ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ರೌಡಿಶೀಟರ್ಗಳಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ರೌಡಿ ಶೀಟರ್ ಪಟ್ಟಿಯಿಂದ ಸಾವಿರಾರು ರೌಡಿಗಳನ್ನ ಸರ್ಕಾರ ಕೈಬಿಟ್ಟಿರುವ ಬಗ್ಗೆ ಗೃಹ ಇಲಾಖೆಯಿಂದ ಮಾಹಿತಿ ನೀಡಿದೆ.
ವಿಧಾನಸಭೆಯಲ್ಲಿ ಶಾಸಕ ಗುರುರಾಜ್ ಗಂಟಿಹೊಳಿ ಪ್ರಶ್ನೆಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಲಿಖಿತ ಉತ್ತರ ನೀಡಿದ್ದು, 3 ವರ್ಷಗಳಲ್ಲಿ 25 ಸಾವಿರಕ್ಕೂ ಹೆಚ್ಚು ರೌಡಿಗಳಿಗೆ ರೌಡಿ ಶೀಟರ್ ಪಟ್ಟಿಯಿಂದ ಕೈಬಿಡಲಾಗಿದೆ.
ಪ್ರಸ್ತುತ ಇರುವ ಮಾನದಂಡದ ಅಡಿಯೇ ಕ್ರಮ ಕೈಗೊಂಡಿದ್ದೇವೆ ಅಂದಿದ್ದಾರೆ. ಅಲ್ಲದೆ, ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ 10 ಸಾವಿರಕ್ಕೂ ಹೆಚ್ಚು ಹೊಸ ರೌಡಿಗಳಿಗೆ ರೌಡಿ ಶೀಟ್ ಓಪನ್ ಮಾಡಿರೋದಾಗಿಯೂ ಹೇಳಿದೆ. ಅಂದಹಾಗೆ, ಬೆಂಗಳೂರು, ಕಲಬುರ್ಗಿ, ಮಂಡ್ಯ ಉತ್ತರ ಕನ್ನಡ, ಹುಬ್ಬಳ್ಳಿ, ರಾಯಚೂರಿನಲ್ಲಿ ಹೆಚ್ಚು ರೌಡಿಗಳು ಪಟ್ಟಿಯಿಂದ ಕೈಬಿಡಲಾಗಿದೆ.
ಯಾವ ಜಿಲ್ಲೆಗಳಿಂದ ಎಷ್ಟು ಕೇಸ್ ಡ್ರಾಪ್?
ಬೆಂಗಳೂರು – 2001 ಕೇಸ್
ಧಾರವಾಡ – 2676 ಕೇಸ್
ಕಲಬುರ್ಗಿ – 1173 ಕೇಸ್
ಮಂಡ್ಯ – 1131 ಕೇಸ್
ಉತ್ತರ ಕನ್ನಡ – 1085 ಕೇಸ್
ದಾವಣಗೆರೆ – 1161 ಕೇಸ್
ದಕ್ಷಿಣ ಕನ್ನಡ – 892 ಕೇಸ್
ಉಡುಪಿ – 893 ಕೇಸ್
ಬೀದರ್ – 756 ಕೇಸ್
ಹಾಸನ – 646 ಕೇಸ್

