ತಿರುವನಂತಪುರಂ: ತಾಯಿಯ ಮೇಲೆ ಹಲ್ಲೆ ನಡೆಸಲು ಯತ್ನಿಸಿದ 79 ವರ್ಷದ ವ್ಯಕ್ತಿಯನ್ನು ಅಪ್ರಾಪ್ತ ಬಾಲಕಿಯರು ಕೊಂದಿರುವ ಘಟನೆ ಕೇರಳದ ವಯನಾಡು ಜಿಲ್ಲೆಯಲ್ಲಿ ನಡೆದಿದೆ.
Advertisement
ಅಂಬಳವಯಲ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮಹಮ್ಮದ್ ಕೋಯಾ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಬಾಲಕಿಯರ ತಂದೆಯ ಚಿಕ್ಕಮ್ಮನ ಪತಿ ಮಹಮ್ಮದ್ ಕೋಯಾ ತಾಯಿಯ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಬಾಲಕಿಯರು ಹಲ್ಲೆ ನಡೆಸುತ್ತಿರುವುದನ್ನು ತಡೆಯಲು ಪ್ರಯತ್ನಿಸಿದ್ದಾರೆ. ಆದರೆ ತಡೆಯಲಾಗದೇ ಕೊನೆಗೆ ಕೊಡಲಿ ಹಿಡಿದು ಮಹಮ್ಮದ್ ಕೋಯಾ ಹತ್ಯೆಗೈದಿದ್ದಾರೆ. ಇದನ್ನೂ ಓದಿ: ಮಾಜಿ ಸೈನಿಕರನ್ನು ಹತ್ಯೆಗೈದ ತಾಲಿಬಾನಿಗಳ ವಿರುದ್ಧ ಅಫ್ಘಾನ್ ಮಹಿಳೆಯರ ಪ್ರತಿಭಟನೆ
Advertisement
ನಂತರ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಬಾವಿಯಲ್ಲಿದ್ದ ಶವವನ್ನು ಹೊರತೆಗೆದಿದ್ದು, ಬಾಲಕಿಯರು ತಮ್ಮ ತಪ್ಪನ್ನು ಒಪ್ಪಿಕೊಂಡು ಶರಣಾಗಿದ್ದಾರೆ. ವಿಚಾರಣೆ ವೇಳೆ ಎರಡು ಕುಟುಂಬದವರು ಒಂದೇ ಮನೆಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಮೊಹಮ್ಮದ್ ಬಾಲಕಿಯರನ್ನು ಹಿಂಸಿಸುತ್ತಿದ್ದ. ಇಷ್ಟು ದಿನ ಕಿರುಕುಳ ಸಹಿಸಿಕೊಂಡಿದ್ದ ಬಾಲಕಿಯರು ಇದೀಗ ಕೊಲೆ ಮಾಡಿರಬಹುದು ಎಂದು ನೆರೆಹೊರೆಯವರು ತಿಳಿಸಿದ್ದಾರೆ. ಇದನ್ನೂ ಓದಿ: ನಾಯಿಗಾಗಿ ಜಡೆ ಜಗಳ – ಯುವತಿಯನ್ನ ಕಚ್ಚಿದ ಮಹಿಳೆ!