ಜನರ ಫ್ಯಾಷನ್ ಸೆನ್ಸ್ ಬದಲಾಗಿದೆ. ಕಾಲಕ್ಕೆ ತಕ್ಕಂತೆ ಹೊಸ ರೀತಿಯ ಫ್ಯಾಷನ್ ನೋಡುಗರ ಗಮನ ಸೆಳೆಯುತ್ತಿದೆ. ಇದೀಗ ಬ್ಲೌಸ್ ಶೈಲಿಯ ಟೈ ಅಪ್ ಕ್ರಾಪ್ ಟಾಪ್ಗಳು ಈ ಸೀಸನ್ನ ವೀಕೆಂಡ್ ಔಟಿಂಗ್ಗೆ ಸಾಥ್ ನೀಡಲು ಆಗಮಿಸಿವೆ. ಹಾಲಿಡೇಯ ರಂಗು ಹೆಚ್ಚಿಸಲು ಆಗಮಿಸಿರುವ ಇವು ರೆಟ್ರೊ ಸ್ಟೈಲ್ನಲ್ಲಿ ಕಾಣಿಸಿಕೊಂಡಿವೆ. ವೀಕೆಂಡ್ ಔಟಿಂಗ್ ಮಾತ್ರವಲ್ಲ, ಬೀಚ್ ಅಥವಾ ಯಾವುದೇ ಹಾಲಿಡೇಯ ಖುಷಿಯನ್ನು ಹೆಚ್ಚಿಸಲು ಸಜ್ಜಾಗಿವೆ. ಇದನ್ನೂ ಓದಿ:ರ್ಯಾಲಿಗೆ ಅನುಮತಿ ನಿರಾಕರಣೆ: ಸ್ವಲ್ಪ ದಿನ ಕಾಯಿರಿ, ಮತ್ತೆ ಬರ್ತೀವಿ ಅಂತಿದ್ದಾರೆ ದರ್ಶನ್ ಫ್ಯಾನ್ಸ್
Advertisement
ಅಂದ ಹಾಗೆ, ಮಾಮೂಲಿ ಕ್ರಾಪ್ ಟಾಪ್ಗಳು, ಹೊಟ್ಟೆಯ ಬೆಲ್ಲಿಯ ಮೇಲೆ ನಿಲ್ಲುತ್ತವೆ. ಆದರೆ, ಇವು ಬೆಲ್ಲಿಯನ್ನು ಮರೆ ಮಾಚಿ ಟೈಯಿಂಗ್ ಲುಕ್ ನೀಡುತ್ತವೆ. ಅಷ್ಟೇ ಯಾಕೆ? ಹಾಲಿಡೇಯಲ್ಲಿನ ಸ್ಟೈಲಿಂಗ್ಗೆ ಸಾಥ್ ನೀಡುತ್ತವೆ. ಆಕರ್ಷಕವಾಗಿ ಕಾಣುವ ಇವು ಬಿಂದಾಸ್ ಲುಕ್ನಲ್ಲಿ ಸೇರುತ್ತವೆ.
Advertisement
Advertisement
ಹುಡುಗಿಯರು ಅದರಲ್ಲೂ ಯುವತಿಯರಿಗೆ ಇವು ಪ್ರಿಯವಾಗಿವೆ. ಸಾಮಾನ್ಯ ದಿನಗಳಲ್ಲಿ ಧರಿಸಲು ಹಿಂಜರಿಯುವ ಯುವತಿಯರು ಹಾಲಿಡೇಗಳಲ್ಲಿ ಇವನ್ನು ಧರಿಸಲಾರಂಭಿಸಿದ್ದಾರೆ. ನೋಡಲು ಮನಮೋಹಕವಾಗಿ ಕಾಣಿಸುತ್ತವೆ. ಟೈ ಅಪ್ ಕ್ರಾಪ್ ಟಾಪ್ (Tie Up Crop Top) ನೋಡಲು ಬ್ಲೌಸ್ನ ಹೊಸ ರೂಪದಂತೆಯೇ ಕಾಣುತ್ತವೆ.
