LatestMain PostNational

ರಾಷ್ಟ್ರಧ್ವಜದ ಮೇಲೆ ಕಾಂಗ್ರೆಸ್‍ನವರಿಗೆ ಇರುವುದು ಹುಸಿ ಪ್ರೇಮ: ಬಿಜೆಪಿ

Advertisements

ನವದೆಹಲಿ: ಕಾಂಗ್ರೆಸ್ ಮತ್ತು ಬಿಜೆಪಿಯ ಟ್ವೀಟ್ ವಾರ್ ಇಂದು ನಿನ್ನೆಯದಲ್ಲ. ದಿನವಿಡೀ ಈ ಎರಡು ಪಕ್ಷಗಳು ಟ್ವೀಟ್ ಮಾಡುವ ಮೂಲಕ ವಾಗ್ದಾಳಿ ಮಾಡಿಕೊಳ್ಳುತ್ತಿರುತ್ತೆ. ಅದೇ ರೀತಿ ರಾಷ್ಟ್ರಧ್ವಜದ ಮೇಲೆ ಕಾಂಗ್ರೆಸ್‍ಗೆ ಇರುವುದು ಹುಸಿ ಪ್ರೇಮ ಎನ್ನುವ ಮೂಲಕ ಬಿಜೆಪಿ ಕಿಡಿಕಾರಿದೆ.

ಆರ್‌ಎಸ್‍ಎಸ್ ಅನ್ನು ರಾಷ್ಟ್ರವಿರೋಧಿ ಸಂಘಟನೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ ಬಳಿಕ ಬಿಜೆಪಿ ತಿರುಗೇಟು ಕೊಟ್ಟಿದೆ.

ಟ್ವಿಟ್‍ನಲ್ಲಿ ಏನಿದೆ?
ಕರ್ನಾಟಕದ ಖಾದಿ ಗ್ರಾಮೋದ್ಯೋಗದ ಕಾರ್ಮಿಕರನ್ನು ಭೇಟಿಯಾದಾಗ ರಾಹುಲ್ ಟ್ವೀಟ್ ಮಾಡಿದ್ದು, ಇಂದು ಕರ್ನಾಟಕದ ಹುಬ್ಬಳ್ಳಿಯಲ್ಲಿರುವ ಕರ್ನಾಟಕ ಖಾದಿ ವಿಲೇಜ್ ಇಂಡಸ್ಟ್ರೀಸ್‍ನಲ್ಲಿ ನಮ್ಮ ತ್ರಿವರ್ಣ ಧ್ವಜವನ್ನು ನೇಯುವ ಎಲ್ಲ ಕಾರ್ಮಿಕರನ್ನು ಭೇಟಿಯಾಗಲು ತುಂಬಾ ಸಂತೋಷವಾಗಿದೆ. ತ್ರಿವರ್ಣ ಧ್ವಜವನ್ನು ಯಾವಾಗಲೂ ಎತ್ತರದಲ್ಲಿ ಇರಿಸಲು ಲಕ್ಷಾಂತರ ದೇಶವಾಸಿಗಳು ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. ಆದರೆ ಒಂದು ಸಂಘಟನೆಯು ಯಾವಾಗಲೂ ತ್ರಿವರ್ಣ ಧ್ವಜವನ್ನು ಅಳವಡಿಸಿಕೊಳ್ಳಲು ನಿರಾಕರಿಸಿತು. ಇದನ್ನೂ ಓದಿ:  ಭಾರತದ ಮೂರನೇ ಅತಿ ದೊಡ್ಡ ಕಲ್ಲಿದ್ದಲು ಪೂರೈಕೆದಾರ ರಷ್ಯಾ 

