InternationalLatestMain Post

ನಾಯಿಗಾಗಿ ಜಡೆ ಜಗಳ – ಯುವತಿಯನ್ನ ಕಚ್ಚಿದ ಮಹಿಳೆ!

Advertisements

ಬರ್ಲಿನ್: ನಾಯಿಯ ವಿಷಯಕ್ಕೆ ಪ್ರಾರಂಭವಾದ ಜಗಳ ಯುವತಿಯನ್ನು ಮಹಿಳೆ ಕಚ್ಚುವುದರಲ್ಲಿ ಮುಕ್ತಾಯವಾದ ವಿಲಕ್ಷಣ ಘಟನೆ ಜರ್ಮನ್ ನಲ್ಲಿ ನಡೆದಿದೆ.

ಜರ್ಮನಿಯ ಥುರಿಂಗಿಯಾ ರಾಜ್ಯದಲ್ಲಿ 51 ವರ್ಷದ ಮಹಿಳೆ, ತನ್ನ ನಾಯಿಯನ್ನು ಹೊಡೆಯುವುದನ್ನು 27 ವರ್ಷದ ಯುವತಿ ನೋಡಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಯುವತಿ ಮಹಿಳೆಯನ್ನು ಬೈಯಲು ಮುಂದಾಗುತ್ತಾಳೆ. ಈ ವೇಳೆ ಮಹಿಳೆ, ನೀವು ನಾಯಿಯನ್ನು ಸರಿಯಾಗಿ ಬೆಳೆಸಿಲ್ಲ ಎಂದು ಯುವತಿ ಜೊತೆ ಜಗಳವಾಡುತ್ತಾಳೆ. ಇದನ್ನೂ ಓದಿ: ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ರತನ್ ಟಾಟಾ

ಇದರಿಂದ ರೊಚ್ಚಿಗೆದ್ದ ಯುವತಿ ನನ್ನ ನಾಯಿಗೆ ಹೊಡೆಯುತ್ತೀಯಾ ಎಂದು ಮಹಿಳೆಯ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾಳೆ. ಈ ವೇಳೆ ಮಹಿಳೆಯು ಯುವತಿಯನ್ನು ಕಚ್ಚಿ ಗಾಯಗೊಳಿಸಿದ್ದಾಳೆ. ಆದರೆ ನಾಯಿಗಳು ಮಾತ್ರ ಇವರಿಬ್ಬರ ಜಗಳವನ್ನು ನೋಡುತ್ತಿದ್ದವು ಎಂದು ಪೊಲೀಸರಿಗೆ ಸ್ಥಳೀಯರು ತಿಳಿಸಿದರು.

ಪ್ರಸ್ತುತ ಯುವತಿಗೆ ದೈಹಿಕ ಹಿಂಸೆ ನೀಡಿದ ಆರೋಪದ ಮೇಲೆ ಮಹಿಳೆ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಶಿರಾದಲ್ಲಿ ಜೆಡಿಎಸ್ ಮುಳುಗಿತು ಅನ್ನುತ್ತಿದ್ದವರಿಗೆ ಜನ ಉತ್ತರ ನೀಡಿದ್ದಾರೆ: ಹೆಚ್‍ಡಿಕೆ

Leave a Reply

Your email address will not be published.

Back to top button