BollywoodCinemaLatestMain Post

ಉರ್ಫಿಗೆ ಸಂಕಷ್ಟ: ಸಿಮ್ ಕಾರ್ಡ್ ಕಾಸ್ಟ್ಯೂಮ್ ಕಂಡು ಮನೆಗೆ ಬಂದ ಪೊಲೀಸ್

ವಿವಿಧ ಬಗೆಯ ಕಾಸ್ಟ್ಯೂಮ್ ನಿಂದಾಗಿಯೇ ಗಮನ ಸೆಳೆಯುವ ಬಾಲಿವುಡ್ (Bollywood) ನಟಿ ಉರ್ಫಿ ಜಾವೇದ್ (Urfi Javed), ಇದೀಗ ಮತ್ತೊಂದು ಕಾಸ್ಟ್ಯೂಮ್ ನಲ್ಲಿ ಮಿಂಚಿದ್ದಾರೆ. ಆದರೆ, ಈ ಬಟ್ಟೆಯನ್ನು ಹಾಕುವ ಮೂಲಕ ಎಡವಟ್ಟು ಮಾಡಿಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ಅವರು ವಿಚಾರಣೆಯನ್ನೂ ಎದುರಿಸಬೇಕಾದ ಸಂದರ್ಭ ಬಂದಿದೆ. ಉರ್ಫಿ ಬಟ್ಟೆ ನೋಡಿ ತಲೆ ಕೆಡಿಸಿಕೊಂಡಿರುವ ಪೊಲೀಸರು, ಬಟ್ಟೆ ಮೂಲದ ಜಾಡನ್ನು ಹಿಡಿದು ಹೊರಟಿದ್ದಾರೆ.

ಈ ಬಾರಿ ಉರ್ಫಿ ಸಿಮ್ ಕಾರ್ಡಿನಲ್ಲಿ ನೇಯ್ದ ಬಟ್ಟೆಯಿಂದ ತಯಾರಾದ ಕಾಸ್ಟ್ಯೂಮ್ ಹಾಕಿದ್ದು, ಈ ಕಾಸ್ಟ್ಯೂಮ್ ಗಾಗಿ ನೂರಾರು ಸಿಮ್ ಕಾರ್ಡ್ ಗಳನ್ನು (Sim Card) ಬಳಕೆ ಮಾಡಿದ್ದಾರೆ. ಈ ಪ್ರಮಾಣದ ಸಿಮ್ ಕಾರ್ಡ್ ಈಕೆಯ ಬಳಿ ಎಲ್ಲಿಂದ ಬಂದವು ಎನ್ನುವ ಮೂಲವನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ. ಈ ಸಿಮ್ ಕಾರ್ಡ್ ಗಾಗಿ ಆಕೆ ಲಕ್ಷಾಂತರ ರೂಪಾಯಿಯನ್ನು ಖರ್ಚು ಮಾಡಿದ್ದು, ಇಷ್ಟೊಂದು ಸಿಮ್ ಕಾರ್ಡ್ ಕೊಟ್ಟವರನ್ನು ಪತ್ತೆ ಮಾಡಲಾಗುತ್ತಿದೆ. ಇದನ್ನೂ ಓದಿ: ಧ್ರುವ ಸರ್ಜಾ ಜೊತೆ ಸ್ಕ್ರೀನ್ ಶೇರ್ ಮಾಡ್ತಾರಾ ರವಿಮಾಮನ ಬೆಡಗಿ ಶಿಲ್ಪಾ ಶೆಟ್ಟಿ

ಈ ಹಿಂದೆ ಗೋಣಿ ಚೀಲ, ಪ್ಲ್ಯಾಸ್ಟಿಕ್, ಹೂವುಗಳು, ಚಿಟ್ಟೆ ಹೀಗೆ ನಾನಾ ಅವತಾರಗಳಲ್ಲಿ ಕಾಣಿಸಿಕೊಂಡಿರುವ ಉರ್ಫಿಗೆ ಲಕ್ಷಾಂತರ ಅಭಿಮಾನಿಗಳು ಇದ್ದಾರೆ. ಅಲ್ಲದೇ, ಈಗೆ ಧರಿಸುವ ಬಟ್ಟೆಗಳು ಕೂಡ ಒಂದೊಂದು ಬಾರಿ ಟ್ರೆಂಡ್ ಆಗುತ್ತವೆ. ಅಲ್ಲದೇ, ಯಾವಾಗಲೂ ಕ್ಯಾಮೆರಾಗಳು ಈಕೆಯನ್ನೇ ಕಾಯುತ್ತಿರುತ್ತವೆ. ಹಾಗಾಗಿಯೇ ಹೊಸ ಹೊಸ ವಿನ್ಯಾಸದ ಬಟ್ಟೆಗಳನ್ನು ಉರ್ಫಿ ಧರಿಸುತ್ತಾರೆ. ಅದನ್ನು ಡಿಸೈನ್ ಮಾಡಿಸಲು ತಲೆ ಕೆಡಿಸಿಕೊಳ್ಳುತ್ತಾರೆ.

ಉರ್ಫಿ ಧರಿಸುವ ಬಟ್ಟೆಯನ್ನು ತಯಾರಿಸುವ ಕಾಸ್ಟ್ಯೂಮ್ (Costume) ಡಿಸೈನರ್ ಯಾರು ಎನ್ನುವ ಕುತೂಹಲ ಕೂಡ ಹಲವರಲ್ಲಿದೆ. ಕೆಲವು ಸಲ ಆಕೆಯೇ ಡಿಸೈನ್ ಮಾಡಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ. ಈ ಸೀಮ್ ಐಡ್ಯಾ ಕೊಟ್ಟವರು ಯಾರು ಎನ್ನುವುದು ಸದ್ಯಕ್ಕಿರುವ ಕುತೂಹಲ. ಈಗಾಗಲೇ ಉರ್ಫಿ ಮನೆಗೆ ಪೊಲೀಸ್ (Police) ಬಂದಾಗಿದೆ. ಮುಂದಿನ ಕ್ರಮ ಏನು ಅನ್ನುವುದು ಸದ್ಯಕ್ಕಿರುವ ಪ್ರಶ್ನೆ.

Live Tv

Leave a Reply

Your email address will not be published.

Back to top button