52 ವರ್ಷಗಳ ಕಾಲ ನಾಗ್ಪುರದ ತನ್ನ ಪ್ರಧಾನ ಕಛೇರಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಿಲ್ಲ ಮತ್ತು ಅದನ್ನು ನಿರಂತರವಾಗಿ ಅವಮಾನಿಸಿತು. ಆರ್‍ಎಸ್‍ಎಸ್ ತನ್ನ ಕೇಂದ್ರ ಕಚೇರಿಯಲ್ಲಿ 52 ವರ್ಷಗಳ ಕಾಲ ತ್ರಿವರ್ಣ ಧ್ವಜವನ್ನು ಏಕೆ ಹಾರಿಸಲಿಲ್ಲ? ಖಾದಿಯಿಂದ ರಾಷ್ಟ್ರಧ್ವಜ ಮಾಡುವವರ ಜೀವನಾಧಾರ ಏಕೆ ನಾಶವಾಗುತ್ತಿದೆ? ಚೀನಾದಿಂದ ಯಂತ್ರ-ನಿರ್ಮಿತ ಪಾಲಿಯೆಸ್ಟರ್ ಧ್ವಜಗಳ ಆಮದನ್ನು ಏಕೆ ಅನುಮತಿಸಲಾಗಿದೆ ಎಂದು ಪ್ರಶ್ನೆ ಮಾಡಿದ್ದರು.

ಬಿಜೆಪಿ ಪ್ರತಿಕ್ರಿಯೆ
ರಾಹುಲ್ ಗಾಂಧಿ ಟ್ವೀಟ್‍ಗೆ ಬಿಜೆಪಿ ನಾಯಕರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಆರ್‍ಜಿ ಅವರ ವಿವಾದಾತ್ಮಕ ಟ್ವೀಟ್‍ಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದು, ಆರ್‍ಎಸ್‍ಎಸ್ ಕುರಿತು ರಾಹುಲ್ ಗಾಂಧಿ ಮಾಡಿದ ಟ್ವೀಟ್‍ಗೆ ಯಾವುದೇ ಬೆಲೆ ನೀಡಬಾರದು.

ದೇಶವು ಆರ್‌ಎಸ್‍ಎಸ್ ಸಿದ್ಧಾಂತವನ್ನು ಒಪ್ಪಿಕೊಂಡಿದೆ. ಅದಕ್ಕಾಗಿಯೇ ನಾವು 2 ಸ್ಥಾನಗಳಿಂದ ಹೆಚ್ಚು ಸ್ಥಾನಗಳನ್ನು ತಲುಪಿದ್ದೇವೆ. ಅದನ್ನು ಒಪ್ಪಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ರಾಹುಲ್ ಗಾಂದಿ,ü ಅರೆಕಾಲಿಕ ರಾಜಕಾರಣಿ ಎಂದು ಟೀಕಿಸಿದ್ದಾರೆ.

ಬಿಜೆಪಿ ನಾಯಕ ರಾಕೇಶ್ ಸಿನ್ಹಾ ಅವರು ಟ್ವೀಟ್ ಮಾಡಿದ್ದು, ರಾಷ್ಟ್ರಧ್ವಜದ ಮೇಲೆ ಕಾಂಗ್ರೆಸ್ ಹುಸಿ ಪ್ರೀತಿ ಹೊಂದಿದೆ. ಸಂಸತ್ತಿನ ಸೆಂಟ್ರಲ್ ಹಾಲ್‍ನಲ್ಲಿ ಕಾಂಗ್ರೆಸ್ ಸರ್ಕಾರ ನೆಹರು, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಭಾವಚಿತ್ರಗಳನ್ನು ಇಡಲಾಗಿದೆ. ಅದರಲ್ಲಿ ತ್ರಿವರ್ಣ ಧ್ವಜ ಅವರ ಕಾಲುಗಳನ್ನು ಸ್ಪರ್ಶಿಸುತ್ತಿದೆ! ತಿರಂಗದ ಮೇಲಿನ ಅವರ ಹುಸಿ ಪ್ರೀತಿಗೆ ನಾಚಿಕೆಯಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:  ಮಗನ 2ನೇ ವರ್ಷದ ಬರ್ತ್‍ಡೇಗೆ ಕುದುರೆ ಓಟದ ಸ್ಪರ್ಧೆ ಆಯೋಜಿಸಿದ್ದ ತಂದೆ 

ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಕೂಡ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಪಕ್ಷವು ‘ನಮ್ಮ ರಾಷ್ಟ್ರೀಯ ಚಿಹ್ನೆಗಳು ಮತ್ತು ಇತಿಹಾಸದೊಂದಿಗೆ ಕಠೋರವಾಗಿದೆ’ ಎಂದು ಕರೆದಿದ್ದಾರೆ.

Live Tv

Leave a Reply

Your email address will not be published.

Back to top button