ಐಪಿಎಲ್ (IPL) ಟೂರ್ನಿಯ 19 ವರ್ಷಗಳ ಇತಿಹಾಸದಲ್ಲಿ ಅತಿ ಹೆಚ್ಚು ಆದಾಯ ಪಡೆದ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ (Virat Kohli) ಅಗ್ರ ಸ್ಥಾನ ಪಡೆದಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಫೆನಾಟಿಕ್ ಸ್ಪೋರ್ಟ್ಸ್ ಮತ್ತು ಹುರುನ್ ನೀಡಿರುವ ವರದಿ ಪ್ರಕಾರ, ಐಪಿಎಲ್‌ನ 19 ಆವೃತ್ತಿಗಳಲ್ಲೂ ಆರ್‌ಸಿಬಿ (RCB) ತಂಡವನ್ನು ಪ್ರತಿನಿಧಿಸಿರುವ ವಿರಾಟ್ ಕೊಹ್ಲಿ, ಒಟ್ಟು 230 ಕೋಟಿ ಆದಾಯ ಪಡೆದು, ಟೀಂ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮಾ ಹಾಗೂ ಎಂಎಸ್ ಧೋನಿ ಅವರನ್ನು ಹಿಂದಿಕ್ಕಿದ್ದಾರೆ. ಇದನ್ನೂ ಓದಿ: ಬೆಲೆ ಏರಿಕೆ ಮಧ್ಯೆ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್ – ಸದ್ಯಕ್ಕಿಲ್ಲ ಟಿಕೆಟ್ ದರ ಹೆಚ್ಚಳ
ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ 227.2 ಕೋಟಿ ರೂ., ಮಹೇಂದ್ರ ಸಿಂಗ್ ಧೋನಿ 200.3 ಕೋಟಿ ರೂ. ಗಳಿಕೆ ಮಾಡಿದ್ದಾರೆ. ಮಹಿಳಾ ಆಟಗಾರ್ತಿಯರಲ್ಲಿ ಸ್ಮೃತಿ ಮಂದಾನ ಅಗ್ರಸ್ಥಾನದಲ್ಲಿದ್ದಾರೆ. ಡಬ್ಲ್ಯೂಪಿಎಲ್‌ನಿಂದ ಸ್ಮೃತಿ 13.7 ಕೋಟಿ ಆದಾಯ ಪಡೆದಿದ್ದಾರೆ. ಇದನ್ನೂ ಓದಿ: ಹಿಂದೆ ಪಬ್ಲಿಕ್ ಟಿವಿಗೆ ಹೋಗಿದ್ದೆ, ಪಂಥಾಹ್ವಾನ ಸ್ವೀಕರಿಸಿದ್ದೇನೆ: ಹೆಚ್‌ಡಿಕೆಗೆ ಡಿಕೆಶಿ ಸವಾಲ್

