀಸರ ವಿಚಾರಣೆಯಲ್ಲಿ ಸಿಕ್ಕಿಬಿದ್ದ ಅಮರ್, ವಿಮಾ ಹಣದ ದುರಾಸೆಯಿಂದ ಇತರ ಮೂವರು ಸಹಚರರೊಂದಿಗೆ ಸೇರಿ ತನ್ನ ಪತ್ನಿಯನ್ನು ಕೋಲು ಮತ್ತು ದೊಣ್ಣೆಗಳಿಂದ ಹೊಡೆದು ಕೊಂದಿದ್ದಾಗಿ ಒಪ್ಪಿಕೊಂಡಿದ್ದಾನೆ.
ಹಮೀರ್‌ಪುರದ ಲಾಲ್‌ಪುರ ಪ್ರದೇಶದ ಬೈತ್ಕಾ ಧಾಮ್ ದೇವಾಲಯದ ಬಳಿ ರೀಟಾ ಅವರ ಮೃತದೇಹ ಪತ್ತೆಯಾಗಿತ್ತು. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು.
ಮರಣೋತ್ತರ ಪರೀಕ್ಷೆಯ ವರದಿಯಲ್ಲಿ, ರೀಟಾಳ ದೇಹದ ಮೇಲೆ 12 ಕ್ಕೂ ಹೆಚ್ಚು ಗಾಯಗಳಾಗಿರುವ ಬಗ್ಗೆ ಉಲ್ಲೇಖವಿತ್ತು. ಆಕೆಯ ದೇಹದ ಅಂಗಗಳು ಸಂಪೂರ್ಣವಾಗಿ ಹಾನಿಗೊಳಗಾಗಿರುವುದು ತಿಳಿದುಬಂದಿತ್ತು. ಇದನ್ನೂ ಓದಿ: ಪೆರುವಿನಲ್ಲಿ ಪ್ರವಾಸಿ ವಿಮಾನ ಪತನ; 13 ಮಂದಿ ಸಾವು
ರೀಟಾ 2002ರಲ್ಲಿ ವಿವಾಹವಾಗಿದ್ದರು. ಆಕೆಗೆ ಮೂವರು ಹೆಣ್ಣುಮಕ್ಕಳು ಮತ್ತು ಓರ್ವ ಮಗ ಇದ್ದ. ಪತಿ ನಿಧನದ ನಂತರ ರೀಟಾ ಕಾನ್ಪುರದಲ್ಲಿ ನೆಲೆಸಿದ್ದರು. ಈ ವೇಳೆ ಅಮಿರ್ ಪರಿಚಯವಾಯಿತು. ಕೊನೆಗೆ ಆತನೊಂದಿಗೆ ಎರಡು ವರ್ಷಗಳ ಹಿಂದೆ ವಿವಾಹವಾದರು.
ಅಮರ್ ಎರಡು ತಿಂಗಳ ಹಿಂದೆ ರೀಟಾ ಹೆಸರಿನಲ್ಲಿ 44 ಲಕ್ಷ ರೂಪಾಯಿಗಳ ವಿಮಾ ಪಾಲಿಸಿಯನ್ನು ಮಾಡಿಸಿದ್ದರು. ಮೊದಲ ಪ್ರೀಮಿಯಂ ಆಗಿ 2.60 ಲಕ್ಷ ರೂಪಾಯಿಗಳನ್ನು ಠೇವಣಿ ಮಾಡಿದ್ದರು.
