ಹೆಚ್ಚು ಖಾರವಿಲ್ಲದೆ, ಜ್ಯೂಸಿಯಾಗಿ ಮತ್ತು ನವಿರಾದ ಕ್ರೀಮಿ ಹಾಗೂ ನಟ್ಸ್ ಪರಿಮಳವನ್ನು ಹೊಂದಿರುವ ರಾಯಲ್ ಡಿಶ್ ಇದು. ಬಾಯಲ್ಲಿ ಇಟ್ಟರೆ ಕರಗಿಹೋಗುವಂಥ ಸಾಫ್ಟ್ ಚಿಕನ್ ಮತ್ತು ಅದ್ಭುತ ರುಚಿ ಹೊಂದಿದೆ. ಸುಲಭವಾಗಿ ಮನೆಯಲ್ಲಿ ಮಾಡ್ಬೋದು
ಬೇಕಾಗುವ ಸಾಮಗ್ರಿಗಳು:
ಬೋನ್ಲೆಸ್ ಚಿಕನ್
ನಿಂಬೆ ರಸ – 1 ಚಮಚ
ಉಪ್ಪು
ಗೋಡಂಬಿ
ಹಸಿಮೆಣಸಿನಕಾಯಿ
ತಾಜಾ ಕೊತ್ತಂಬರಿ
ಪುದೀನಾ ಸೊಪ್ಪು

ಫ್ರೆಶ್ ಕ್ರೀಮ್
ಶುದ್ಧ ತುಪ್ಪ ಅಥವಾ ಬೆಣ್ಣೆ
ಜೀರಿಗೆ ಪುಡಿ – 1 ಚಮಚ
ಗರಂ ಮಸಾಲಾ
ಕಸ್ತೂರಿ ಮೇತಿ
ಕಾಳುಮೆಣಸಿನ ಪುಡಿ
ಮಾಡುವ ವಿಧಾನ:
ಚಿಕನ್ ತುಂಡುಗಳಿಗೆ ನಿಂಬೆ ರಸ ಮತ್ತು ಉಪ್ಪು ಹಾಕಿ ಚೆನ್ನಾಗಿ ಕಲೆಸಿ 15 ನಿಮಿಷ ಹಾಗೆಯೇ ಬಿಡಿ. ಮಿಕ್ಸಿ ಜಾರ್ಗೆ ನೆನೆಸಿದ ಗೋಡಂಬಿ, ಹಸಿಮೆಣಸಿನಕಾಯಿ, ಕೊತ್ತಂಬರಿ-ಪುದೀನಾ ಸೊಪ್ಪು, ಗಟ್ಟಿ ಮೊಸರು ಮತ್ತು ಫ್ರೆಶ್ ಕ್ರೀಮ್ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಉಪ್ಪು-ನಿಂಬೆ ರಸದಲ್ಲಿ ನೆಂದ ಚಿಕನ್ಗೆ ಈಗ ತಯಾರಿಸಿಟ್ಟ ಹಸಿರು-ಗೋಡಂಬಿ ಪೇಸ್ಟ್ ಅನ್ನು ಸೇರಿಸಿ. ಜತೆಗೆ ಕಾಳುಮೆಣಸಿನ ಪುಡಿ ಮತ್ತು ಜೀರಿಗೆ ಪುಡಿ ಹಾಕಿ ಚೆನ್ನಾಗಿ ಕಲಸಿ ಕನಿಷ್ಠ 1 ಗಂಟೆ ಕಾಲ ನೆನೆಸಿಡಿ.
ದಪ್ಪ ಅಡಿಯ ತಾವಾ ಅಥವಾ ಬಾಣಲೆಯಲ್ಲಿ ತುಪ್ಪ ಅಥವಾ ಬೆಣ್ಣೆಯನ್ನು ಬಿಸಿ ಮಾಡಿ. ಮ್ಯಾರಿನೇಟ್ ಮಾಡಿಟ್ಟ ಚಿಕನ್ ತುಂಡುಗಳನ್ನು ಒಂದೊಂದಾಗಿ ಪ್ಯಾನ್ಗೆ ಹಾಕಿ. ಮಧ್ಯಮ ಉರಿಯಲ್ಲಿ ಚಿಕನ್ ಅನ್ನು ಎರಡೂ ಕಡೆ ಗೋಲ್ಡನ್ ಬ್ರೌನ್ ಬರುವವರೆಗೆ ರೋಸ್ಟ್ ಮಾಡಿ. ಮಸಾಲೆ ಉಳಿದಿದ್ದರೆ ಅದನ್ನೂ ಮೇಲಿಂದ ಸುರಿಯಿರಿ. ಪಾತ್ರೆಗೆ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಚಿಕನ್ ಸಂಪೂರ್ಣವಾಗಿ ಮೆದುವಾಗುವವರೆಗೆ ಬೇಯಿಸಿ.
ಕೊನೆಯಲ್ಲಿ ಕಸ್ತೂರಿ ಮೇತಿಯನ್ನು ಕೈಯಲ್ಲಿ ಹಿಸುಕಿ ಮೇಲಿಂದ ಉದುರಿಸಿ, ಸ್ವಲ್ಪ ಗರಂ ಮಸಾಲಾ ಹಾಕಿ 2 ನಿಮಿಷ ಕೈಯಾಡಿಸಿ ಸ್ಟವ್ ಆಫ್ ಮಾಡಿ.
ಬಿಸಿ ಬಿಸಿಯಾದ ನಾನ್, ರೋಟಿ ಅಥವಾ ಪುಲ್ಕಾ ಜತೆ ಸವಿಯಲು ಈ ಮಲೈ ಚಿಕನ್ ಅತ್ಯುತ್ತಮ ಜೋಡಿ. ಖಾರ ಕಡಿಮೆ ಇಷ್ಟಪಡುವವರಿಗೂ ಇದು ತುಂಬ ಇಷ್ಟವಾಗುತ್ತದೆ. ಈ ವಾರಾಂತ್ಯಕ್ಕೆ ಇದೊಂದು ಹೊಸ ರುಚಿಯನ್ನು ಟ್ರೈ ಮಾಡಿ



