– ರಾಜ್ಯ ರಾಜಕೀಯದಲ್ಲಿ ಮತ್ತೆ ಕುದುರೆ ವ್ಯಾಪಾರ ಸದ್ದು
ತುಮಕೂರು: ರಾಜ್ಯ ರಾಜಕೀಯದಲ್ಲಿ ಮತ್ತೆ ಕುದುರೆ ವ್ಯಾಪಾರ ಸದ್ದು ಮಾಡಿದೆ. ಕಾಂಗ್ರೆಸ್ಗೆ ಬರುವಂತೆ ಡಿಕೆ ಶಿವಕುಮಾರ್ ನನಗೆ 500 ಕೋಟಿ ಅನುದಾನ ಆಫರ್ ಕೊಟ್ಟಿದ್ದರು ಅಂತ ತುರುವೇಕೆರೆ ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ ಬಾಂಬ್ ಸಿಡಿಸಿದ್ದಾರೆ.
ತುಮಕೂರಿನ ತುರುವೇಕೆರೆ ಕ್ಷೇತ್ರದ ಸಿಎಸ್ ಪುರದಲ್ಲಿ ದೇವೇಗೌಡರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮಾತಾಡಿರುವ ಎಂ.ಟಿ.ಕೃಷ್ಣಪ್ಪ, ನನ್ನನ್ನು ಹಾಗೂ ಜಿ.ಟಿ.ದೇವೇಗೌರನ್ನು ಡಿಕೆಶಿ ಕರೆಸಿದ್ದರು. ಮುಖ್ಯಮಂತ್ರಿಗಳು, ಕಾಂಗ್ರೆಸ್ಗೆ ಬಾ 500 ಕೋಟಿ ಅನುದಾನ ಕೊಡ್ತೀನಿ ಅಂದರು ಎಂದು ಆರೋಪಿಸಿದ್ದಾರೆ. 2028 ರಲ್ಲಿ ಕುಮಾರಣ್ಣ ಸಿಎಂ ಆಗ್ತಾರೆ. ಅವರು ಸಾವಿರ ಕೋಟಿ ರೂ ಅನುದಾನ ಕೊಡ್ತಾರೆ ಅಂದೆ ಅಂತ ಎಂಟಿ ಕೃಷ್ಣಪ್ಪ ಹೇಳಿದ್ದಾರೆ.
ಸಿದ್ದರಾಮಯ್ಯ ಕಾಲದಲ್ಲೇ ನನಗೂ ಆಫರ್ ಇತ್ತು ಅಂತ ಮುಳಬಾಗಿಲು ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ಹೇಳಿದ್ದಾರೆ. ಶಾಸಕರ ಮಾತಿನಲ್ಲಿ ಸಂಶಯ ಇಲ್ಲ ಅಂತ ಕುಮಾರಸ್ವಾಮಿ ಹೇಳಿದ್ರೆ, ಪಾಪ ಅವನು ಕುಮಾರಸ್ವಾಮಿ ಹತ್ತಿರ ಸೀಟ್ಗಾಗಿ ಹೊಡೆದಾಡ್ತಿದ್ದಾನೆ. ಮಸಾಲೆ ಜಯರಾಮ್ಗೆ ಟಿಕೆಟ್ ಅನೌನ್ಸ್ ಮಾಡಿದ್ರೆ, ಅವನು ಕಾಂಗ್ರೆಸ್ಗೆ ಬರ್ತಾನೆ ಅಂತ ಸಚಿವ ಬಾಲಕೃಷ್ಣ ತಿರುಗೇಟು ಕೊಟ್ಟಿದ್ದಾರೆ. ನಮ್ಮ ಸರ್ಕಾರ ಭದ್ರವಾಗಿದೆ ಅಂತ ಸಚಿವ ನರೇಂದ್ರ ಸ್ವಾಮಿ ಹೇಳಿದ್ದಾರೆ.