Advertisement
ನೋಡಲು ಪಕ್ಕಾ ಸೀರೆ ಬ್ಲೌಸ್ನಂತೆ ಕಾಣುತ್ತದೆ. ಆದರೆ ಇದೇ ಬೇರೇ, ಹಿಂದಿನ ಸಿನಿಮಾಗಳಲ್ಲಿ ರೆಟ್ರೊ ಸ್ಟೈಲ್ ಇವು ಟ್ರೆಂಡಿಯಾಗಿದ್ದವು. ಸಿನಿಮಾ ತಾರೆಯರು ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲ, ಸಮಾರಂಭಗಳಲ್ಲೂ ಇವನ್ನು ಧರಿಸುತ್ತಿದ್ದರು. ಹಾಗಾಗಿ ಇವು ರೆಟ್ರೊ ಸ್ಟೈಲ್ ಕ್ರಾಪ್ ಟಾಪ್ ಎನ್ನಲಾಗುತ್ತದೆ. ಬೆಲ್ ಬಾಟಮ್ ಪ್ಯಾಂಟ್ ಜೊತೆ ಇವನ್ನು ಕಾಣಬಹುದಾಗಿತ್ತು. ಇದೀಗ, ಇವು ಸ್ಕರ್ಟ್, ಮಿಡಿ ಹಾಗೂ ಶಾರ್ಟ್ಸ್ ಜೊತೆಯೂ ನೋಡಬಹುದಾಗಿದೆ.
ಇದೀಗ ಹೆಚ್ಚಾಗಿ ಫ್ಯಾಷನ್ನಲ್ಲಿರುವುದು ಟೈ ಅಪ್ ಕ್ರಾಪ್ ಟಾಪ್ಗಳು. ಪ್ರಿಂಟೆಡ್ ಅತಿ ಹೆಚ್ಚು ಟ್ರೆಂಡಿಯಾಗಿವೆ. ಡಿಸೈನರ್ ಸೆಟ್ಗಳಲ್ಲಿ ಇವು ದೊರಕುತ್ತಿವೆ. ಸಿನಿಮಾ ತಾರೆಯರು ತಮ್ಮ ಬ್ರಂಚ್ ಪಾರ್ಟಿಗಳಲ್ಲಿ ಹಾಗೂ ಹಾಲಿಡೇಗಳಲ್ಲಿ ಧರಿಸುತ್ತಿರುವುದು ಕಾಮನ್ ಆಗಿದೆ.
ಫ್ಯಾಷನ್ ಟಿಪ್ಸ್
ಈ ಟಾಪ್ಗಳನ್ನು ಇತರೇ ಔಟ್ಫಿಟ್ನೊಂದಿಗೂ ಮಿಕ್ಸ್ ಮ್ಯಾಚ್ ಮಾಡಬಹುದು.
ಜೀನ್ಸ್ ಪ್ಯಾಂಟ್ನೊಂದಿಗೆ, ಸ್ಕರ್ಟ್ ಹಾಗೂ ಶಾರ್ಟ್ಸ್ ಧರಿಸಬಹುದು.
ಒಂದೇ ಸೈಡ್ ಸೀರೆ ಪಲ್ಲುವನ್ನು ಡ್ರೇಪ್ ಮಾಡುವುದಾದಲ್ಲಿ ಸೀರೆ ಜೊತೆಗೆ ಧರಿಸಬಹುದು.
ಬೀಚ್ನಲ್ಲಿ ಶಾರ್ಟ್ಸ್ ಜೊತೆಗೆ ಧರಿಸಬಹುದು.
ಜೀನ್ಸ್ ಪ್ಯಾಂಟ್ನೊಂದಿಗೂ ಧರಿಸಬಹುದು.
ಸೊಂಟ ತೆಳ್ಳಗಿರುವವರಿಗೆ ಇದು ಹೇಳಿ ಮಾಡಿಸಿದ ಗ್ಲ್ಯಾಮರಸ್ ಟಾಪ್.
ಬ್ಲೌಸ್ನಂತಿರುವ ಈ ಟಾಪನ್ನು ಲೆಹೆಂಗಾಗೂ ಧರಿಸಬಹುದು.
ಲಾಂಗ್ ಸ್ಕರ್ಟ್ ಧರಿಸಬಹುದು.