Connect with us

Districts

ಯುಗಾದಿ ನೆಪದಲ್ಲಿ ಮತದಾರರಿಗೆ ಭರ್ಜರಿ ಗಿಫ್ಟ್-‘ಹೊಸತೊಡಕು’ ರೂಪದಲ್ಲಿ ಮಟನ್-ಚಿಕನ್ ಭಾಗ್ಯ!

Published

on

ಮಂಡ್ಯ/ಹಾಸನ: ಚುನಾವಣೆ ಹೊಸ್ತಿಲಲ್ಲೆ ಮಂಡ್ಯದಲ್ಲಿ ಸಾಲು ಸಾಲು ಐಟಿ ರೈಡ್‍ಗಳು ನಡೆದು ಮನೆಯಲ್ಲಿ ಹಣ ಸಂಗ್ರಹಿಸೋದು ಕಷ್ಟ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜಕಾರಣಿಗಳು ಯುಗಾದಿ ಹಬ್ಬದ ವರ್ಷತೊಡಕನ್ನು ಬಂಡವಾಳ ಮಾಡಿಕೊಂಡು ಮತದಾರರಿಗೆ ಭರ್ಜರಿ ಗಿಫ್ಟ್ ಕೊಡಲು ಪ್ಲಾನ್ ಮಾಡಿದ್ದಾರೆ. ಹಬ್ಬದ ನೆಪದಲ್ಲಿ ಭರ್ಜರಿಯಾಗಿ ಮಟನ್ ಚಿಕನ್ ಕೊಡುವ ಪ್ಲಾನ್ ನಡೆಯುತ್ತಿದೆ ಎನ್ನಲಾಗಿದೆ.

ಮಂಡ್ಯ ಲೋಕಸಭಾ ಅಖಾಡ ನಿಖಿಲ್ ವರ್ಸಸ್ ಸುಮಲತಾ ಅಂಬರೀಶ್ ಸ್ಪರ್ಧೆಯಿಂದ ಭರ್ಜರಿ ರಂಗೇರಿದೆ. ಹೀಗಾಗಿ ಇಡೀ ರಾಜ್ಯಾದ್ಯಂತ ಮಂಡ್ಯ ಲೋಕಸಭಾ ಕ್ಷೇತ್ರ ಕುತೂಹಲ ಕೆರಳಿಸಿದ್ದು, ಯಾವುದೇ ಅಕ್ರಮ ನಡೆಯದಂತೆ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ. ಚುನಾವಣೆಯ ಹೊತ್ತಲ್ಲೇ ಯುಗಾದಿ ಹಬ್ಬ ಬಂದಿದ್ದು, ಯುಗಾದಿ ಹಬ್ಬದ ಮಾರನೇ ದಿನವಾದ ಇಂದು ಮಾಂಸದಡುಗೆ ಮಾಡುವ ತಯಾರಿಯಲ್ಲಿದ್ದಾರೆ. ಹೀಗಾಗಿ ರಾಜಕಾರಣಿಗಳು ಮತದಾರರನ್ನು ಸೆಳೆಯಲು ಹಬ್ಬದ ಹೆಸರಲ್ಲಿ ಯಾರಿಗೂ ಅನುಮಾನ ಬಾರದಂತೆ ಮಟನ್ ಚಿಕನ್ ಭಾಗ್ಯ ಕಲ್ಪಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ಮಂಡ್ಯದಂತೆ ಹೆಚ್ಚು ಕುತೂಹಲ ಕೆರಳಿಸಿರೋ ಮತ್ತೊಂದು ಕ್ಷೇತ್ರ ಹಾಸನ. ಇಲ್ಲೂ ಹೊಸತೊಡಕು ಜೋರಾಗೇ ನಡೆಯತ್ತೆ. ಆದ್ರೆ ಎಲೆಕ್ಷನ್ ಹಿನ್ನೆಲೆ ಸಾಮೂಹಿಕವಾಗಿ ಬಾಡೂಟ ಮಾಡಲೇಬೇಕಿದ್ದರೆ ಅದಕ್ಕೆ ಸರಿಯಾದ ಕಾರಣ ನೀಡಬೇಕು. ಚುನಾವಣಾ ಇಲಾಖೆಯಿಂದ ಮುಂಚಿತವಾಗಿ ಅನುಮತಿ ಪಡೆದು ಬಾಡೂಟ ಅಥವಾ ಪಾರ್ಟಿಗಳನ್ನು ಆಯೋಜಿಸಬೇಕು. ಹಾಗಾಗಿ ಸಾಮೂಹಿಕ ಹೊಸತೊಡಕು ಮಾಡುವ ಪ್ಲಾನ್‍ಗೆ ಚುನಾವಣಾ ಇಲಾಖೆ ತಣ್ಣೀರೆರಚಿದೆ.

 

ಸಕ್ಕರೆ ನಾಡು ಮಂಡ್ಯದಲ್ಲಿ ಮತದಾರರಿಗೆ ಮಟನ್, ಚಿಕನ್ ಭಾಗ್ಯ ಕಲ್ಪಿಸ್ತಾರೆ ಅಂತ ಊಹಪೋಹ ಹರಿದಾಡ್ತಿದ್ರೆ, ಮತ್ತೊಂದು ಕಡೆ ಚುನಾವಣಾ ಅಧಿಕಾರಿಗಳು ಹಬ್ಬದ ಹೆಸರಲ್ಲಿ ಕೊಡುವ ಕೊಡುಗೆಗಳ ಮೇಲೆ ಕಣ್ಣಿಟ್ಟಿದ್ದಾರೆ.

Click to comment

Leave a Reply

Your email address will not be published. Required fields are marked *