ವಿಜಯಪುರ: ಕಾಲು ಜಾರಿ ತೆರದ ಬಾವಿಗೆ ಬಿದ್ದು ಇಬ್ಬರು ಬಾಲಕಿಯರು ಸಾವನ್ನಪ್ಪಿದ ಘಟನೆ ನಿಡಗುಂದಿ (Nidagundi) ತಾಲೂಕಿನ ಬಳಬಟ್ಟಿ ಗ್ರಾಮದ ತೋಟದ ಮನೆಯಲ್ಲಿ ನಡೆದಿದೆ.
ಸಾಕ್ಷಿ ( 15 ), ರಕ್ಷಿತಾ ( 10 ) ಮೃತ ಬಾಲಕಿಯರು. ಇವರನ್ನು ರಕ್ಷಿಸಲು ತಂದೆ ಸಾಬಣ್ಣ ( 40 ) ಕೂಡ ಬಾವಿಗೆ ಜಿಗದಿದ್ದು, ನಾಪತ್ತೆಯಾಗಿದ್ದಾರೆ. ಸಾಬಣ್ಣ ಅವರಿಗೆ ಈಜು ಬರುತ್ತಿರಲಿಲ್ಲ ಎಂದು ತಿಳಿದುಬಂದಿದೆ. ಇದನ್ನೂ ಓದಿ: ವೀಕೆಂಡ್ ರಜೆಗೆ ಆದಿಯೋಗಿ ದರ್ಶನಕ್ಕೆ ಬಂದ ಯುವಕ-ಯುವತಿ ಅಪಘಾತಕ್ಕೆ ಬಲಿ
ತೆಪ್ಪದ ಮೂಖಾಂತರ ಗ್ರಾಮಸ್ಥರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಇಬ್ಬರು ಮಕ್ಕಳ ಮೃತದೇಹ ಪತ್ತೆಯಾಗಿದ್ದು, ಸಾಬಣ್ಣ ಅವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ನಿಡಗುಂದಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಗಂಡ ಅಂತ್ಯಸಂಸ್ಕಾರಕ್ಕೆ ಬರಬಾರದು – ಡೆತ್‌ನೋಟ್ ಬರೆದಿಟ್ಟು ಗೃಹಿಣಿ ಆತ್ಮಹತ್ಯೆ

